ಕೊರೋನಾ ನಿನ್ನ ಅಟ್ಟಹಾಸ ಎಲ್ಲಿಯವರೆಗೂ, ಈ ನೋವು ನ್ಯಾಯವೇ? ಈ ಲೇಖನೊಮ್ಮೆ ಓದಿ. ದಯವಿಟ್ಟು ಎಲ್ಲರು ಮಾಸ್ಕ ಹಾಕಿ, ಆದಷ್ಟು ಮನೆಯಲ್ಲೇ ಇರಿ. ಕೊರೋನಾ ಮಹಾಮಾರಿಗೆ ಬಲಿಯಾಗದಿರಿ…
ಮಗ ಅತ್ಯುತ್ತಮ ಸ್ಕೇಟಿಂಗ್ ಆಟಗಾರ. ಆಡಿದ್ದೆಲ್ಲ ಚಿನ್ನ. ಅಂತಹ ಪ್ರತಿಭಾವಂತ ಮಗನಿಗೆ ಬೆನ್ನೆಲುಬಾಗಿ ಅವನ ಭವಿಷ್ಯದ ಬಗ್ಗೆ ಹಗಲಿರುಳು ಕನಸ್ಸು ಕಾಣ್ಣುತ್ತಿದ್ದರು ಆ ದಂಪತಿಗಳು. ಸ್ಕೇಟಿಂಗ್ ರೇಸ್ ನಲ್ಲಿ ಅವನು ನಿಂತರೆ ಸಹ ಸ್ಪರ್ಧಿಗಳಿಗೆ ಬೆವರಿಳಿಸುತ್ತಿದ್ದ. ಸ್ಕೇಟಿಂಗ್ ತರಬೇತಿ ರಾತ್ರಿ ಇರಲಿ,ಬೆಳ್ಳಂಬೆಳಗ್ಗೆಯೇ ಇರಲಿ, ಅಥವಾ ಯಾವುದೊ ದೂರದ ಊರಿನಲ್ಲಿರಲಿ, ಎಲ್ಲರ ಮೊದಲು ತಮ್ಮ ಮಗನ ಬ್ಯಾಗ್ ಹಿಡಿದು ಸ್ಕೇಟಿಂಗ್ ರಿಂಕ್ ನಲ್ಲಿ ನಿಲ್ಲುತ್ತಿದ್ದರು ಆ ದಂಪತಿಗಳು.

(ವೀರ್ ನ ಅಪ್ಪ ಅಮ್ಮ)
ಆ ಪ್ರತಿಭಾವಂತ ಹುಡುಗನ ಹೆಸರು ವೀರ್. ಗಂಡ, ಹೆಂಡತಿ ಹಾಗು ಮಗ, ಪುಟ್ಟದಾದಂತಹ ಸುಂದರ ಸಂಸಾರ. ಮೊನ್ನೆಯಷ್ಟೇ ತಾಲೂಕು ಮಟ್ಟದಲ್ಲಿ ಸ್ಕೇಟಿಂಗ್ ನಲ್ಲಿ ಗೋಲ್ಡ್ ಮೆಡಲ್ ಗೆದ್ದು, ನ್ಯಾಷನಲ್ ಲೆವೆಲ್ ಆಯ್ಕೆಯಾದ. ವೀರ್ ನ್ಯಾಷನಲ್ ಆಯ್ಕೆ ಆದ ಮೇಲೆ ಅದರ ಖರ್ಚು ವೆಚ್ಚವನ್ನು ಸರ್ಕಾರ ಕೊಡುವುದಿರಲಿ, ಸರ್ಕಾರದ ಗಮನಕ್ಕೂ ಬರಲಿಲ್ಲ ಎನ್ನುವುದೇ ವಿಪರ್ಯಾಸ. ಸ್ಕೇಟಿಂಗ್ ಆಟ ಒಂದೊಂದು ಹಂತ ಗೆದ್ದಾಗಲೂ ಅವರು ನಿಗಧಿ ಪಡಿಸಿದ ಯಾವ ಊರು,ರಾಜ್ಯ, ಯಾವ ಕೆರೆಯನ್ನದೆ ಹೊರಡಬೇಕು. ನ್ಯಾಷನಲ್ ಲೆವೆಲ್ ಸ್ಕೇಟಿಂಗ್ ಈ ಬಾರಿ ನಡೆದದ್ದು ದೂರದ ಹರಿಯಾಣದಲ್ಲಿ. ಅಲ್ಲಿ ಕೋರನಾ ತಾಂಡವಾಡುತ್ತಿತ್ತು. ಆದರೆ ಏರ್ಪಡಿಸಿದವರು ಕೊರೋನಾವನ್ನು ನಿರ್ಲಕ್ಷಿಸಿದರು. ಅದೇ ರಾಜ್ಯದಲ್ಲಿ ನ್ಯಾಷನಲ್ ಲೆವೆಲ್ ಆಟ ನಡೆಯಿತು. ವೀರ್ ನಮ್ಮ ರಾಜ್ಯದ ಭಾವುಟವನ್ನು ಎತ್ತಿ ಹಿಡಿದ. ಆ ಕ್ಷಣ ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆ ಪಡುವಂತದ್ದಾಗಿತ್ತು. ಹರಿಯಾಣದಿಂದ ಬೆಂಗಳೂರು ತಲುಪುವಷ್ಟರಲ್ಲಿ ವೀರ್ ಅಪ್ಪ-ಅಮ್ಮನ ಮೊಬೈಲ್ ಶುಭಾಶಯಗಳಿಂದ ತುಂಬಿ ಹೋಗಿತ್ತು.

(ಅಂತಾರಾಷ್ಟ್ರೀಯ ಸ್ಕೇಟಿಂಗ್ ಆಟರಗಾರ ಹಾಗು ತರಬೇತಿದಾರ ರಾಘವೇಂದ್ರ ಸೋಮಯಾಜಿ ಅವರೊಂದಿಗೆ ವೀರ್)

(ನ್ಯಾಷನಲ್ ಲೆವೆಲ್ ಆಟದ ಕೊನೆಯ ಕ್ಷಣದ ದೃಶ್ಯ )
ತಮ್ಮ ಮಗ ನಮಗಷ್ಟೇ ಅಲ್ಲ, ಒಂದು ರಾಜ್ಯದ ಆಸ್ತಿಯಾಗಿದ್ದಾನೆ ಎಂದರೆ ಯಾವ ಅಪ್ಪ ಅಮ್ಮನಿಗೆ ಹೆಮ್ಮೆಯಾಗದಿರದು ಹೇಳಿ?. ಆ ಸಂತೋಷದ ಅಲೆಯಲಿದ್ದಾಗಲೇ ಧಡಾರ ಅಂತ ತಲೆ ಮೇಲೆ ಸುತ್ತಿಗೆಯಿಂದ ಹೊಡೆದಷ್ಟು ನೋವು ಹೃದಯಕ್ಕೆ ಆಯಿತು.

ಅದು ವೀರ್ ನ ತಂದೆಯ ಸಾವು. ಅಪ್ಪ ಅಮ್ಮನ ಜೊತೆ ಹೋಗಿ ನ್ಯಾಷನಲ್ ಲೆವೆಲ್ ನಲ್ಲಿ ಗೋಲ್ಡ್ ಗೆದ್ದು ಬಂದ ಸಂತೋಷ ಕ್ಷಣಾರ್ಧದಲ್ಲೇ ಮುಗಿದು ಹೋಯಿತು. ಇಂದು ವೀರ್ ನ ಅಪ್ಪ ಕೊರೋನಾದಿಂದ ಸವನೊಪ್ಪಿದ್ದು, ಪ್ರತಿಯೊಬ್ಬನ ಕಣ್ಣಲ್ಲೂ ನೀರುಕ್ಕಿಸಿತು. ಯಾರ ಕೆಟ್ಟ ದೃಷ್ಟಿ ಈ ಸುಂದರ ಸಂಸಾರದ ಮೇಲೆ ಬಿದ್ದಿತೋ ಕಾಣೆ. ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ.
ಸ್ಫೂರ್ತಿಯ ಚಿಲುಮೆಯಂತಿದ್ದರು ವೀರ್ ನ ತಂದೆ, ಈಗ ಅವರಿಲ್ಲ ಅನ್ನುವ ಸತ್ಯ, ಮನಸ್ಸು ಒಪ್ಪುತ್ತಿಲ್ಲ. ಈ ಕೊರೋನಾ ಸಂದರ್ಭದಲ್ಲಿಯೂ ಆಟವನ್ನು ರದ್ದುಗೊಳಿಸದೆ ಇದ್ದದ್ದು ಅವರ ಸಾವಿಗೆ ಕಾರಣವಾಯಿತೆ? ಅಥವಾ ಮಗನ ಶ್ರಮಕ್ಕೆ ನೀರೆರೆದದ್ದು ತಪ್ಪಾಯಿತೇ? ಈ ಸಾವು ನ್ಯಾಯವೇ? ವೀರ್ ನ ಸ್ಕೇಟಿಂಗ್ ಭವಿಷ್ಯ ಹೇಗೆ? ಎನ್ನುವ ಹಲವಾರು ಪ್ರಶ್ನೆ,ನೋವುಗಳು ಕಾಡುತ್ತಿವೆ.
ವೀರ್ ನ ಕುಟುಂಬಕ್ಕೆ ಆ ಭಗವಂತ ಮುನ್ನೆಡೆಯುವ ಶಕ್ತಿ ನೀಡಲಿ ಎಂದು ಆಕೃತಿಕನ್ನಡ ಆಶಿಸುತ್ತದೆ.
- ಶಾಲಿನಿ ಹೂಲಿ ಪ್ರದೀಪ್