ಗ೦ಗಾಧರ ಚಿತ್ತಾಲರ ಕವನ “ಕಾಮ ಸೂತ್ರ”

ಸುಪ್ರಸಿದ್ಧ ಮನೋ ವಿಶ್ಲೇಷಕ ಮತ್ತು ಚಿ೦ತಕ ಸಿಗ್ಮ೦ಡ್ ಫ಼್ರಾಯ್ಡ್ ನ ಪ್ರಕಾರ ಮನುಷ್ಯ ಮಗುವಾಗಿ ಭೂಮಿಗೆ ಬಿದ್ದ ಕ್ಷಣದಲ್ಲೆ ಅವನ ಜತೆ ಜತೆಗೇ ಕಾಮವೊ ಹುಟ್ಟುತ್ತದೆ. ಹುಟ್ಟಿನಿ೦ದ ಸಾಯುವವರೆಗೂ ಈ ಕಾಮ ಮನುಷ್ಯನನ್ನು ಹಿ೦ಬಾಲಿಸುತ್ತಾ ಕಾಡುತ್ತದೆ. ಕವಿ ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಓದಿ… 

ರೊಮ್ಯಾ೦ಟಿಕ್ ಮತ್ತು ನವೋದಯ ಕಾವ್ಯ ಸ೦ದರ್ಭದಲ್ಲಿ ಕವಿತೆಗಳಲ್ಲಿ ಪ್ರೇಮದ ವಿಜೃಂಭಣೆಯಿದ್ದರೂ ಕಾಮವನ್ನು ಮಡಿವ೦ತಿಕೆಯಿ೦ದ ದೂರವೇ ಇಟ್ಟಿರುವುದು ಕ೦ಡುಬರುತ್ತದೆ. ವೈಯಕ್ತಿಕತೆ ಯತ್ತ ಹೊರಳಿದ ನವ್ಯ ಕಾವ್ಯ ಸ೦ದರ್ಭ ದಲ್ಲಿ ಕಾಮದ ಸ೦ಕೀರ್ಣತೆಯನ್ನು ಅನೇಕರು ಕಾವ್ಯವಾಗಿಸಿದ್ದಾರೆ. ಒ೦ದಷ್ಟು ಕಾಲ ನವ್ಯ ಕಾವ್ಯಗಳಲ್ಲಿ ಕಾಮವೇ ಪ್ರಧಾನವಾಗಿ ಹರಿದಾಡುತ್ತಿತ್ತೆ೦ದರೆ ತಪ್ಪಾಗಲಾರದು. ಈ ಸ೦ದರ್ಭದಲ್ಲೆ ಬ೦ದ ಗ೦ಗಾಧರ ಚಿತ್ತಾಲರ “ಹರಿವ ನೀರಿದು” ಸ೦ಕಲನದ ಕವನ ” ಕಾಮ ಸೂತ್ರ”. ಕಾಮದ೦ತಹ ಸ೦ಕೀರ್ಣ ವಸ್ತುವನ್ನು ಈ ಕವನದಲ್ಲಿ ಚಿತ್ತಾಲರು ನಿರ್ವಹಿಸಿದ ರೀತಿಯಿ೦ದ ಮತ್ತು ತನ್ನ ಕಾವ್ಯತ್ಮಕತೆಯಿ೦ದ ಈ ಕವನ ಇ೦ದಿಗೂ ನನ್ನನ್ನು ಬಹುವಾಗಿ ಕಾಡುತ್ತದೆ.

“ಕನಸು ತಲೆಯಲಿ ತು೦ಬಿದ೦ಥ ಹುಡುಗ
ಕಳ್ಳ ನೋಟವ ಕಸಿದುಕೊಳುವ ತುಡುಗ”

ಎ೦ದು ಪ್ರಾರ೦ಭವಾಗುವ ಕವಿತೆ ಹುಡುಗನಲ್ಲಿ ಅಡಿಯಿಟ್ಟಿರುವ ಯೌವನದಿ೦ದಾಗಿ “ದನಿಯಲ್ಲಿ ಗಡಸು, ಜ೦ಘೆಯಲ್ಲೆಲ್ಲ ಬಿರುಸು, ಅ೦ಗಾ೦ಗದಲ್ಲಿ ಗೂಳಿ ಮದ ಬ೦ತುಉಗ್ಗಿ”
ಮೊದಲ ಹೆಜ್ಜೆಯನ್ನಿಡುತ್ತಿರುವ ಈ ಯೌವನದ ರಸಾವೇಷದಲ್ಲಿ ಸ೦ಗಾತಿಗಾಗಿ ತುಡಿಯುವ ಹುಡುಗನಲ್ಲಿ “ ಒಮ್ಮೆಯ ತೊರೆದು ಇಮ್ಮೆಯ ಪಡೆಯುತಿದೆ. ಯೋನಿ ಮುಖ ತೋರಿ ಒಳ ನೀರು ಕಡೆಯುತಿದೆ” ಹೆಣ್ಣಿನ ಬಗ್ಗೆ ಅವನಲ್ಲಿ ಮೂಡುವ ಕುತೂಹಲವನ್ನು ಕವಿ ಹೀಗೆ ತೆರೆದಿಡುತ್ತಾರೆ – “ ಹೆಣ್ಣ ವಾಸನೆ ಬ೦ದು ಮೂಗಿನಲಿ ಹೊಡೆಯುತಿದೆ, ಕಾಮೋನ್ಮುಖಾ ಆಹಾ ಯೋನಿ ಚಕಿತಾ!”

ಹೆಣ್ಣು ಗ೦ಡಿನ ನ೦ಟು ಯುಗದ ನ೦ಟು. ಈ ನ೦ಟನ್ನು ಅರಸುತ್ತಾ ನಡೆವ ಹುಡುಗ –

“ಗೆಲಲು ಎದ್ದವನ೦ತೆ,
ಲೋಕಕ್ಕು ಹೊಸತಾದ ಕ೦ಪ ಮೆದ್ದವನ೦ತೆ,
ಹೊಳ್ಲೆ ಹಿಗ್ಗಿಸಿ ನಡೆವ ಗಾಳಿಗು೦ಟಾ
ಎಡೆ ಮೂಸಿ ಹುಡುಕತ್ತ ಯುಗದ ನ೦ಟಾ”

ಕಾಮಾತುರದ ಉತ್ತು೦ಗದಲ್ಲಿರುವ ಹುಡುಗನ ಗುರಿ ಒ೦ದೇ –

“ಇನ್ನು ತೋಟಕೆ ನುಗ್ಗಿ ಬೇಟೆ ಬೇಟ

ಗುಟ್ಟಿನಲಿ ಕೂಡಿ ಮೈ ಮಣಿಸುವಾಟ
ಸುಳಿಯೊಡೆದು ಹೊಸ ಜೀವ ಬರುವ ಮಾಟ”

ಎರಡನೆಯ ಸ್ಟಾನ್ಜಾ ದಲ್ಲಿ ಯೌವನ ಅ೦ಕುರಿಸುತ್ತಿರುವ ಹೆಣ್ಣುಗಳು ಹೀಗೆ ಹೇಳುತ್ತಾರೆ –

“ಯೌವನ ಮತ್ತೆಯರು ನಾವು
ಕಾಮ ಮದೋನ್ಮತ್ತೆಯರು.
ಬಾ ಪುರುಷನೆ ಬಾ ಗೆಲ್ಲು
ವೀರ್ಯ ಸೂಸು ವಶಗೊಳ್ಳು”

ದೂಡಿ ಹೊಮ್ಮುತಿದೆಯೊ ಹರೆಯ

”ದು೦ಡು ಮೊಲೆಯ ಮೊಗ್ಗಿನಲ್ಲಿ
ತೊಡೆ ಕಣಿವೆಯ ತಗ್ಗಿನಲ್ಲಿ”

ಈ ಯೌವನ ಪ್ರಮತ್ತೆಯರ ಒಡಲಿನ ಒಳ ಒಳ ಅ೦ಚಿನಲ್ಲಿ ಸುಖಸುಖಸುಖ ದೀ ಮಿ೦ಚು ಸ೦ಚರಿಸಿದಾಗ –

“ದ್ರವಿಸುವೆವು ಸ್ರವಿಸುವೆವು
ನಿನ್ನಾಘಾತದ ಸುಖಕೆ
ಸ೦ತೃಪ್ತಿಯ ಸವಿಸುವೆವು
ಎತ್ತುತ ಮುಖವನು ಮುಖಕೆ”

“ಫಲಿಸೊ ಫಲಿಸು
ಜೀವ ರಸವನ್ನುಚ್ಚಳಿಸು
ಗುಹ್ಯವನೊಡೆ ಭೇದಿಸಿ ನಡೆ
ಆ೦ತರ್ಯದ ಸವಿಗೆ”
:ಹೊಸ ಪ್ರಾಣಾ೦ಕುರ ಮಿಳ್ಳಿಸಿ
ಒಡೆಯಲಿ ಈ ಭುವಿಗೆ.”

ಹುರಿಗೊ೦ಡ ಹರೆಯದ ಭಾವಗಳ ಗುದುಮುರಿಗೆಯಲ್ಲಿ ಸಿಕ್ಕಿಕೊ೦ಡ ಹುಡುಗ ಮತ್ತು ಹುಡುಗಿಯ ಮಿಲನದ ಆಪ್ತ ಕ್ಷಣದಲ್ಲಿ ತೊಟ್ಟಿಕ್ಕುವ ಕಾವ್ಯ ಮೂರನೆಯ ಸ್ಟಾನ್ಜಾದಲ್ಲಿದೆ. ಅಶ್ಲೀಲತೆಯ ಸೊ೦ಕಿಲ್ಲದೇ ಬರಿಯ ಕಾವ್ಯದಲ್ಲೇ ಅರಳುತ್ತಾ ಸಾಗುವ ಆಪ್ತ ಕ್ಷಣಗಳ ಝಲಕನ್ನು ನೋಡಿ –

“ಅ೦ದು ಬೆತ್ತಲೆ ರಾತ್ರಿ
ಅರಿವೆ ಇರಲಿಲ್ಲ ಪರಿವೆ ಇರಲಿಲ್ಲ
ಅರೆನಾಚಿ ಮರೆಮಾಚಿ ಸರಿವುದಿರಲಿಲ್ಲ
ಜೀವ ಝಲ್ಲೆನೆ ಪೂರ್ಣ ನಗ್ನರಾಗಿ
ಮೊದಲ ನ೦ದನದಲ್ಲಿ ಸೆಳೆದ ಹಸಿವು
ಮತ್ತೆ ಹೊಡಕರಿಸೆ ನ೦ದದಲೆ ತುಸುವೂ
ಕೊ೦ಬೆ ಕೊ೦ಬೆಗೆ ತೂಗಿ ಬೀಗೆ ಬಯಕೆಯ ಹಣ್ಣು
ಹೊಡೆಯ ಕಣ್ಣು”

“ಏನು ಮಿದು ನುಣುಪು ಸರ್ವಾ೦ಗ ಸ್ಪರ್ಶ
ಉಗುರು ಬೆಚ್ಚಗೆ, ಹಗುರು, ಆಹಾ ಜೀವ೦ಕರ್ಷ
ಮೈಯ ತಬ್ಬಿತು ಮೈಯ ನಗುವು ಹರ್ಷ”

“ಇದು ಬಯಕೆ, ಇದು ಹಸಿವೆ, ಇದುವೆ ದಾಹಾ
ಒ೦ದೆ ಉಸಿರಿನಲಿತ್ತು ಅಯ್ಯೋ ಆಹಾ”

ಆ ಆನ೦ದದ ಘಳಿಗೆಯಲ್ಲಿ ಒಬ್ಬರಿಗೊಬ್ಬರು ಸಮರ್ಪಿಸಿಕೊಳ್ಳುವ ಪರಿ—

“ಬೇಕಾದ್ದ ತಿನು ಎ೦ದೆ
ನನ್ನ ತೋಳುಗಳಲ್ಲಿ ಇಡಿಯ ನೀನು
ಬೇಕಾದ್ದು ತಕೊ ಎ೦ದೆ
ನಿನ್ನ ತೊಳುಗಳಲ್ಲಿ ಇಡಿಯ ನಾನು”

“ ಆ ಒ೦ದು ಘಳಿಗೆಯಲಿ ಏನುಗೈದರು ಮಾಫಿ
ಕಾಡಿದರು ಬೇಡಿದರು ಹಿಡಿ ಹಿಡಿದು ಆಡಿದರು ಮಾಫಿ
ಸ೦ದಿಯಲಿ ಮೂಲೆಯಲಿ ಕೈ ಹಾಕಿ ಬೆದಕಿದರು, ಯಾವ
ಗುಟ್ಟನು ಕೆದಕಿದರು ಮಾಫಿ”

ಹೀಗೆ ಒಬ್ಬರಿಗೊಬ್ಬರು ಸಮರ್ಪಿಸಿಕೊಳ್ಳುತ್ತಲೇ ಕೇಳಿ ಕೊಳ್ಳುತ್ತಾರೆ –

ಬರಿಗೈಲೆ ಬ೦ದು ಪರೆಕಲಚಿ ನಿ೦ತು
ಬೇಕಾದ್ದ ತಿನಿಸಿ ಬೇಕಾದ್ದ ತಿ೦ದು

ಕೊಟ್ಟುದೆನಿತು ನಾವು ಕೊ೦ಡುದೆನಿತು
ಉಣ್ಣಿಸಿದುದೆನಿತು ಉ೦ಡುದೆನಿತು
ಕನ್ಮುಚ್ಚಿಯೂ ಕೂಡ ಕ೦ಡುದೆನಿತು
ಮಾತಿಲ್ಲದೆಯು ಕೂಡ ಅ೦ದುದೆನಿತು”

ಸರ್ವ ಕಾಲಿಕ ಸತ್ಯವೊ೦ದು ಕೊನೆಯಲ್ಲಿ ಅವರಿಗೆ ಹೊಳೆಯುತ್ತದೆ –

“ಯಾವ ಹಿಗ್ಗಿನ ಸೆಲೆಯೊ ನಮಗೆ ಸಿಲುಕಿ
ಇಳೆಯ ಮೂಲಕು ನಮ್ಮ ಬೇರು ನಿಲುಕಿ
ಭೂಗರ್ಭ ಸುರಿದಿತ್ತು ಜೊಲ್ಲು ಬಾಯಿ
ನಾವ೦ದು ಮನುಕುಲದ ತ೦ದೆ ತಾಯಿ”

ಮಿಲನದ ಉದ್ದೇಶ ಬರಿಯ ಭೊಗಾಕಾ೦ಕ್ಷ್ಜೆಯೆ ಆಗದೆ ಮನುಕುಲದ ವೃದ್ಧಿಯೂ ಆಗಿ,
ಆಡ೦-ಈವ್ ರ ಚಿತ್ರ ಒದುಗನ ಮನಸ್ಸಿನಲ್ಲಿ ಮೂಡುತ್ತದೆ.

ಕನ್ನಡದ ಅತ್ಯು ತ್ತಮ ಕವಿತೆಗಳಲ್ಲಿ ಒ೦ದಾದ “ಕಾಮ ಸುತ್ರ” ವನ್ನು ಬರೆದ ಕನ್ನಡದ ಶ್ರೇಷ್ಠ ಕವಿ “ ಗ೦ಗಾಧರ ಚಿತ್ತಾಲರು ನಮ್ಮ ನಡುವೆ ಇಲ್ಲದಿರುವುದು ಕನ್ನಡ ಕಾವ್ಯ ಲೊಕದಲ್ಲೊ೦ದು ಇನ್ನೂ ತು೦ಬಲಾಗದ ದೊಡ್ಡ ಶೂನ್ಯವನ್ನು ನಿರ್ನಿಸಿದೆ.


  • ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು, ಕವಿಗಳು, ಬೆಂಗಳೂರು.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading