ಬಡವಗು ಸಿರಿಯನು ಮೊಗೆಮೊಗೆದೆರೆಯಲು ಅಡೆತಡೆ ಕರಗಿಸಿ ಬಾ ಮನೆಗೆ ಸಿರಿವರಲಕುಮಿಯೆ…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ನಂಬಿದೆ ನಿನ್ನನು ಸಿರಿವರಲಕುಮಿಯೆ
ಅಂಬುಜವಾಸಿಯೆ ಬಾ ಮನೆಗೆ
ಹಂಬಲಿಸಿರುವೆನು ಶ್ರೀ ಹರಿವಲ್ಲಭೆ
ಅಂಬುಜ ನಯನೆಯೆ ಬಾ ಮನೆಗೆ
ನಂಬಿಕೆಯೊಳು ನಾ ನಿನ್ನನು ನುತಿಸುವೆ
ಅಂಬರದಗಲ ಸಿರಿಯೆರೆಯೆ
ಕುಂಭದಿ ಕೂರಿಸಿ ಸಿಂಗರಿಸಿರುವೆನು
ತಂಬಿಗೆ ಪಾಯಸ ನೀ ಕುಡಿಯೆ
ದಡದಡ ಅಡಿಯಿಡುತಲಿ ನೀ ಬುವಿಯೊಳು
ಸಡಗರದಿಂದಲಿ ಬಾ ಮನೆಗೆ
ಬಡವಗು ಸಿರಿಯನು ಮೊಗೆಮೊಗೆದೆರೆಯಲು
ಅಡೆತಡೆ ಕರಗಿಸಿ ಬಾ ಮನೆಗೆ
ಕರೆಕರೆದವರಿಗೆ ನೀ ನೆರವಾಗುತ
ಪರಿಹರಿಸುತ ಕಡುಕಷ್ಟವನು
ಧರೆಯೊಳಗೀದಿನ ವರಗಳನೆರೆಯುತ
ಪೊರೆ ನರಮನುಜನ ಜನುಮವನು.
- ಚನ್ನಕೇಶವ ಜಿ ಲಾಳನಕಟ್ಟೆ
