ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 2021, ಮತ್ತು 2022 ನೇ ಸಾಲಿನ ‘ಉಮಾಶಂಕರ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ’ಗಾಗಿ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.ಹೆಚ್ಚಿನ ಮಾಹಿತಿ ಕೆಳಗಿನಂತಿದೆ ತಪ್ಪದೆ ಓದಿ…

ಪ್ರಶಸ್ತಿಯು ಮೂರು ಸಾವಿರ ರೂ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿರುತ್ತದೆ. ಇದರೊಂದಿಗೆ 2021 ರ ಮತ್ತು 2022 ರ ಎರಡೂ ವರ್ಷಗಳಿಗೆ ಬೇರೆ ಬೇರೆಯಾಗಿ ಐದು ಪುಸ್ತಕಗಳಿಗೆ ಪ್ರತ್ಯೇಕವಾಗಿ ಪ್ರೋತ್ಸಾಹಕ ಪ್ರಶಸ್ತಿ ( ನಗದು ರಹಿತ)ಗಳನ್ನು ಪ್ರದಾನ ಮಾಡಲಾಗುತ್ತದೆ. ಪ್ರೋತ್ಸಾಹಕ ಪ್ರಶಸ್ತಿಗಳು ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ಮತ್ತು ಗೌರವ ಸಮರ್ಪಣೆಯನ್ನು ಒಳಗೊಂಡಿರುತ್ತವೆ.

ಎಪ್ರಿಲ್/ ಮೇ ನಂತರ ಬೆಳಗಾವಿಯಲ್ಲಿ ನಡೆಯುವ ಭಾವ ಸಂಗಮ ಸಮಾಗಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದವರು ಕಾರ್ಯಕ್ರಮದಲ್ಲಿ ಸ್ವತಃ ಪಾಲ್ಗೊಳ್ಳುವುದು ಕಡ್ಡಾಯ. ( ಬರದಿದ್ದಲ್ಲಿ ಪುರಸ್ಕೃತರ ಮನೆಗೆ ತೆರಳಿ ಪ್ರದಾನ ಮಾಡುವ, ಅಂಚೆಯಲ್ಲಿ ಕಳಿಸುವ ಔಪಚಾರಿಕತೆಗೆ ಅವಕಾಶ ಇಲ್ಲ. ಅವರ ಪ್ರಶಸ್ತಿ ರದ್ದಾಗುತ್ತದೆ – ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ).

2021 ಮತ್ತು 2022 ರಲ್ಲಿ ಪ್ರಕಾಶನಗೊಂಡ ಪುಸ್ತಕಗಳನ್ನು ಪ್ರತ್ಯೇಕವಾಗಿಯೇ ಪರಿಗಣಿಸಲಾಗುತ್ತದೆ. ಕಥಾ ಸಂಕಲನ, ಕವನ ಸಂಕಲನ, ಕಾದಂಬರಿ, ಪ್ರವಾಸ ಸಾಹಿತ್ಯ, ನಾಟಕ, ಚುಟುಕು ಸಂಕಲನ, ಗಜಲ್ ಸಂಕಲನ, ಹಾಯ್ಕು ಸಂಕಲನ, ಟಂಕಾ ಸಂಕಲನ, ವಿಮರ್ಶಾ ಕೃತಿ, ವ್ಯಂಗ್ಯ ಚಿತ್ರ ಸಂಕಲನ, ವ್ಯಕ್ತಿಚಿತ್ರ, ಲಲಿತ ಪ್ರಬಂಧ, ಸಂಪಾದಿತ ಕೃತಿ, ಲೇಖನ ಸಂಕಲನ , ಮಕ್ಕಳ ಸಾಹಿತ್ಯ ಮತ್ತು ಎಲ್ಲ ಪ್ರಕಾರದ ಕೃತಿಗಳನ್ನು (ತಲಾ ಒಂದು ಪ್ರತಿ ಮಾತ್ರ) 30.04.2023 ರೊಳಗೆ ತಲುಪುವಂತೆ ” ರಾಜೇಂದ್ರ ಪಾಟೀಲ, ನಂ.101, ಮೊದಲ ಮಹಡಿ, ಶ್ರೀ ಗುರೂಜಿ ಎನ್ಕ್ಲೇವ್ ಅಪಾರ್ಟ್ಮೆಂಟ್, ಗ್ರೀನ್ ಪಾರ್ಕ್, ಸರಸ್ವತಿಪುರಂ, ಕುಸುಗಲ್ಲ ರಸ್ತೆ, ಕೇಶ್ವಾಪುರ , ಹುಬ್ಬಳ್ಳಿ-580023 ( ಮೊ: 9148391546) ಈ ವಿಳಾಸಕ್ಕೆ ಕಡ್ಡಾಯವಾಗಿ ರಜಿಸ್ಟರ್ಡ್ ಅಂಚೆ ಅಥವಾ ಕೊರಿಯರ್ ಮೂಲಕವೇ ಕಳಿಸಲು ಉಮಾಶಂಕರ ಪ್ರತಿಷ್ಠಾನದ ಸಂಚಾಲಕರು ಕೋರಿದ್ದಾರೆ.


  • ರಾಜೇಂದ್ರ ಪಾಟೀಲ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW