#ಶಂಖ_ಪುಷ್ಪ ಒಂದು ಜಾತಿಯ ಹೂವು. ಆ ಹೂವಿನ ಅಂದ ಚಂದಕ್ಕೆ ಒಂದು ಕವನ, ರುಚಿಗೆ ಒಂದು ರೆಸಿಪಿಯನ್ನು ವಾಣಿ ರಾಜ್ ವರು ಓದುಗರಿಗೆ ತಿಳಿಸಿಕೊಟ್ಟಿದ್ದಾರೆ. ನೋಡುಗರಿಗೆ ಇದು ಹೊಸತು ಈ ಪಾನಕ. ಒಮ್ಮೆ ಮಾಡಿ ನೋಡಿ…ಮಾಡಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ…

(ವಾಣಿ ರಾಜ್ ಅವರ ಕ್ಯಾಮೆರಾ ಕಣ್ಣಲ್ಲಿ ಕ್ಲಿಕ್ಕಿಸಿದ ಶಂಖಪುಷ್ಪ)
ಒಂದು ಹೂವಿನ ಬೆರಗು….
ಇಷ್ಟು ಚೆಂದದ ಬಣ್ಣಕ್ಕೆ, ಮನ ಸೋಲದಿರುವುದುಂಟೇ…?
ನೈಜ ಬಣ್ಣ ಬರಿಸುವಾಗ, ಚಕಿತ ಆಗದಿರುವುದುಂಟೇ…?
ಹೂಗಳ ಬಣ್ಣ ರಸವಾಗಿ ತಿರುಗಿದಾಗ , ವಿಸ್ಮಯ ಪಡಲಾಗದಿರುವುದುಂಟೇ…?
ಕೃತಕವಲ್ಲದ ಪಾನೀಯ ಸೇವನೆಯಲ್ಲಿ, ತೃಪ್ತಿ ಕಾಣಲಾಗದಿರುವುದುಂಟೇ…?
ಬಾಲ್ಯದ ‘ಶಾಯಿ’ (ink) ನೀರಿನ ಪ್ರಯೋಗ (ಗರಟದಲ್ಲಿ(ತೆಂಗಿನ ಚಿಪ್ಪು) ದ ನೆನಪಾಗಿ, ಸಾವಿರ ನೆನಪಿಗೆ ಜಾರಲಾಗದಿರುವುದುಂಟೇ…?
ಹೂವಲ್ಲಿ ಅಡಗಿದ ಗುಟ್ಟು, ರಟ್ಟುಮಾಡಲಾಗದಿರುವುದುಂಟೇ…?
ಅಬ್ಬಾ!!!…ಎಷ್ಟು ಸೋಜಿಗವಲ್ಲವೇ? ಪ್ರಕೃತಿಯ ರಹಸ್ಯ….ಎಂದುವಣಿ೯ಸಲಾಗದಿರುವುದುಂಟೇ…?
ಯಾವ ಹೂವು ತಿಳಿಯಿತೇ? ಅದೇ ಹಸುರು ಬಳ್ಳಿಯ ಹಸುರೆಲೆಗಳ ನಡುವಲ್ಲಿ ಬಚ್ಚಿಟ್ಟುಕೊಳ್ಳುವ “ಶಂಖಪುಶ್ಪ” ಎಂದು ತಿಳಿಸಲಾಗದಿರುವುದುಂಟೇ..!!?
ಕೃತಕವಲ್ಲದ ಶರಬತ್ತಿನೊಂದಿಗೆ…
ಹೂವಿನ ಸರಳ ಪರಿಚಯ
ಹೆಸರು “ಶಂಖಪುಷ್ಪ”. ಬಳ್ಳಿಯಲ್ಲಿ ಅರಳುವ ಹೂವು. ಬೇರೆ ಬೇರೆ ಬಣ್ಣದಲ್ಲಿ ಕಾಣಸಿಗುವ ಸಿಂಗಲ್ಲು ಮತ್ತು ಡಬಲ್ಲು ಎಸಲುಗಳಲ್ಲಿ ಕೂಡಿರುವುದು ಹೂವು. ಬೇರಿನಿಂದ ಹೂವಿನವರೆಗೂ ಔಷಧಿ ಉಪಯುಕ್ತವಾಗಿದೆ. ಪೂಜೆಯಲ್ಲಿ ಅಗ್ರಪಂಕ್ತಿಯಲ್ಲಿದೆ. ಅಲಂಕಾರಕ್ಕೂ ಬಳಕೆಯಲ್ಲಿದೆ. ಗಿಡಬೆಳೆಸಲೂ ಸುಲಭವಾಗಿದೆ.

(ವಾಣಿ ರಾಜ್ ಅವರ ಕ್ಯಾಮೆರಾ ಕಣ್ಣಲ್ಲಿ ಕ್ಲಿಕ್ಕಿಸಿದ ಶಂಖಪುಷ್ಪ ಪಾನಕ)
ಬೇಕಾಗುವ ಸಾಮಗ್ರಿ :
- ೫ ರಿದ ೬ ಹೂವು
- ೧ ಕಪ್ ನೀರು
- ಒಂದು ಹನಿ ಲಿಂಬು ರಸ
- ರುಚಿಗೆ ಬಿಳೆ ಕಲ್ಲುಸಕ್ಕರೆ ಅಥವಾ ಸಕ್ಕರೆ
- ಪಾರದಶ೯ಕ ಗ್ಲಾಸ್

ಫೋಟೋ ಕೃಪೆ : Youtube
ಮಾಡುವ ವಿಧಾನ :
ಸ್ಟೋವ್ ಮೇಲೆ ನೀರು ಇಟ್ಟು ಕುದಿಯುವಾಗ, ಹೂವನ್ನು ಹಾಕಿ ಕುದಿಸಿ, ಒಂದು ಪಾತ್ರೆಗೆ ಸೋಸಿ, ಕಲ್ಲುಸಕ್ಕರೆ ಹಾಕಿ, ಅದು ತಣ್ಣಗಾದ ಮೇಲೆ, ಲಿಂಬು ಹನಿ ಸೇರಿಸಿದರೆ ಪಾನಕ ಆಯಿತು. ಇನ್ನೂ ಬಣ್ಣವನ್ನು ಸವಿಯಲು ಪಾರದಶ೯ಕ ಗ್ಲಾಸಿಗೆ ಬಗ್ಗಿಸಿ ಕಣ್ಣತುಂಬಿಕೊಂಡು ಒಂದು ಫೋಟೋ ಕ್ಲಿಕ್ಕಿಸಿದರೆ ಮುಗಿತು…ಕುಡಿಯಲೂ ಸಿದ್ಧವಾಯಿತು…..
“ಮನೆಯಂಗಳದಿ ಹಸುರಿಗೆ ಗಿಡ ಬೆಳೆಸಿ….ಶರಬತ್ತಿಗೆ ಹೂ ಬಳಸಿ….”
- ಕೈ ಚಳಕ : ವಾಣಿ ರಾಜ್ (ಯೋಗ ಶಿಕ್ಷಕರು, ಲೇಖಕರು)
