‘ ಸ್ವಾರ್ಥಿಗಳು’ ಕವನ

ನಮ್ಮಿಂದ ಎಲ್ಲಾ ಸಹಕಾರ ಪಡೆಯುವವರು…ಆನಂತರ ಅದನ್ನೆಲ್ಲ ಮರೆತೆ ಹೋಗುವರು…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಇಂದಿನ ವಾಸ್ತವ ಸ್ಥಿತಿಯನ್ನು ಕವನರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…

ಎಲ್ಲರನ್ನು ಖುಷಿಪಡಿಸುವ ಹುಚ್ಚು
ನೂಕುವುದು ನಮ್ಮನ್ನು ನೋವಿಗೆ
ಅವರವರ ಕೆಲಸ ಕಾರ್ಯಗಳಿಗೆ
ನಮ್ಮನ್ನ ಉಪಯೋಗಿಸಿಕೊಳ್ಳುವರು

ಅಗತ್ಯಗಳಿಗೆಲ್ಲ ಸಹಾಯ ಯಾಚಿಸುವರು
ನಮ್ಮಿಂದ ಎಲ್ಲಾ ಸಹಕಾರ ಪಡೆಯುವವರು
ಕಷ್ಟದ ನೆಪದಲ್ಲಿ ಹಣವನ್ನ ಪಡೆಯುವರು
ಆನಂತರ ಅದನ್ನೆಲ್ಲ ಮರೆತೆ ಹೋಗುವರು

ಸಹಾಯ ಸಹಕಾರ ಪಡೆಯಲಷ್ಟೇ ಸೀಮಿತ
ನಮಗೆ ಕಷ್ಟ ಬಂದಾಗ ಹತ್ತಿರವೂ ಸುಳಿಯರು
ಇಲ್ಲದ ಸಮಸ್ಯೆಯ ಹೇಳಿ ಜಾರಿಕೊಳ್ಳುವರು
ಪಡೆದ ಹಣವನ್ನೂ ಕೊಡದೆ ಸತಾಯಿಸುವರು

ಸ್ವಾರ್ಥ ತುಂಬಿದ ಜನರೇ ಸುತ್ತಲೂ ಇರುವರು
ಸ್ವಾರ್ಥ ಸಾಧನೆಗಷ್ಟೇ ಸೀಮಿತವಾಗಿರುವರು
ಎಲ್ಲರನ್ನೂ ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವರು
ಪರರ ದುಡ್ಡಿನಲ್ಲಿ ತಿಂದುಂಡು ಹಾಯಾಗಿರುವರು

ಇವರಿಗಿಲ್ಲ ಯಾರ ಬಗ್ಗೆಯೂ ಗೌರವ ಪ್ರೀತಿ
ಕಾಣಿಸದು ಇವರಲ್ಲಿ ಸಾಮಾಜಿಕ ರೀತಿ ನೀತಿ
ಇಂಥವರಿಂದ ನಮಗಾಗುವುದು ಫಜೀತಿ
ಹೊಂದಬೇಕು ನಾವು ಇನ್ನಾದರೂ ಜಾಗೃತಿ


  • ನಾಗರಾಜ ಜಿ. ಎನ್. ಬಾಡ, ಕುಮಟ  

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading