ಕೆಮ್ಮು,ನೆಗಡಿಗೆ ‘ತ್ರಿಕಟು ಚೂರ್ಣ’ – ಡಾ.ರಾಜೇಂದ್ರ ಸ್ವಾಮಿ



ಶೀತ ಮತ್ತು ಕೆಮ್ಮಿಗೆ ಮನೆಯಲ್ಲಿಯೇ ಮಾಡಬಹುದಾದ ಔಷಧಿಯನ್ನು ಡಾ.ರಾಜೇಂದ್ರ ಸ್ವಾಮಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಹತ್ತಿರದ ಆಯುರ್ವೇದ ಔಷಧಿ ಅಂಗಡಿಯಲ್ಲಿ ತ್ರಿಕಟು ಚೂರ್ಣವನ್ನು ತೆಗೆದುಕೊಳ್ಳಿ ಅಥವಾ ಮನೆಯಲ್ಲಿಯೇ ತಯಾರಿಸಿ ಇಟ್ಟುಕೊಳ್ಳಿ. ತ್ರಿಕಟು ಎಂದರೆ ಶುಂಠಿ, ಕಾಳುಮೆಣಸು ಮತ್ತು ಉದ್ದ ಮೆಣಸು ಸಮ ಪ್ರಮಾಣದಲ್ಲಿ ಹಾಕಿ ಅದನ್ನು  ಪುಡಿ ಮಾಡಿಟ್ಟುಕೊಳ್ಳಿ, ಗಾಳಿ ಹೋಗದ ಡಬ್ಬಿಯಲ್ಲಿ ಹಾಕಿ ಇಡಿ.

ಫೋಟೋ ಕೃಪೆ : google

ಮಕ್ಕಳ ಶೀತ ಮತ್ತು ಕೆಮ್ಮಿನ ಸಂದರ್ಭದಲ್ಲಿ ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಎರಡು ಚಿಟಿಕೆಯಷ್ಟು ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಲು ಹೇಳಿ.

ಅಡುಗೆ ಮನೆಯ ಒಲೆಯ ಮೇಲೆ ಕಾಲಿ ಹಂಚನ್ನು ಬಿಸಿ ಮಾಡಿ ಅದರ ಮೇಲೆ ಸ್ವಲ್ಪ ಅರಿಶಿಣದ ಪುಡಿಯನ್ನು ಹಾಕಿ ಅದರ ಹೊಗೆಯನ್ನು ಉಸಿರಾಡಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಮಾಡಬಹುದು. ಎರಡು ದಿನಗಳಲ್ಲಿ ಕೆಮ್ಮು ಮತ್ತು ಶೀತ ಪೂರ್ಣ ಹತೋಟಿಗೆ ಬರುತ್ತದೆ.

ಫೋಟೋ ಕೃಪೆ : google

ಈ ಸಲಹೆ ಮಳೆಗಾಲದ ಕೆಮ್ಮು ಶೀತಕ್ಕಾಗಿ ಎಲ್ಲರೂ ಮಾಡಬಹುದು. ದೀರ್ಘಕಾಲದ ಕೆಮ್ಮು ಇರುವವರು ಹಾಗೂ ಅಸ್ತಮಾದಂತಹ ಸಮಸ್ಯೆ ಇರುವವರು ವೈಯಕ್ತಿಕವಾಗಿ ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ.

ಸಂಪರ್ಕಿಸಿ : ದಿ ರಾಯಲ್ ಅಕಾಡೆಮಿ
7676660113.


  • ಡಾ.ರಾಜೇಂದ್ರ ಸ್ವಾಮಿ  (ಕೇರಳಿ ಆಯುರ್ವೇದ ಪದ್ಧತಿಯ ಆರೋಗ್ಯ ತಜ್ಞರು, ದಿ ರಾಯಲ್ ಅಕಾಡೆಮಿ ಎಂಬ ಸಂಸ್ಥೆಯ ಮೂಲಕ ಹಲವಾರು ಜೀವನ ಶಿಕ್ಷಣಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದಾರೆ), ದಾವಣಗೆರೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading