ಗಂಡ-ಹೆಂಡತಿ, ಮೂರೂ ಮಕ್ಕಳು, ಸುಂದರ ಸಂಸಾರ ಮೀನಾಕ್ಷಿಯದಾಗಿತ್ತು. ಆದರೆ ಯಾವುದೋ ಕ್ಷುಲಕ ಜಗಳ ಅವರ ಮಧ್ಯೆ ಬಂದು, ಸಂಸಾರದಲ್ಲಿ ದೊಡ್ಡ ಬಿರುಕನ್ನೇ ಬಿಟ್ಟಿತು. ಮುಂದೇನಾಯಿತು ದೀಪಿಕಾ ಬಾಬು ಅವರ ಲೇಖನಿಯಲ್ಲಿ ಮೂಡಿ ಬಂದ ಸಣ್ಣಕತೆ, ತಪ್ಪದೆ ಮುಂದೆ ಓದಿ…
ಜನ ಮಾತಾಡುವುದೇ ಹಾಗೆ, ತಮ್ಮ ಮನೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರು ಪಕ್ಕದವರ ಮನೆಯಲ್ಲಿ ನೊಣ ಸತ್ತು ಬಿದ್ದುದರ ಬಗ್ಗೆ ಬಿಸಿ-ಬಿಸಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಚರ್ಚೆಗಳನ್ನು ನಡೆಸುವುದು ಬಹುತೇಕ ಮಹಿಳೆಯರೇ ಹೌದು. ಹೆಣ್ಣಿಗೆ ಹೆಣ್ಣಿ ಶತ್ರು ಎಂಬ ಗಾದೆಯಂತೆ ಅವಳು ನಡೆದುಕೊಳ್ಳುತ್ತಾಳೆ ಹಾಗೂ ಇಲ್ಲ ಸಲ್ಲದ ವದಂತಿಗಳ ಸೃಷ್ಟಿಸಿ ಮತ್ತೊಂದು ಹೆಣ್ಣಿನ ಬದುಕಲ್ಲಿ ಆಟವಾಡುವ ಮಹಿಳೆಯರು ಇದ್ದಾರೆ.
ಅವಳು ಮೀನಾಕ್ಷಿ ಮದುವೆಯಾಗಿ ಸುಮಾರು ಇಪ್ಪತ್ತು ವರ್ಷಗಳು ಅವಳಿಗೆ ಮೂರು ಮಕ್ಕಳು ಎರಡು ಗಂಡು ಒಂದು ಆದರೆ ಗಂಡನ ಮನೆಯಲ್ಲಿ ಅತ್ತೆ-ಮಾವನ ಕಿರುಕುಳ ತಾಳಲಾರದೆ ಒಂಟಿಯಾಗಿ ಬದುಕು ನಡೆಸುತಿದ್ದಳು ಹತ್ತು ವರ್ಷಗಳಿಂದ. ಕಿರಿಯ ಮಗ ಇವಳ ಜೊತೆ ಇದ್ದಾನೆ ಮತ್ತು ಉಳಿದೆರಡು ಮಕ್ಕಳು ತಂದೆಯ ಜೊತೆಯಲ್ಲಿ.
ಮೀನಾಕ್ಷಿ ಸ್ವಾಭಿಮಾನದ ಹೆಣ್ಣು, ತನ್ನ ಜೊತೆಗಿರುವ ಮಗನನ್ನು ಚನ್ನಾಗಿ ಓದಿಸಬೇಕೆಂದು, ತನ್ನ ಖರ್ಚುವೆಚ್ಚಕ್ಕೆ ಕೆಲಸ ಮಾಡಿ ಹಣ ಸಂಪಾದಿಸುತ್ತಾಳೆ. ಹೀಗೆ ಬದುಕು ನಡೆಸುತ್ತಾಳೆ. ಇವಳ ಗಂಡನಿಗೆ ಇವಳ ಬಗ್ಗೆ ಅನುಮಾನ, ಮೀನಾಕ್ಷಿ ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡಿದ್ದಾಳೆ, ತನ್ನ ಮಗನನ್ನು ಚನ್ನಾಗಿ ನೋಡಿಕೊಳ್ಳದೇ ಹೊಡೆದು ಬಡೆದು ಹಿಂಸೆ ಮಾಡುತ್ತಾಳೆ ಎಂಬಂತಹ ಮನೋಭಾವ ಅವನದು.
ಕಿರಿಯ ಮಗನ ಹುಟ್ಟುಹಬ್ಬಕ್ಕಾಗಿ ಅವನಿಗೆಂದು ಬಟ್ಟೆ ತಿನಿಸು ತಂದ ಅವನ ಅವನಿಗೆ ಕೊಡಲು ಹೋದಾಗ ಮೀನಾಕ್ಷಿ ಯಾರದೋ ಜೊತೆಯಲ್ಲಿ ಪೋನಿನಲ್ಲಿ ಮಾತಾಡುತ್ತಾ ಕೂತ್ತಿದ್ದಳು. ಅದೇ ಸಮಯಕ್ಕೆ ಮಗು ಹಸಿವು ಅಮ್ಮ ಊಟ ಹಾಕಿಕೊಡು ಎಂದಾಗ, ಪೋನಿನಲ್ಲಿ ಬ್ಯುಸಿಯಾಗಿದ್ದ ಮೀನಾಕ್ಷಿ ಮಗನಿಗೆ ಒಂದಿಷ್ಟು ಬೈಯ್ಯುತ್ತಾಳೆ. ಮಗು ಪೋನ್ ಕಸಿದುಕೊಂಡು ಎಸೆಯುತ್ತದೆ. ಕೋಪದಲ್ಲಿದ್ದ ಮೀನಾಕ್ಷಿ ಮಗುವನ್ನು ತಳ್ಳುತ್ತಾಳೆ. ಮಗು ಅಮ್ಮ…. ಎಂದು ಚೀರುತ್ತಾ ಎದುರಿರುವ ಗೋಡೆಗೆ ತಲೆ ತಾಕಿ ಪ್ರಜ್ಞೆ ಕಳೆದುಕೊಳ್ಳುತ್ತದೆ. ಇದನ್ನೆಲ್ಲ ಕಿಟಕಿಯಲ್ಲಿಯೇ ಗಮನಿಸಿದ ಮಗುವಿನ ತಂದೆ ದಿಢೀರನೆ ಒಳಗೆ ನಡೆದು ಮಗುವನ್ನು ಎತ್ತಿಕೊಳ್ಳುತ್ತಾನೆ.
ತನ್ನ ಮಗು ಬಿದ್ದಿದೆ, ಗಂಡ ಮಗುವನ್ನು ಎತ್ತಿಕೊಂಡಿದ್ದಾನೆಂಬ ಯಾವುದೇ ಆತಂಕಗಳಿಲ್ಲದೇ, ‘ಹಾಳಾದವನು ನನ್ನ ಪೋನ್ ಒಡೆದು ಹಾಕ್ದ, ಅದೆಷ್ಟು ಸಿಟ್ಟೋ, ಎಲ್ಲಾ ಅಜ್ಜಿ ಗುಣ… ಪ್ರಾಣ ತಿನ್ನತ್ತೆ…” ಎಂಬುವಂತಹ ನಿಷ್ಠುರವಾಗಿ ಬೈದಾಡುತ್ತಿದ್ದಳು. ಇದನ್ನೆಲ್ಲ ಸಹನೆಯಿಂದ ಕೇಳಿದ ಗಂಡನಿಗೆ ಅವಳ ಬಗ್ಗೆ ಮತ್ತಷ್ಟು ಕೋಪ ಬಂದು ಕೆನ್ನಿಗೆರೆಡು ಹೊಡೆದು ನೀನು ಒಬ್ಬಳು ತಾಯಿಯ? ಮಗುವಿಗಿಂತಲೂ ಫೋನ್ ಹೆಚ್ಚೆಯ್ತಾ…. ಎಂದು ಹಿಗ್ಗಾಮುಗ್ಗಾ ಬೈದಾಡಿ, ಇನ್ನು ಮಗು ನಿನ್ನಲ್ಲಿ ಇರುವುದೇ ಬೇಡ ಎಂದೇಳಿ ಮಗುವನ್ನು ಎತ್ತಿಕೊಂಡು ನಡೆದು ಬಿಟ್ಟನು. ಮೀನಾಕ್ಷಿ ಕ್ಷಣಕಾಲ ಹುಚ್ಚಿಯಂತೆ ಅರಚಾಡಿದಳು.
ಅಲ್ಲಿಂದ ಯಾವುದೇ ಹೆಣ್ಣನ್ನು ಕಂಡರೂ ಅವರ ಬಗ್ಗೆ ಇಲ್ಲ ಸಲ್ಲದ ಹೇಳುತ್ತಾ ಅವರ ನಡತೆಯ ಬಗ್ಗೆ ಅಪಪ್ರಚಾರ ಮಾಡುತ್ತಾಳೆ ಮೀನಾಕ್ಷಿ. ಹೀಗೆಯೇ ಅವಳಿಗವಳೇ ತನ್ನ ಬದುಕನ್ನು ಹಾಳು ಮಾಡಿಕೊಂಡು ಇನ್ನೊಂದು ಹೆಣ್ಣಿನ ಬದುಕನ್ನು ಹಾಳು ಮಾಡಲು ಸಂಚು ರೂಪಿಸುತ್ತಾಳೆ. ಮತ್ತು ಯಾವುದಾದರೂ ಹೆಣ್ಣು ಮಗು ಅವರ ಅಣ್ಣ-ತಮ್ಮನಲ್ಲಿ ಮಾತಾಡಿದರೂ ಅವರನ್ನು ಪ್ರಶ್ನಿಸಿ ಯಾವುದೋ ಅಪಾರ್ಥ ಕಲ್ಪಿಸುವ ಮೀನಾಕ್ಷಿ ಒಂಟಿಯಾಗಿ ಹುಚ್ಚಿಯ ರೀತಿಯಲ್ಲಿ ಬದುಕುತ್ತಾಳೆ.
ಮೀನಾಕ್ಷಿ ಮಾಡಿಕೊಂಡ ಎಡವಟ್ಟುಗಳು ಅವಳ ಸ್ವಾಭಿಮಾನಕ್ಕೆ ಕುತ್ತಾಗುತ್ತವೆ. ಹೀಗೆ ಸಾಕಷ್ಟು ಮಹಿಳೆಯರು ಮದುವೆಯಾದ ಮೇಲೆ ತಮ್ಮ ಸುಂದರವಾದ ಬದುಕನ್ನು ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ ಬಲಿಕೊಟ್ಟು ಬಿಡುತ್ತಾರೆ. ಬಿಸಿ-ಬಿಸಿ ವಿಚಾರಗಳಂತೆ ಇಂತಹ ಸುದ್ದಿಗಳ ಮನೆ ಮನೆಗೆ ತಲುಪಿಸುವ ಕಾರ್ಯವು ಹೆಣ್ಣಿನದ್ದೇ ಆಗಿದೆ.
- ದೀಪಿಕಾ ಬಾಬು , ಚಿತ್ರದುರ್ಗ.