“ಕವಿಗಳ ಕಾವ್ಯ ನಮನ” ವಿಶ್ವ ದಾಖಲೆಯ ಕಾರ್ಯಕ್ರಮದಲ್ಲಿ ಲೇಖಕ ಪ್ರವೀಣ್ ಎಂ ಹೊಸಮನಿ ಅವರಿಗೆ ಜ್ಞಾನ ಯೋಗಾಶ್ರಮ ಪ್ರಮಾಣ ಪತ್ರ ಸಂದಿದ್ದು, ಅವರಿಗೆ ಆಕೃತಿಕನ್ನಡ ಅಭಿನಂದನೆ ಸಲ್ಲಿಸುತ್ತದೆ.
ಕನ್ನಡ ಬುಕ್ ಆಫ್ ರಿಕಾರ್ಡ್ಸ್ ಮತ್ತು ಯುನಿವರ್ಸಲ್ ಅಚೀವರ್ಸ್ ಬುಕ್ ಆಫ್ ರಿಕಾರ್ಡ್ಸ್ ಚೆನೈ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶತಮಾನದ ಸಂತ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿ “ಕವಿಗಳ ಕಾವ್ಯ ನಮನ” ವಿಶ್ವ ದಾಖಲೆಯ ಕಾರ್ಯಕ್ರಮದಲ್ಲಿ ಪ್ರವೀಣ್ ಹೊಸಮನಿ ಅವರು ಭಾಗವಹಿಸಿ, ಅವರು ವಿಜಯಪುರದಲ್ಲಿ ಜ್ಞಾನ ಯೋಗಾಶ್ರಮ ಪ್ರಮಾಣ ಪತ್ರ ಸ್ವೀಕರಿಸಿದರು.
ಶ್ರೀ ಪರಮಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳ ಕುರಿತು ಪ್ರಬಂಧ ಹಾಗೂ ಕವನವನ್ನು ಏಕಕಾಲದಲ್ಲಿ ರಾಜ್ಯ , ಹೊರ ರಾಜ್ಯ ಹಾಗೂ ಜಿಲ್ಲಾವಾರುಗಳಿಂದ ಸುಮಾರ 500 ಆಸಕ್ತ ಕವಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಏಕಕಾಲದಲ್ಲಿ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಜಿಯವರ ಬಗ್ಗೆ ಹಾಗೂ ಅವರ ಜೀವನಾಧಾರಿತ ಕುರಿತು ಕವನ, ಪ್ರಬಂಧ ಬರೆಯುವ ಸ್ಪರ್ಧೆಯಿದಾಗಿತ್ತು.
- ಆಕೃತಿನ್ಯೂಸ್