‘ಮನದಂಗಳದಿ ನಿತ್ಯದ ಸತ್ಯ, ಒಪ್ಪಿಕೊಳ್ಳದ ಹೂ ಬನ’… ಕವಿಯತ್ರಿ ಅಂಜನಾ ಗಾಂವ್ಕರ್ ಅವರು ಬರೆದ ಸುಂದರ ಕವಿತೆ, ತಪ್ಪದೆ ಓದಿ, ಪ್ರೋತ್ಸಾಹಿಸಿ …
ನೆನಪಿನಂಗಳದಿ ನಿತ್ಯ
ನೂರು ಮಲ್ಲಿಗೆ, ಪಾರಿಜಾತ
ಸಂಪಿಗೆ ಗುಲಾಬಿ ಅರಳಿ
ಕಂಪ ಸೂಸುವುದು ಗೆಳೆಯ,
ಹೃದಯದಂಗಳದಿ ಮಿಥ್ಯ
ಬಯಕೆಗಳು ಮೂಡುವುದು
ಹಿಂದಿರುಗಿ ಮತ್ತದೇ ಕಂಪಿನ
ಹೂಮಾಲೆ ತರುವೆಯೆಂದು ಗೆಳೆಯ.
ಮನೆಯಂಗಳದಿ ನಿತ್ಯ
ಚುಚ್ಚುವ ಗುಲಾಬಿ ಮುಳ್ಳು,
ಮಾತುಗಳ ಅಂಚಿನ ಹರಿತ,
ಎಲ್ಲವ ಬಂದು ಕತ್ತರಿಸುವೆಯಾ ಗೆಳೆಯ?
ಮನದಂಗಳದಿ ನಿತ್ಯದ ಸತ್ಯ
ಒಪ್ಪಿಕೊಳ್ಳದ ಹೂ ಬನ….
ಹೊರಟ ನಿನ್ನ ಪಾದಕೇ ತೊಡರುವ
ನೆನಪಿನ ಹೂ ಲತೆಗಳೂ
- ಅಂಜನಾ ಗಾಂವ್ಕರ್ (ಕವಿಯತ್ರಿ)
