‘ಸ್ವರ್ಗದ ಬಟ್ಟೆ’ ಕವನ

ಡಬ್ಲ್ಯು. ಬಿ. ಯೇಟ್ಸ್ ನ ” He Wishes for the Clothes of Heaven” ಒಂದು ತೀವ್ರವಾದ ಪ್ರೀತಿಯ ಭಾವನಾತ್ಮಕ ಅರ್ಪಣೆ ಭೌತಿಕ ಸಂಪತ್ತಿಗಿಂತ ಶ್ರೇಷ್ಠ ಎಂಬ ಸಂದೇಶವನ್ನು ನೀಡುವ ರೊಮ್ಯಾಂಟಿಕ್ ಶೈಲಿಯ ಕವಿತೆ. ೧೮೯೯ ರಲ್ಲಿ ಪ್ರಕಟವಾದ ಯೇಟ್ಸ್ ನ “ವಿಂಡ್ ಅಮಾಂಗ್ ದಿ ರೀಡ್ಸ್” ಸಂಕಲನದಲ್ಲಿ ಪ್ರಕಟವಾಗಿದೆ.

ಕವಿ : ಡಬ್ಲ್ಯು. ಬಿ. ಯೇಟ್ಸ್ 
ಕನ್ನಡ : ಮೇಗರವಳ್ಳಿ ರಮೇಶ್

ಅವನು ಸ್ವರ್ಗದ ಬಟ್ಟೆಗಳಿಗಾಗಿ ಹಂಬಲಿಸುತ್ತಾನೆ
ಚಿನ್ನಬೆಳ್ಳಿಗಳಮಿನುಗುವಕಸೂತಿಯ,
ಆಗಸದ ನೀಲಿಯ, ಗಾಢ ರಾತ್ರಿಯಕಪ್ಪಿನ,
ಮುಸ್ಸಂಜೆಯ ಮಸಕು ಬೆಳಕಿನ ಸ್ವರ್ಗದ ಬಟ್ಟೆಗಳು
ನನ್ನಬಳಿ ಇದ್ದಿದ್ದರೆ ಹಾಸುತ್ತಿದ್ದೆ ಪ್ರಿಯೆ,
ಅವುಗಳನು ನಿನ್ನ ಪಾದಗಳಡಿ. ಆದರೇನು ಮಾಡಲಿ ನಾನು ಬಡವ, ನನ್ನಲ್ಲಿರುವುದು ಬರೀ ಕನಸುಗಳು ಮಾತ್ರ, ಪ್ರಿಯೆ ಕನಸುಗಳು ಮಾತ್ರ . ಇರಲಿ ಬಿಡು
ಈ ನನ್ನ ಕನಸುಗಳನ್ನೇ ಹಾಸುತ್ತೇನೆ ನಿನ್ನ ಪಾದಗಳಡಿಗೆ. ಹಗುರಾಗಿ ನಡೆ ಪ್ರಿಯೆ,
ಯಾಕೆಂದರೆ ನೀನು ಹೆಜ್ಜೆ ಹಾಕುವುದು ನನ್ನ ಕನಸುಗಳ ಮೇಲೆ.


  • ಮೇಗರವಳ್ಳಿ ರಮೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading