ಶೇಖರಗೌಡ ವೀ ಸರನಾಡಗೌಡರ್ ಕಿರು ಪರಿಚಯ

ಕತೆಗಾರ ಶೇಖರಗೌಡ ವೀ ಸರನಾಡಗೌಡರ್ ಅವರ ಸಾಹಿತ್ಯ ಲೋಕದಲ್ಲಿ ಅವರ ಸೇವೆಯ ಕಿರು ಪರಿಚಯ. ಆಕೃತಿಕನ್ನಡ ಅಂತರ್ಜಾಲ ಪತ್ರಿಕೆಯಲ್ಲಿ ಅವರ ಕಿರುಪರಿಚಯ ಪೂರ್ತಿಯಾಗಿ ಓದಿ…

ಹೆಸರು ಶೇಖರಗೌಡ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಎಂಬ ಗ್ರಾಮದಲ್ಲಿ ಶ್ರೀವೀರನಗೌಡ ಸರನಾಡಗೌಡರ್ ಮತ್ತು ಶ್ರೀಮತಿ ಲಕ್ಷ್ಮಮ್ಮ ಎಂಬ ಬಡ ರೈತಾಪಿ ದಂಪತಿಗಳಿಗೆ 1955 ಜೂನ್‍ 1 ರಂದು ಜನನ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗಿನಿಂದಲೇ ಸಾಹಿತ್ಯದ ಗೀಳು. ಕೃಷಿ ವಿಜ್ಞಾನದಲ್ಲಿ ಪದವಿ. ಪದವಿಯ ನಂತರ ಧಾರವಾಡಕ್ಕೆ ಸಮೀಪದ ಮುಗದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಒಂದು ವರ್ಷ ರೀಸರ್ಚ ಅಸಿಸ್ಟೆಂಟ್  ಎಂದು ಕೆಲಸ ಮಾಡಿದ ನಂತರ ಆಗಿನ ತುಂಗಭದ್ರಾ ಗ್ರಾಮೀಣ ಬ್ಯಾಂಕಿನಲ್ಲಿ (ಈಗಿನ ಕರ್ನಾಟಕ ಗ್ರಾಮೀಣ ಬ್ಯಾಂಕ್) ಅಧಿಕಾರಿ ಎಂದು ನಾಲ್ಕು ವರ್ಷ ಒಂದು ತಿಂಗಳವರೆಗೆ ಕೆಲಸ ಮಾಡಿದ್ದಿದೆ. ಕೃಷಿ ಪದವೀಧರನಾಗಿದ್ದುದರಿಂದ ಬ್ಯಾಂಕಿನಿಂ ಸ್ಪಾನ್ಸರ್ ಆಗಿದ್ದ ರೈತರ
ಸೇವಾ ಸಹಕಾರ ಸಂಘ ಹಚ್ಚೊಳ್ಳಿಯಲ್ಲಿ(ಸಿರಗುಪ್ಪಾ ತಾಲೂಕು, ಬಳ್ಳಾರಿ ಜಿಲ್ಲೆ) ವ್ಯವಸ್ಥಾಪಕ ನಿರ್ದೇಶಕ(ಮ್ಯಾನೇಜಿಂಗ್ ಡೈರೆಕ್ಟರ್) ಎಂದು ಕೆಲಸ ಮಾಡಿದ್ದರಿಂದ ಸಹಕಾರಿ ಕ್ಷೇತ್ರದ ಬಗ್ಗೆ ಅಪಾರ ಜ್ಞಾನಾಭಿವೃದ್ಧಿಗೆ ಸಹಕಾರಿಯಾಯಿತು. ನಂತರ 29-10-1982ರಂದು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‍ನಲ್ಲಿ ಕೃಷಿ ತಾಂತ್ರಿಕ ಅಧಿಕಾರಿ ಎಂದು ಸೇರ್ಪಡೆ. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‍ನಲ್ಲಿ ವಿವಿಧ ಅಧಿಕಾರಿ ಹುದ್ದೆಗಳನ್ನು ನಿರ್ವಹಿಸಿ 2015, 31 ಮೇ  ಮುಖ್ಯ ವ್ಯವಸ್ಥಾಪಕ(ಚೀಫ್ ಮ್ಯಾನೇಜರ್)ನೆಂದು ನಿವೃತ್ತಿ. ಓದಿದ್ದು ಕೃಷಿ
ವಿಜ್ಞಾನ, ಉದ್ಯೋಗ ಬ್ಯಾಂಕಿನಲ್ಲಿ, ಕೃಷಿ ಸಾಹಿತ್ಯದಲ್ಲಿ. ಸಾಹಿತ್ಯದ ಕೃಷಿ ಆರಂಭವಾಗಿದ್ದು ಎರಡು ಸಾವಿರದ ಹತ್ತರಿಂದ. ಇಲ್ಲಿಯವರೆಗೆ ಸಾಹಿತ್ಯದ ಬರವಣಿಗೆ ಮುಂದುವರಿದುಕೊಂಡು ಬಂದಿದೆ. ನಾಲ್ಕು ನೂರಾ ನಲವತ್ತು ಕಥೆಗಳು, ಹನ್ನೊಂದು ಕಾದಂಬರಿಗಳು, ನಲವತ್ತು ಲೇಖನಗಳು, ಹತ್ತು ಕವನಗಳು ರಚನೆಯಾಗಿವೆ. ಹನ್ನೆರಡನೆಯ ಕಾದಂಬರಿಯ ಬರವಣಿಗೆ ಮುಂದುವರಿದಿದೆ. ಕವನಗಳು: `ಡೈ ಎಂಬ ಕಪ್ಪು ಸುಂದರಿ’ ಮಯೂರ ಪತ್ರಿಕೆಯಲ್ಲಿ, `ಹುಯ್ಯೋ ಹುಯ್ಯೋ ಮಳೆರಾಯ’ ಪ್ರಜಾ ಸಮರ ಪತ್ರಿಕೆಯಲ್ಲಿ, ‘ಪ್ರೀತಿ ನಿರಂತರ’ ಕರ್ಮವೀರ ವಾರಪತ್ರಿಕೆಯಲ್ಲಿ, `ಧರೆ ಹತ್ತಿ ಉರಿದಡೆ’ ಮಿಂಚುಳ್ಳಿ ಸಾಹಿತ್ಯ ಪತ್ರಿಕೆಯ ಬ್ಲಾಗಲ್ಲಿ ಪ್ರಕಟವಾಗಿವೆ. ಇದುವರೆಗೆ ಸುಮಾರು ಮೂರು ನೂರಕ್ಕಿಂತಲೂ ಹೆಚ್ಚು ಕಥೆಗಳು ನಾಡಿನ ವಿವಿಧ
ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಹದಿಮೂರು ವರ್ಷಗಳ ಸಾಹಿತ್ಯ ಕೃಷಿಯಲ್ಲಿ ನನ್ನ ಸಾಹಿತ್ಯ ಕೃತಿಗಳು ಈ ಕೆಳಗಿನಂತಿವೆ :

ಪ್ರಕಟವಾದ ಕಥಾ ಸಂಕಲನಗಳು :

1) ಮಂದಾರ(22 ಕಥೆಗಳು)
2) ಹುಚ್ಚು ಮನಸೇ ನೀ ಹಿಂಗ್ಯಾಕ..(20 ಕಥೆಗಳು)
3) ಹೊಸ ಬೆಳಕು(15 ಕಥೆಗಳು)
4) ಒಲವೇ ಜೀವನ ಸಾಕ್ಷಾತ್ಕಾರ(15 ಕಥೆಗಳು)
5) ಅಂತರಗಂಗೆ(25 ಕಥೆಗಳು)
6) ವಸುಂಧರೆ ಹಸಿರಾದಾಗ(25 ಕಥೆಗಳು)
7) ಕಲ್ಲಾಗು ಕಷ್ಟಗಳ ಮಳೆ ಸುರಿಯೆ(25 ಕಥೆಗಳು)
8) ಗೊಂಬೆ ಆಡ್ಸೋನು(25 ಕಥೆಗಳು
9) ಒಲವೆಂಬ ನದಿ ಹರಿದಾಗ(25 ಕಥೆಗಳು)
10) ಜೀವನ ತಿರುವುಗಳ ಮಾನಸ ಸರೋವರ(20 ಕಥೆಗಳು)
11) ಮಂದಾಕಿನಿ ಮತ್ತು ಇತರ ಕಥೆಗಳು (20 ಕಥೆಗಳು)
12) ಸಂಧ್ಯಾ ಸಮಯಕ್ಕೆ ಉದಯ ರವಿಯ ಮೆರುಗು(20 ಕಥೆಗಳು)
13) ಮಾತು ಮರೆತ ಮನಸುಗಳು(20 ಕಥೆಗಳು)
14) ಜೋಡಿ ಗುಬ್ಬಿ-20 ಕಥೆಗಳು
15) ಭಾವದೊಳಗೆ ಭಾವವಾಗಿ-ಆಯ್ದ ಕಥೆಗಳು -22 ಕಥೆಗಳು
16) ಭರವಸೆಯ ಬೆಳಕು-ಆಯ್ದ ಕಥೆಗಳು -22 ಕಥೆಗಳು
17) ನಗುವ ಚೆಲ್ಲುವ ಕನಸು -20 ಕಥೆಗಳು
18) ಧನ್ಯತೆಯ ಭಾವ -20 ಕಥೆಗಳು
19) ಬಂದೇ ಬರುತಾವ ಕಾಲ-ಆಯ್ದ ಕಥೆಗಳು -20 ಕಥೆಗಳು
20) ಅಪೂರ್ವ ಸಮಾಗಮ -30 ಕಥೆಗಳು
21) ಮಂದಾರ-ಎರಡನೇ ಆವೃತ್ತಿ
22) ಹುಚ್ಚು ಮನಸೇ ನೀ ಹಿಂಗ್ಯಾಕ…?-ಎರಡನೇ ಆವೃತ್ತಿ
23) ಮದುಡಿ ಅರಳಿದ ಮೊಗ್ಗು-20 ಕಥೆಗಳು
24) ಕಾಂಚನಗಂಗಾ-ಆಯ್ದ ಕಥೆಗಳು-25 ಕಥೆಗಳು
25) ನಿವೇದ್ಯ-ಆಯ್ದ ಕಥೆಗಳು-25 ಕಥೆಗಳು
26) ಜನನಿ ಜನ್ಮ ಭೂಮಿಶ್ಚ-ಆಯ್ದ ಕಥೆಗಳು -25 ಕಥೆಗಳು
27) ಮಧುರ ಪ್ರೇಮ ಕಹಿಯಾದಾಗ – ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಕಥೆಗಳು -21 ಕಥೆಗಳು
28) ಎದೆಯೊಳಗಿನ ಕಿಚ್ಚು – ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಕಥೆಗಳು -21 ಕಥೆಗಳು
29) ಮಧುರ ಮನದ ಮಿಡಿತಗಳು -20 ಕಥೆಗಳು
30) ಜೀನ್ಸ್-ಆಯ್ದ ನೀಳ್ಗತೆಗಳ ಕಥಾ ಸಂಕಲನ -25 ಕಥೆಗಳು
31) ನೀನಿಲ್ಲವೆಂದರೆ… – ಆಯ್ದ ನೀಳ್ಗತೆಗಳ ಕಥಾ ಸಂಕಲನ-25 ಕಥೆಗಳು

ಪ್ರಕಟವಾದ ಕಾದಂಬರಿಗಳು :
1) ಪ್ರೀತಿಯ ಆಯಸ್ಕಾಂತ
2) ಮಧುರ ಮಧುರವೀ ಮಂಜುಳಗಾನ
3) ತಮಸೋಮಾ ಜ್ಯೋತಿರ್ಗಮಯಾ
4) ಎತ್ತಣ ಮಾಮರ ಎತ್ತಣ ಕೋಗಿಲೆ
5) ಹೆಜ್ಜೆ ಮುಗ್ಗರಿಸಿದಾಗ…
6) ನೆಲಸೇರಿದ ಎಲೆಮೇಲಿನ ಹನಿ
7) ಕಾಡಹಾದಿಯ ನಡುವೆ ಬದುಕಿನ ಬಿಂಬಗಳು
8) ಚೈತ್ರದ ಚಿಗುರು
9) ರಮ್ಯ ಚೈತ್ರ ಕಾಲ-ಪ್ರೀತಿಯ ಆಯಸ್ಕಾಂತ ಕಾದಂಬರಿಯ ಹೊಸ ಶೀರ್ಷಿಕೆ
10) ಕಾಲಗರ್ಭದಲ್ಲಿ ಹುದುಗಿದ ರಹಸ್ಯಗಳು
11) ಮದುಡಿ ಅರಳಿದ ಹೂ
12) ಮಧುರ ಮಧುರವೀ ಮಂಜುಳಗಾನ-ಎರಡನೇ ಆವೃತ್ತಿ
13) ತಮಸೋಮಾ ಜ್ಯೋತಿರ್ಗಮಾ-ಎರಡನೇ ಆವೃತ್ತಿ
ಅಚ್ಚಿನಲ್ಲಿರುವ ಕಥಾ ಸಂಕಲನಗಳು :

2024 :

1) ಕೊಳಕಣ್ಣಿ ಬಿಚ್ಚಿಕೊಂಡ ಕರು–20 ಕಥೆಗಳು
2) ತಂಬೆಲರು–20 ಕಥೆಗಳು
3) ಗುರುತು ಮೂಡಿಸಿದ ಹೆಜ್ಜೆಗಳು

ಅಚ್ಚಿನಲ್ಲಿರುವ ಕಾದಂಬರಿಗಳು :

1) ಬಾಳ ಪಗಡೆಯಾಟ
2) ಎತ್ತಣ ಮಾಮರ ಎತ್ತಣ ಕೋಗಿಲೆ-ಎರಡನೇ ಆವೃತ್ತಿ ಮೂರು ನೂರಕ್ಕಿಂತಲೂ ಹೆಚ್ಚಿನ ಕಥೆಗಳು ರಾಜ್ಯದ ಪ್ರಸಿದ್ಧ ಪತ್ರಿಕೆಗಳಾದ ಕರ್ಮವೀರ, ಸುಧಾ, ಮಂಗಳ, ಪ್ರಿಯಾಂಕ, ತರಂಗ, ಕಸ್ತೂರಿ, ರಾಯಚೂರು ವಾಣಿ, ಪ್ರಜಾ ಸಮರ, ಪ್ರಜಾವಾಣಿ, ಗೃಹಶೋಭಾ, ಮಿಂಚುಳ್ಳಿ, ಪ್ರತಿಸೃಷ್ಟಿ, ಬೆಂಕಿ ಬೆಳಕು, ಸುದ್ದಿ ಮೂಲ, ಟೀಚರ್ಸ್ ನ್ಯೂಸ್, ಸರ್ವಜನ್ ಸಂಗಾತಿ,
ಜನಕೂಗು, ರಾಯಚೂರು ಖಡ್ಗ, ಬೆಂಕಿಯ ಬಲೆ, ಸಂಜೆವಾಣಿ, ಸ್ತ್ರೀ ಜಾಗೃತಿ, ಉದಯ ಕಾಲ, ಗಹನ, ನವೋದಯ, ನೈರುತ್ಯ, ನಿಮ್ಮೆಲ್ಲರ ಮಾನಸ, ಪ್ರಜಾರಂಗ, ಓ ಮನಸೇ, ಸಮಾಜ ಮುಖಿ, ವಿಶ್ವ ಧ್ವನಿ ಬ್ಲಾಗ್, ಧಾರವಾಡ ಕಟ್ಟೆ, ಮುಂತಾದವುಗಳಲ್ಲಿ ಪ್ರಕಟವಾಗಿವೆ. ಕೆಲವು ಲೇಖನಗಳು ಬಸವ ಮಾರ್ಗ, ಸುಧಾ, ಪ್ರಜಾವಾಣಿ, ಉದಯವಾಣಿ, ಬೆಂಕಿ ಬೆಳಕು, ಸಂಜೆವಾಣಿ ಮತ್ತು ಪ್ರಜಾಸಮರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

2018ರಲ್ಲಿ ಹದಿನೈದು ಕಥೆಗಳು, ಒಂದು ಕವನ, ಎರಡು ಲೇಖನಗಳು; 2019ರಲ್ಲಿ ಹದಿನೇಳು ಕಥೆಗಳು, ಒಂದು ಲೇಖನ, 2020ರಲ್ಲಿ ಹದಿನೆಂಟು ಕಥೆಗಳು, 2021ರಲ್ಲಿ ಇಪ್ಪತ್ತು ಕಥೆಗಳು, 2022ರಲ್ಲಿ 17 ಕಥೆಗಳು, 2023ರಲ್ಲಿ ಮೂವತ್ತಾರು ಕಥೆಗಳು, 2024ರಲ್ಲಿ 40 ಕಥೆಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಎಂಬುದನ್ನು ತಿಳಿಸಲು ಹೆಮ್ಮೆ ಎನಿಸುತ್ತಿದೆ.

“ತಮಸೋಮಾ ಜ್ಯೋತಿರ್ಗಮಾ” ರಾಜ್ಯದ ಹೆಸರಾಂತ ವಾರಪತ್ರಿಕೆಯಾದ ಕಾದಂಬರಿಯು ಕರ್ಮವೀರದಲ್ಲಿ “ಹೃದಯ ಸಮುದ್ರ ಕಲಕಿ…” ಎಂಬ ಶೀರ್ಷಿಕೆಯಲ್ಲಿ ಎಪ್ರಿಲ್ 2014ರಿಂದ ಸಪ್ಟೆಂಬರ್ 2014ರವರೆಗೆ ಇಪ್ಪತ್ನಾಲ್ಕು ಕಂತುಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ.

“ಹೆಜ್ಜೆ ಮುಗ್ಗರಿಸಿದಾಗ…” ಕಾದಂಬರಿಯು “ಅತಿ ಮಧುರ ಅನುರಾಗ” ಎಂಬ ಶೀರ್ಷಿಕೆಯಲ್ಲಿ ಕರ್ಮವೀರ ವಾರಪತ್ರಿಕೆಯಲ್ಲಿ ಜನೇವರಿ 23, 2022ರ ಸಂಚಿಕೆಯಿಂದ ಜುಲೈ 24, 2022ರವರೆಗೆ 25 ವಾರಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿದೆ.

This slideshow requires JavaScript.

 

ಐತಿಹಾಸಿಕ/ಪೌರಾಣಿಕ ಕಥೆಗಳು :

1) ಜಲದುರ್ಗದ ಜೊಹರಾ-ಪ್ರಕಟಣೆ-ಕರ್ಮವೀರ-02-09-2012
2) ನೂರ್ ಜಹಾನ್-ಪ್ರಕಟಣೆ-ಕರ್ಮವೀರ-03-03-2013
3) ಸುರಪುರದ ರಾಣಿ ಈಶ್ವರಮ್ಮ-ಪ್ರಕಟಣೆ-ಪ್ರಜಾ ಸಮರ-15-09-2012
4) ಕುಮ್ಮಟದುರ್ಗದ ಕೈಕೇಯಿ ರಾಣಿ ರತ್ನಾಜಿ-ಪ್ರಕಟಣೆ-ಪ್ರಜಾ ಸಮರ-15-09-2013
5) ಕುಮ್ಮಟದುರ್ಗಕ್ಕೆ ಕಂಟಕಿಯಾದ ಮಾತಂಗೀದೇವಿ
6) ಗಂಡಗಲಿ ಕುಮಾರರಾಮ-ಪ್ರಕಟಣೆ-ಕರ್ಮವೀರ-19-11-2017
8) ಶ್ರೀಕೃಷ್ಣನ ಕೊನೆಯ ದಿನಗಳು-ಉದಯ ಕಾಲ-ದೀಪಾವಳಿ ವಿಶೇಷಾಂಕ-2021
9) ರೂಹಿಲ್ಲದ ಚೆಲುವೆ-ಪ್ರಿಯಾಂಕ ಮಾಸ ಪತ್ರಿಕೆ-ಫೆಬ್ರುವರಿ 2022
10) ನೆಲ ಕಚ್ಚಿದ ಸಾಮ್ರಾಜ್ಯ
11) ನವಿರು ಪ್ರೇಮ-ಪ್ರಕಟಣೆ-ತರಂಗ-05-112020
12) ಮತ್ಸ್ಯಗಂಧಿ-ಕಸ್ತೂರಿ ಮಾಸ ಪತ್ರಿಕೆ-ಜುಲೈ 2023
14) ಗಾಂಧಾರಿ–ಕರ್ಮವೀರ ವಾರಪತ್ರಿಕೆಯ ದೀಪಾವಳಿ 2023ರ ವಿಶೇಷಾಂಕದಲ್ಲಿ ಎರಡನೇ ಬಹುಮಾನ ಪಡೆದ ಕಥೆ.
15) ಅಹಲ್ಯಾ

ಪ್ರಶಸ್ತಿಗಳು/ಸನ್ಮಾನ :

1) ಬೆಂಗಳೂರಿನ “ಲೇಖಿಕಾ ಸಾಹಿತ್ಯ ವೇದಿಕೆ”ಯವರು ಏರ್ಪಡಿಸಿದ್ದ ಕಥಾಸ್ಪರ್ಧೆ 2011ರಲ್ಲಿ ಬರೆದ ಕಥೆ, `ದೀಪಾವಳಿ’ಗೆ ಮೂರನೇ ಬಹುಮಾನ.

2) ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮುಖ್ಯ ಕಚೇರಿ ಹೈದರಾಬಾದ್ ಇವರು 2012ರಲ್ಲಿ ಏರ್ಪಡಿಸಿದ್ದ “ಎಸ್.ಬಿ.ಎಚ್. ರಚನಾ 2012” ರ ಕಥಾ ಸ್ಪರ್ಧೆಯಲ್ಲಿ, `ಇಂಚರಾ ಸದ್ಭವ್-ಅಂಕಿತಾ’ ಕಥೆಗೆ ಮೊದಲ ಬಹುಮಾನ ಮತ್ತು ಹೈದರಾಬಾದಿನಲ್ಲಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ.

3) ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ(ರಿ) ಬೀದರ್‍ದವರಿಂದ 2015ರಲ್ಲಿ, “ಅಪ್ರತಿಮ ಕಥೆಗಾರ ಶ್ರೀ” ಪ್ರಶಸ್ತಿ.

4) ಸರದೇಶಪಾಂಡೆ ಪ್ರತಿಷ್ಠಾನ ಧಾರವಾಡದವರು 2014ರಲ್ಲಿ ಏರ್ಪಡಿಸಿದ್ದ ಕಥಾಸ್ಪರ್ಧೆ(ಸೈನಿಕರ ಬಗ್ಗೆ)ಯಲ್ಲಿ, `ಒಬ್ಬ ಕಾರ್ಗಿಲ್ ಯೋಧನ ಬಾಳ ಕಥೆ ವ್ಯಥೆ’ ಎಂಬ ಕಥೆಗೆ ಸಮಾಧಾನಕರ ಬಹುಮಾನ.

5) ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ನಿವೃತ್ತ ನೌಕರರ ಸಂಘ ಬೆಂಗಳೂರು ಇವರಿಂದ ಮೇ 2018ರಲ್ಲಿ ಸನ್ಮಾನ.

6) 2019ರ ಗಣರಾಜ್ಯೋತ್ವವ ದಿನಾಚರಣೆಯ ದಿನದಂದು ತಾವರಗೇರಾ ಪಟ್ಟಣದ ಆಗಿನ ಪೋಲೀಸ್ ಸಬ್ ಇನ್ಸಪೆಕ್ಟರ್ ಶ್ರೀ ಮಹಾಂತೇಶ್ ಸಜ್ಜನ್(ಈಗ ಅವರು ಸಿಪಿಐ) ಅವರಿಂದ ಸನ್ಮಾನ.

7) 2019ರ ಗಣರಾಜ್ಯೋತ್ವವ ದಿನಾಚರಣೆಯ ದಿನದಂದು ತಾವರಗೇರಾ ಪಟ್ಟಣದ ಸ್ಫೂರ್ತಿ ಯುವಕ ಮಂಡಳದಿಂದ ಸನ್ಮಾನ.

8) ಕಲಬುರಗಿಯಲ್ಲಿ ಜರುಗಿದ 85ನೇ ಅಖಿಲ ಭಾರತ ಸಾಹಿತ್ಯ ಸಮೇಳನದಲ್ಲಿ ದಿನಾಂಕ 06 -02-2020ರಂದು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರಿಂದ ಸನ್ಮಾನ.

9) ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ನಿವೃತ್ತ ನೌಕರರ ಸಂಘ ರಾಯಚೂರು ಇವರಿಂದ ಫೆಬ್ರುವರಿ 2020ರಲ್ಲಿ ಸನ್ಮಾನ.

10) ಕರ್ನಾಟಕ ರಾಜ್ಯ ಬರಹಗಾರರ ಸಂಘ : ಘಟಕ ಹೂವಿನ ಹಡಗಲಿ ಇವರಿಂದ ಫೆಬ್ರುವರಿ 2021 ರಲ್ಲಿ, “ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ-2021” ಪ್ರದಾನ ಮತ್ತು ಸನ್ಮಾನ.

11) 03-03-2021ರಂದು ಗುಮಗೇರಾ ಗ್ರಾಮದಲ್ಲಿ ಜರುಗಿದ ಕುಷ್ಟಗಿ ತಾಲೂಕಿನ 12ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟ.

12) ಶ್ರೀ ರುದ್ರಗೌಡ ಪಾಟೀಲ್ ಸಿಂಧನೂರು ಇವರ ಪುಣ್ಯ ಸ್ಮರಣಾರ್ಥ ಏರ್ಪಡಿಸಿದ್ದ, “ರಾಜ್ಯಮಟ್ಟದ ಮುಕ್ತ ಕಥಾಸ್ಪರ್ಧೆ-2021” ರಲ್ಲಿ, `ಜನನೀ ಜನ್ಮ ಭೂಮಿಶ್ಚ…’ ಕಥೆಗೆ ಮೆಚ್ಚುಗೆ
ಬಹುಮಾನ ಮತ್ತು ಸನ್ಮಾನ ದಿನಾಂಕ 07-03-2021.

14) ಮಂದಾರ ಕಲಾವಿದರ ವೇದಿಕೆ ಬೀದರ್ ಇವರಿಂದ ರಾಜ್ಯಮಟ್ಟದ ಪ್ರಶಸ್ತಿ, “ಕರ್ನಾಟಕ ಕಥಾ ಭೂಷಣ ರತ್ನ ಪ್ರಶಸ್ತಿ” ಪ್ರದಾನ ಮತ್ತು ಸನ್ಮಾನ ದಿನಾಂಕ 21-03-2021ರಂದು.

15) 15-08-2022ರ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಪಟ್ಟಣ ಪಂಚಾಯತ್ ತಾವರಗೇರಾ ಇವರಿಂದ ಸನ್ಮಾನ.

16) 01-09-2022ರಂದು ತಾವರಗೇರಾದ ಲಿಯೋ ಯುಥ್ ಕ್ಲಬ್ ತಾವರಗೇರಾ ಇವರಿಂದ ಸನ್ಮಾನ(ಶ್ರೀಗಣೇಶ್ ಹಬ್ಬದ ಪ್ರಯುಕ್ತ). ಕಥೆ, ಕಾದಂಬರಿಗಳಿಗೆ ಪತ್ನಿ ಅಕ್ಕಮಹಾದೇವಿ ಮೊದಲ ಓದುಗಳು. ತಿದ್ದುಪಡಿ, ಪ್ರೋತ್ಸಾಹ ಎಲ್ಲಾ ಅವಳದೇ. ಮಕ್ಕಳಾದ ಕಿರಣ್, ಸಂತೋಷ್, ಅನುಪಮಾ; ಅಳಿಯ ವಿಜಯ್‍ರೆಡ್ಡಿ ಮತ್ತು ಸೊಸೆಯಂದಿರಾದ ವಿದ್ಯಾ ಮತ್ತು ವೀಣಾ ಅವರಿಗೂ ಸಾಹಿತ್ಯದ ಒಲವಿದೆ. ನನ್ನ ಸಾಹಿತ್ಯ ಕೃಷಿಗೆ ಇವರೆಲ್ಲರ ಪ್ರೋತ್ಸಾಹ ನಿರಂತರವಾಗಿದೆ. ಜೊತೆಗೆ ಪ್ರಕಾಶಕರ, ಪತ್ರಿಕಾ ಮಾಧ್ಯಮದ ಪ್ರೋತ್ಸಾಹವೇ ನನ್ನ ಸಾಹಿತ್ಯ ಕೃಷಿಗೆ ಮೂಲ. ಸಾಹಿತ್ಯಾಭಿಮಾನಿಗಳ ಬರವಣಿಗೆಯ ಜೊತೆಗೆ ಸಾಹಿತ್ಯ ಕೃತಿಗಳ ಓದು ಮುಂದುವರಿದಿದೆ.

ಸದ್ಯ ನಿಜವಾಗಿಯೂ ಮೂಲ ಕೃಷಿ ಮತ್ತು ಸಾಹಿತ್ಯಕೃಷಿಯಲ್ಲಿ ನಿರತನಾಗಿರುವೆ.


  • ಶೇಖರಗೌಡ ವೀ ಸರನಾಡಗೌಡರ್ – (ನಿವೃತ್ತ ಮುಖ್ಯ ವ್ಯವಸ್ಥಾಪಕರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್),ತಾವರಗೇರಾ, ತಾ: ಕುಷ್ಟಗಿ, ಜಿ: ಕೊಪ್ಪಳ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW