ಹೆಚ್ಚಿನ ಅಪಘಾತಕ್ಕೆ ಗುಂಡಿಯೇ ಕಾರಣ ದಿನವು ಹಾರಿ ಹೋಗುತ್ತಿದೆ ಅದೆಷ್ಟೋ ಪ್ರಾಣ …ಕವಿ ನಾಗರಾಜ ಜಿ.ಎನ್. ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಎಲ್ಲಿದೆ ಸ್ವಾಮಿ ಸುರಕ್ಷಿತ ರಸ್ತೆ
ಹದಗೆಟ್ಟು ಹೋಗಿದೆ ನಮ್ಮ ವ್ಯವಸ್ಥೆ
ಎಲ್ಲೆಲ್ಲೂ ತುಂಬಿ ಹೋಗಿದೆ ಗುಂಡಿ
ಸುಗಮವಾಗಿ ಸಾಗದಾಗಿದೆ ಬಂಡಿ
ಸದಾ ರಸ್ತೆಯ ದುರಸ್ತಿಯ ಹೆಸರಲ್ಲಿ
ಹರಿಯುತ್ತಿದೆ ಹಣದ ಹೊಳೆಯು
ತುಂಬುತ್ತಿದೆ ಯಾರ್ಯಾರದೋ ಹುಂಡಿ
ಆದರೂ ರಾರಾಜಿಸುತ್ತಿದೆ ಎಲ್ಲೆಡೆ ಗುಂಡಿ
ಹೆಚ್ಚಿನ ಅಪಘಾತಕ್ಕೆ ಗುಂಡಿಯೇ ಕಾರಣ
ದಿನವು ಹಾರಿ ಹೋಗುತ್ತಿದೆ ಅದೆಷ್ಟೋ ಪ್ರಾಣ
ಹಿಂಡುತ್ತಿದೆ ಸಾಮಾನ್ಯ ಪ್ರಯಾಣಿಕರ ತ್ರಾಣ
ಲೂಟಿಯಾಗುತ್ತಿದೆ ನಮ್ಮ ತೆರಿಗೆಯ ಹಣ
ಅಭಿವೃದ್ಧಿಗೆ ಬೇಕು ಸಕಲ ಮೂಲ ಸೌಕರ್ಯ
ಇಲ್ಲದೇ ಹೋದರೆ ಎಲ್ಲವೂ ವ್ಯರ್ಥವಾಗುವುದು
ಅರ್ಥ ವ್ಯವಸ್ತೆಯು ಹದಗೆಟ್ಟಿ ಹೋಗುವುದು
ನಿತ್ಯ ಜನಜೀವನ ತುಂಬ ಕಷ್ಟಕರವಾಗುವುದು
ರಸ್ತೆ ತುಂಬುವುದು ಅದೆಷ್ಟೋ ಜನರ ಜೇಬು
ಕಸಿದುಕೊಂಡಿದೆ ಎಷ್ಟೋ ಜನರ ನಸೀಬು
ರಸ್ತೆಯ ಗುಂಡಿಗಳಿಗೆ ಬೇಕಿದೆ ಶಾಶ್ವತ ಮುಕ್ತಿ
ತೋರಬೇಕಿದೆ ಇದಕೆ ರಾಜಕೀಯ ಇಚ್ಛಾಶಕ್ತಿ
- ನಾಗರಾಜ ಜಿ. ಎನ್. ಬಾಡ – ಕುಮಟ, ಉತ್ತರಕನ್ನಡ.
