ಸಿಗಂದೂರು ಅಥವಾ ತುಮರಿ ಸೇತುವೆ

ಶರಾವತಿ ನದಿ ಹಿನ್ನೀರಿನ ಸೇತುವೆಗೆ ಸ್ಥಳೀಯ ಜನ ಹೊಳೆಬಾಗಿಲು ಸೇತುವೆ, ತುಮರಿ ಸೇತುವೆ, ಕಳಸವಳ್ಳಿ ಸೇತುವೆ, ಅಂಬಾರಗೊಡಲು ಸೇತುವೆ, ಕರೂರು ಸೇತುವೆ ಅಂತ ಅವರವರ ಇಷ್ಟದಂತೆ ಕರೆಯುತ್ತಾರೆ. ಇದು ಒಟ್ಟು 2.16 ಕಿಲೋ ಮೀಟರ್‌ ಉದ್ದ ಮತ್ತು 16 ಮೀಟರ್‌ ಅಗಲದ 5 ಸ್ಪಾನ್‌ ಕೇಬಲ್‌ ಆಧಾರಿತ ಈ ಸೇತುವೆ ರಾಜ್ಯದ ಎರಡನೇಯ ಅತಿ ದೊಡ್ಡ ಸೇತುವೆಯಾಗಿದೆ.

ಸಿಗಂದೂರು ಸೇತುವೆ? ತುಮರಿ ಸೇತುವೆ? ಈ ಎರಡು ಹೆಸರಲ್ಲಿ ಯಾವುದು? ಈ ಸೇತುವೆಗೆ ಅಂತಿಮ ನಾಮಕರಣ ಮಾಡುತ್ತಾರೆ ಅಥವಾ ಎಸ್ಟಿಮೇಟಿನಲ್ಲಿರುವ ಹೆಸರೇ ಅಂತಿಮವಾ? ಈ ಸೇತುವೆ ರಾಜ್ಯದ ಎರಡನೇ ಅತಿ ಉದ್ದದ ಸೇತುವೆ. ಈ ಸೇತುವೆಗಾಗಿ ಅನೇಕ ಜನಪರ ಹೋರಾಟ ನಡೆದಿತ್ತು. ಶರಾವತಿ ನದಿಗೆ ಆಣೆಕಟ್ಟು ಕಟ್ಟುವಾಗಲೇ ಇಲ್ಲೊಂದು ಸೇತುವೆಗೆ ಬೇಡಿಕೆ ಇತ್ತು. ಜನರ ಬೇಡಿಕೆ ವಿಳಂಬವಾದರೂ ಈಡೇರಿದೆ.

ಸಿಗಂದೂರು ಸೇತುವೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಮುಳುಗಡೆ ಪ್ರದೇಶದ ಜನರ ಹಲವು ದಶಕಗಳ ಬೇಡಿಕೆಯಾಗಿದೆ. ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸೇತುವೆ ನಿರ್ಮಾಣವಾಗುತ್ತಿದೆ. 2018ರಲ್ಲಿ ಶಂಕಸ್ಥಾಪನೆಗೊಂಡ ಕಾಮಗಾರಿ 2025ರಲ್ಲಿ ಉದ್ಘಾಟನೆಯಾಗುವ ನಿರೀಕ್ಷೆ ಇದೆ. ಇದರಿಂದಾಗಿ ಈ ಭಾಗದ ಪ್ರವಾಸೋದ್ಯಮಕ್ಕೂ ಸಹ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಒಟ್ಟು 2.16 ಕಿಲೋ ಮೀಟರ್‌ ಉದ್ದ ಮತ್ತು 16 ಮೀಟರ್‌ ಅಗಲದ 5 ಸ್ಪಾನ್‌ ಕೇಬಲ್‌ ಆಧಾರಿತ ಈ ಸೇತುವೆ ರಾಜ್ಯದ ಎರಡನೇಯ ಅತಿ ದೊಡ್ಡ ಸೇತುವೆಯಾಗಿದೆ.

ಫೋಟೋ ಕೃಪೆ :google

ಲಕ್ಷಾಂತರ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿರುವ ನಿಸರ್ಗರಮಣೀಯ ಸಿಗಂದೂರು ಶ್ರೀ ಚೌಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬರುವ ಯಾತ್ರಾತ್ರಿಗಳಿಗೆ ಹಾಗೂ ದಕ್ಷಿಣ ಭಾರತದ ಎವರೆಸ್ಟ್ ಎನ್ನುವ ಕೊಡಚಾದ್ರಿ ಗಿರಿ ಶಿಖರಕ್ಕೆ ಹೋಗುವವರಿಗೆ ಈ ಹಿನ್ನೀರ ಈ ಸೇತುವೆ ಅತೀ ಸಮೀಪದ ಸಂಪರ್ಕ ಕೊಂಡಿಯಾಗಿದೆ.

ಒಂದೇ ದಿನದಲ್ಲಿ ಜೋಗ್ ಜಲಪಾತ – ಸಿಗಂದೂರು-ಕೊಡಚಾದ್ರಿ – ಕೊಲ್ಲೂರು ಮತ್ತು ಮರವಂತೆ ಬೀಚ್ ದರ್ಶನ ಸುಲಭ ಸಾಧ್ಯವಾಗಲಿದೆ. ಇದರ ಮಾರ್ಗವನ್ನು 369 ಇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲಾಗಿದೆ. ನಿಸರ್ಗದ ಮಡಿಲಲ್ಲಿ ಹಾದುಹೋಗುವ ಈ ಹೆದ್ದಾರಿ ಮಧ್ಯದ ತುಮರಿ, ಬ್ಯಾಕೋಡು, ಸಸಿಗೊಳ್ಳಿ, ಮಳೂರಿನಂತಹ ಗ್ರಾಮೀಣ ಪ್ರದೇಶಗಳು ಕೂಡ ಅಭಿವೃದ್ಧಿಯ ಕನಸುಕಾಣುತ್ತಿವೆ. ಈ ಭಾಗದ ಸುಮಾರು ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಅಲ್ಲದೆ ಪ್ರಸಿದ್ಧ ಯಾತ್ರ ಸ್ಥಳಗಳಿಂದಾಗಿ ಪ್ರವಾಸೋದ್ಯಮವೂ ಗರಿಗೆದರಿಕೊಳ್ಳುತ್ತಿವೆ.

ಈ ಸೇತುವೆಗೆ ಸ್ಥಳೀಯ ಜನ ಹೊಳೆಬಾಗಿಲು ಸೇತುವೆ, ತುಮರಿ ಸೇತುವೆ, ಕಳಸವಳ್ಳಿ ಸೇತುವೆ, ಅಂಬಾರಗೊಡಲು ಸೇತುವೆ, ಕರೂರು ಸೇತುವೆ ಅಂತ ಅವರವರ ಇಷ್ಟದಂತೆ ಕರೆಯುತ್ತಾರೆ. ಆದರೆ ಹೊರಗಿನ ತಾಲೂಕುಗಳಲ್ಲಿನ ಜನ ಈ ಸೇತುವೆಗೆ ಸಿಗಂದೂರು ಸೇತುವೆ ಎನ್ನುತ್ತಾರೆ ಕಾರಣ ಅವರೆಲ್ಲ ಸಿಗಂದೂರು ಚೌಡೇಶ್ವರಿ ದೇವಿಯ ದರ್ಶನಕ್ಕೆ ಬರುವವರು.

ಫೋಟೋ ಕೃಪೆ :google

ಬಹುಶಃ 2025ರ ಮೇ ತಿಂಗಳ ಒಳಗೆ ಸೇತುವೆ ಉದ್ಘಾಟನೆಯಾಗಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಸುಮಾರು ಎಂಟು ದಶಕಗಳ ಕಾಲ ಈ ಭಾಗದ ಜನರ ಸಂಚಾರಕ್ಕೆ ಅನುವಾಗಿದ್ದ ಲಾಂಚ್ ಗಳು ತಮ್ಮ ಪ್ರಯಾಣ ನಿಲ್ಲಿಸಲಿದೆ. ಸಾಗರದಿಂದ ಕೊಡಚಾದ್ರಿ -ಕುಂದಾಪುರ-ಕೊಲ್ಲೂರು- ಬೈಂದೂರಿಗೆ ಸಮೀಪವಾಗುವ ಈ ಮಾರ್ಗದಲ್ಲಿ ಬಾರೀ ವಾಣಿಜ್ಯ ವಾಹನಗಳೂ ಮತ್ತು ಬಸ್ಸುಗಳು ಸಂಚಾರ ದಟ್ಟಣೆ ಹೆಚ್ಟು ಮಾಡುವ ಸಾಧ್ಯತೆ ಇದೆ.

24×7 ಕರೂರು ಬಾರಂಗಿ ಹೋಬಳಿ ತಾಲ್ಲೂಕು ಕೇಂದ್ರ ಸಾಗರದ ಜೊತೆ ವಾಹನ ಸಂಚಾರ ಸಂಪರ್ಕ ಹೊಂದಲಿದೆ ಆಗ ಈ ಪ್ರದೇಶದ ಬದಲಾವಣೆಗಳು ಏನು ಎಂಬುದು ಗೊತ್ತಾಗಲಿದೆ. ಅಷ್ಟರಲ್ಲಿ ಈ ಸೇತುವೆಗೆ ಆ ಭಾಗದ ಜನರು ಹೆಸರೊಂದು ಅಂತಿಮ ಮಾಡಲಿ ಸೇತುವೆ ಉದ್ಘಾಟನೆ ದಿನ ಆ ಹೆಸರಿನ ನಾಮಕರಣ ಅಧಿಕೃತವಾಗಿ ಆಗಲಿ. ಅಥವಾ ಈ ಸೇತುವೆ ಎಸ್ಟಿಮೇಟ್ ನಲ್ಲಿರುವ ಹೆಸರಾದ ಸಿಗಂದೂರು ಸೇತುವೆ ಎನ್ನುವ ಹೆಸರೇ ಅಂತಿಮವಾಗಲಿ.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading