ಸುಂಡೆಕಾಯಿ ಮಳೆಗಾಲದಲ್ಲಿ ನಾಲಿಗೆಯ ರುಚಿ ತಣಿಸುವ ಆರೋಗ್ಯಕರ ಮತ್ತು ಸುಲಭದಲ್ಲಿ ಬೇಳೆಯಬಹುದಾದ ತರಕಾರಿ. ಈ ಗಿಡದ ಕಾಯಿಯ ಬಗ್ಗೆ ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಕೆಲವು ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಕಾಯಿಯನ್ನು ಚಚ್ಚಿ ಒಳಗಿರುವ ಬೀಜ ಕಾಣುವಂತೆ ಓಪನ್ ಮಾಡಿ ಕುದಿಸಿ, ನೀರು ಬಗ್ಗಿಸಿ, ಬೀಜ ತೆಗೆದರೆ ಅಡುಗೆಗೆ ಬಳಸಲುಸಿದ್ಧ. ಪಲ್ಯ, ಸಾಂಬಾರ್, ಗೊಜ್ಜು, ರಾಯ್ತಾ,ದೊಸೆ ರೊಟ್ಟಿಗೆಎಣ್ಣೆಬಜ್ಜಿಗೆ ಒಳ್ಳೆಯ ರುಚಿ. ಸಾಧಾರಣವಾಗಿ ಬದನೆಕಾಯಿ ಯಂತೆ ಉಪಯೋಗಿಸಬಹುದಾದ ತರಕಾರಿ ಮತ್ತು ಮೆಡಿಸಿನೂ ಹೌದು. ಕಫ ಮತ್ತು ಕಫ ಸಂಬಂಧ ಕಾಯಿಲೆಗಳು ಯಾವುದೇ ಇರಲಿ ಅಂತವರು ಮಳೆಗಾಲದಲ್ಲಿ ಧಾರಾಳವಾಗಿ ತಿನ್ನಲು ಯೋಗ್ಯ.

ಫೋಟೋ ಕೃಪೆ : google
ಉಷ್ಣ ಶರೀರದವರು ಸ್ವಲ್ಪ ಕಡಿಮೆ ಉಪಯೋಗಿಸುವುದು ಒಳ್ಳೆಯದು.
- ಸುಮನಾ ಮಳಲಗದ್ದೆ