ಆ ನಗರವನ್ನು ಕಾಪಾಡಿದ ಆ ಹನಿಮೂನ್

ಆ ಸೆಕ್ರೆಟರಿ ಆಫ್ ವಾರ್ ‘ಹೆನ್ರಿ ಸ್ಟಿಮ್ಸನ್’ ಆ ಕೆಯೆಟೋ (keyota) ನಗರವನ್ನು ಆ ಬಾಂಬ್ ಹಾಕುವ ಪಟ್ಟಿಯಿಂದ ಏಕೆ ಅಳಿಸಿ ಹಾಕಿದ ಗೊತ್ತೇ!? ಡಾ. ರಾಜಶೇಖರ ನಾಗೂರ ಅವರ ಜೀವನಕ್ಕೆ ಸ್ಫೂರ್ತಿ ನೀಡುವ ಲೇಖನವನ್ನು ತಪ್ಪದೆ ಮುಂದೆ ಓದಿ…

ಅದು 1945 ಎರಡನೆಯ ವಿಶ್ವ ಮಹಾಯುದ್ಧ (world war -2) ದ ಸಮಯ. ಜಪಾನ್ ತುಂಬಾ ಉಪಟಳ ದೇಶವಾಗಿತ್ತು. ಇಂದಿನ ಜಪಾನ್ ದೇಶ ಬೇರೆಯೇ ಬಿಡಿ. ಜಪಾನ್ ಮೇಲೆ ಅಣುಬಾಂಬ್ ಹಾಕುವ ಯೋಜನೆ ಅಮೇರಿಕಾದಲ್ಲಿ ತಯಾರಾಗುತ್ತಿತ್ತು.

ಮಾನವ ಇತಿಹಾಸದ ಮೊದಲ ಅಣುಬಾಂಬ್ ಪ್ರಯೋಗಿಸಲು ಅಂದಿನ ಅಮೆರಿಕ ಪ್ರಸಿಡೆಂಟ್ ಎಚ್. ಟ್ರುಮೇನ್ ಜಪಾನ್ ದೇಶದ ಪ್ರಮುಖ ನಗರಗಳ ಪಟ್ಟಿಯನ್ನು ತಯಾರಿಸಿಕೊಡಲು ಆದೇಶವಿತ್ತ.

ಜಪಾನ್ ದೇಶದ ಪ್ರಮುಖ ನಗರಗಳ ಪಟ್ಟಿ ಹೀಗೆ ತಯಾರಾಯಿತು. ಆ ಪಟ್ಟಿಯಲ್ಲಿ ಮೊದಲ ನಗರ ಕೆಯೆಟೋ (Keyota)ಆಗಿತ್ತು.

1.ಕೆಯೆಟೋ
2.ಹೀರೋಶಿಮಾ
3.ಟೋಕಿಯೋ
3.ನಾಗಸಾಕಿ
4. ಹೀಗೆ..

ಈ ಮೇಲಿನ ನಗರಗಳ ಪಟ್ಟಿಯನ್ನು ಅಂದಿನ ಅಮೇರಿಕೆಯ ರಾಷ್ಟ್ರಪತಿಯ ಮುಂದಿಡುವ ಮೊದಲು ರಾಷ್ಟ್ರಪತಿಯ secretary of war (ಯುದ್ಧ ಕಾರ್ಯದರ್ಶಿ) ಹೆನ್ರಿ ಸ್ಟಿಮ್ಸನ್ ನ ಮೂಲಕ ಬರಬೇಕಾಗಿರುವುದು ರೀತಿ ರಿವಾಜಾಗಿತ್ತು.

ಆ ಯುದ್ಧ ಕಾರ್ಯದರ್ಶಿ ‘ಹೆನ್ರಿ ಸ್ಟಿಮ್ಸನ್’ ನು ಆ ಪಟ್ಟಿಯನ್ನು ನೋಡುತ್ತಿದ್ದಂತೆ ಆ ಪಟ್ಟಿಯಲ್ಲಿ ಮೊದಲಿಗೆ ಕೆಯೊಟಾ ನಗರವೆ ಗುರಿಯಾಗಿರುವುದನ್ನು ಕಂಡು ಆ ಕೆಯೋಟಾ ನಗರದ ಹೆಸರನ್ನು ಆ ಪಟ್ಟಿಯಿಂದ ಅಳಿಸಿ ಹಾಕಿ ಉಳಿದ ಹೆಸರುಗಳನ್ನು ಹಾಗೆಯೇ ಇಟ್ಟು ರಾಷ್ಟ್ರಪತಿಗೆ ಕಳುಹಿಸಿದ.

ಪ್ರೆಸಿಡೆಂಟ್ ಎಚ್. ಟ್ರುಮೇನ್ ಆ ಪಟ್ಟಿಯಲ್ಲಿಯ ಹೀರೋಶಿಮಾ, ನಾಗಸಾಕಿ ನಗರಗಳನ್ನು ಬಾಂಬ್ ಹಾಕಲು ನಿಗದಿ ಮಾಡುತ್ತಾನೆ. ಮುಂದೆ ಇತಿಹಾಸ ನಿಮಗೆ ಗೊತ್ತೇ ಇದೆ. ಆ ಎರಡೂ ನಗರಗಳು ಕ್ಷಣಾರ್ಧದಲ್ಲಿ ಧ್ವಂಸಗೊಂಡು ಲಕ್ಷಾಂತರ ಜನ ಕ್ಷಣದಲ್ಲಿ ಸಾವಿಗೀಡಾದರು. ಮಾನವ ಇತಿಹಾಸ ಕಂಡರಿಯದ ಕೇಳರಿಯದ ಅಣುಬಾಂಬ್ ನ ವಿದ್ವಂಸಕ ಕೃತ್ಯ ಜಗತ್ತಿಗೆ ಕಂಡಿತು.

 

ಹಾಗಾದರೆ ಆ ಸೆಕ್ರೆಟರಿ ಆಫ್ ವಾರ್ ‘ಹೆನ್ರಿ ಸ್ಟಿಮ್ಸನ್’ ಆ ಕೆಯೆಟೋ (keyota) ನಗರವನ್ನು ಆ ಬಾಂಬ್ ಹಾಕುವ ಪಟ್ಟಿಯಿಂದ ಏಕೆ ಅಳಿಸಿ ಹಾಕಿದ ಗೊತ್ತೇ!?

1920 ರ ಆಸು ಪಾಸಿನಲ್ಲಿ ಆ ಹೆನ್ರಿ ಸ್ಟೀಮ್ಸನ್ ತನ್ನ ಹನಿಮೂನನ್ನು ಆ keyota ನಗರದಲ್ಲಿ ಮಾಡಿದ್ದ. ಆ ಕೆಯೋಟಾ ನಗರ ಸಾಂಸ್ಕೃತಿಕವಾಗಿ ತುಂಬಾ ಶ್ರೀಮಂತವಾಗಿತ್ತು. ಆ ನೆನಪುಗಳೇ ಹೆನ್ರಿ ಸಿಮ್ಸನ್ ನು ಆ ನಗರವನ್ನು ಪ್ರೀತಿಸಲು ಕಾರಣವಾಗಿದ್ದವು. ತನ್ನ ನೆನಪುಗಳಲ್ಲಿ ಅಚ್ಚಳಿಯದೇ ಉಳಿದ ಈ ನಗರ ಹಾಳಾಗಬಾರದೆಂದು ಆ ನಗರದ ಹೆಸರನ್ನು ಆ ಪಟ್ಟಿಯಿಂದ ಅಳಿಸಿ ಹಾಕಿದ್ದ.

ಆ ಹನಿಮೂನ್ ಆ keyota ನಗರವನ್ನು ಧ್ವಂಸವಾಗುವುದರಿಂದ ಉಳಿಸಿತು.

‘ಸ್ಫೂರ್ತಿ ಸಿಂಚನ’ ಅಂಕಣದ ಹಿಂದಿನ ಸಂಚಿಕೆ :


  • ಡಾ. ರಾಜಶೇಖರ ನಾಗೂರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW