‘ಬೆಲ್ ಬಾಟಂ’ ಸಿನಿಮಾ SIIMA ಪ್ರಶಸ್ತಿಗೆ ಹಲವಾರು ಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಮತ ಚಲಾಯಿಸುವುದರ ಮೂಲಕ ಉತ್ತಮ ಚಿತ್ರ ಗೆಲ್ಲಿಸುವ ಶಕ್ತಿ ನಿಮ್ಮಲ್ಲಿದೆ…ಬನ್ನಿ, ಮತ ಚಲಾಯಿಸಿ…
ಅಪ್ಪ ಕಾನ್ಸ್ಟೆಬಲ್ , ಮಗನಿಗೆ ಪತ್ತೆದಾರಿ ಕಾದಂಬರಿ ಓದುವ ಹುಚ್ಚಿನ ಜೊತೆಗೆ ಮುಂದೊಂದು ದಿನ ತಾನೊಬ್ಬ ಪತ್ತೇದಾರನಾಗಬೇಕೆಂಬ ಕನಸ್ಸನ್ನು ಹೊತ್ತ ನಾಯಕ. ಅಪ್ಪನ ಕಾಟಕ್ಕೆ, ದುರಾದೃಷ್ಟಕ್ಕೆ ನಾಯಕ ಕಾನ್ಸ್ಟೆಬಲ್ ನಾಗುತ್ತಾನೆ. ಬಾಗಿಲು ಕಾಯುವುದು, ಉದ್ಯೋಗಿಗಳಿಗೆ ಚಹಾ ತಂದುಕೊಡುವುದು ಸಣ್ಣ ಪುಟ್ಟ ಕೆಲ್ಸಗಳು ದೊಡ್ಡ ಕನಸ್ಸನಿಟ್ಟುಕೊಂಡ ನಾಯಕನಿಗೆ ಕಿರಿಕಿರಿಯಾಗುತ್ತಿರುತ್ತದೆ. ಇದರ ಮಧ್ಯೆದಲ್ಲಿ ಮಹಿಳೆಯೊಬ್ಬಳು ಕಾಣೆಯಾದ ತನ್ನ ಗಂಡನನ್ನು ಹುಡುಕಿಕೊಡುವಂತೆ ಕೋರಿ ಪೊಲೀಸ್ ಠಾಣೆ ಬರುತ್ತಾಳೆ. ಆಗ ಠಾಣೆಯ ಇನ್ಸ್ಪೆಕ್ಟರ್ ಸೋಂಬೇರಿತನಕ್ಕೆ ಆ ಕೇಸ್ ನಾಯಕನ ಪಾಲಿಗೆ ಬರುತ್ತದೆ. ನಾಯಕ ಆ ಕೇಸ್ ನ್ನು ಶಿರಸಾವಹಿಸಿ, ಶ್ರದ್ದೆಯಿಂದ ತನ್ನ ಪತ್ತೇದಾರಿ ತಲೆಯನ್ನೋಡಿಸಿ ಪತ್ತೆ ಹಚ್ಚುತ್ತಾನೆ. ಆ ಕೇಸ್ ನಲ್ಲಿ ಅವನ ಹೆಂಡತಿಯೇ ಅಪರಾಧಿಯಾಗಿರುತ್ತಾಳೆ. ಈ ಕೇಸ್ ನ ಗೆಲವು ನಾಯಕನ ಮೇಲಿನ ನಂಬಿಕೆಯನ್ನು ಹೆಚ್ಚುವಂತೆ ಮಾಡುತ್ತದೆ. ಇದು ಅವನ ಕನಸ್ಸಿಗೆ ಮೆಟ್ಟಿಲಾಗುತ್ತದೆ.

ಕಳ್ಳರಿಂದ ವಶಪಡಿಸಿಕೊಂಡ ಮಾಲ್ ಗಳು ಪೊಲೀಸ್ ಠಾಣೆಯ ತಿಜೋರಿಯಲ್ಲಿಟ್ಟಾಗ ಅದು ಕಾಣೆಯಾಗುತ್ತದೆ, ಹಾಗೆ ಸುತ್ತ ಮುತ್ತಲಿನ ಠಾಣೆಯಲ್ಲಿ ಈ ರೀತಿ ಘಟನೆಗಳು ನಡೆದಾಗ ಕಳ್ಳರ ಪತ್ತೆಗಾಗಿ ಅಲ್ಲಿನ ಸಬ್ ಇನ್ಸ್ಪೆಕ್ಟರ್ ಗಳು ನಾಯಕನ ಮೊರೆ ಹೋಗುತ್ತಾರೆ. ಆಗ ಎದ್ದು ನಿಲ್ಲುವ intersting charector ಎಂದರೆ ಡಿಡೆಕ್ಟಿವ್ ದಿವಾಕರ್.
ಅಲ್ಲಿಂದ ಕತೆ ಕುತೂಹಲ ಮತ್ತು ಗಂಭೀರತೆಯನ್ನು ಪಡೆದುಕೊಳ್ಳುತ್ತದೆ, ಮುಂದೆ ನಾಯಕ ಕೇಸ್ ಗೆಲ್ಲುವ ರೀತಿ ಮೆಚ್ಚುಗೆ ಪಡೆದುಕೊಳ್ಳುತ್ತದೆ. ಮಧ್ಯೆ ಮಧ್ಯೆದಲ್ಲಿ ಬರುವ ಅಪ್ಪನ ಲವ್ ಸ್ಟೋರಿ, ನಾಯಕನ ಲವ್ ಸ್ಟೋರಿ, ಹಾಸ್ಯದ ಚಟಾಕಿಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ.
ಮೊದಲಬಾರಿಗೆ ನಾಯಕನ ಪಾತ್ರದಲ್ಲಿ ಮಿಂಚಿರುವ ರಿಷಬ್ ಶೆಟ್ಟಿ, ಪಾತ್ರಕ್ಕೆ ನ್ಯಾಯಕೊಟ್ಟಿದ್ದಾರೆ. ನಾಯಕಿ ಹರಿಪ್ರಿಯಾ ಮೈಮಾಟ ಸೂಪರ್… ಪೋಷಕ ನಟನ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದಾರೆ. ever green ಅದ್ಬುತ ನಟ. ಮತ್ತು ‘ಕನ್ನಡದ ಗಾಯಕ’ ನಮ್ಮ ಹೆಮ್ಮೆಯ ವಿಜಯ ಪ್ರಕಾಶ ಅವರು ಹಾಡಿರುವ ‘ಬೊಗಸೆ ತುಂಬಾ…’ ಹಾಡು ಮನ ಮುಟ್ಟುತ್ತದೆ.
‘ಬೆಲ್ ಬಾಟಂ’ ಸಿನಿಮಾದ ಮುಖ್ಯ ಜೀವಾಳು ನಿರ್ದೇಶಕ- ಕತೆ- ಚಿತ್ರಕತೆ- ಸಂಭಾಷಣಾಕಾರ ಜಯತೀರ್ಥ ಎಂದರೆ ತಪ್ಪಾಗಲಾರದು. ಪತ್ತೇದಾರಿಯಲ್ಲಿ ಎಲ್ಲಿಯೂ ಎಳೆ ತಪ್ಪಲು ಬಿಡದೆ, ಪ್ರೇಕ್ಷಕನನ್ನು ಹಿಡಿದಿಡುವಲ್ಲಿ ಅವರ ಕೈ ಚಳಕ ಮೆಚ್ಚಲೇಬೇಕು.

ಎಲ್ಲಿಯೂ ಆಡಂಬರವಿಲ್ಲದೆ, ದೇಸಿಯ ಸೊಗಡನ್ನು ಇಟ್ಟುಕೊಂಡು ಮಾಡಿರುವಂತಹ, ಮತ್ತೆ ಮತ್ತೆ ನೋಡಬೇಕು ಎನ್ನಿಸುವಂತಹ ಸರಳ ಮತ್ತು ಸುಂದರ ಸಿನಿಮಾವಿದು. ಇದು ಬೆಲ್ ಬಾಟಂ ಸಿನಿಮಾದ ಕತೆಯ ಸುತ್ತಾ.
ಇನ್ನು ಈ ಸಿನಿಮಾ SIIMA ಅವಾರ್ಡ್ ಮೆಟ್ಟಲನ್ನೇರಿದ್ದು, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರ, ಅತ್ಯುತ್ತಮ ಗಾಯಕ, ಅತ್ಯುತ್ತಮ ಪೋಷಕ ನಟ ಮತ್ತು ಅತ್ಯುತ್ತಮ ಸಾಹಿತ್ಯಕ್ಕಾಗಿ ನಾಮನಿರ್ದೇಶನಗೊಂಡಿದೆ. ಸೌತ್ ಇಂಡಿಯನ್ ಇಂಟೆರ್ ನ್ಯಾಷನಲ್ ಸಿನಿಮಾ ಅವಾರ್ಡ್ ಗೆ ಆಯ್ಕೆ ಆಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಒಂದು ಉತ್ತಮ ಸಿನಿಮಾ ಗೆಲ್ಲಬೇಕೆಂದರೆ ಅದು ಪ್ರೇಕ್ಷಕನ ಕೈಯಲ್ಲಿದೆ. ಈ ಕೆಳಗಿನ ಲಿಂಕ್ ಮೂಲಕ ಮತ ಚಲಾಯಿಸಿದರೆ, ಕನ್ನಡದ ಅತ್ಯುತ್ತಮ ಚಿತ್ರ ಗೆಲ್ಲುತ್ತದೆ.
- ಶಾಲಿನಿ ಹೂಲಿ ಪ್ರದೀಪ್