ತಾನು ದಹಿಸುತ ಬಾನು ಬೆಳಗಿಸಿ ಮಕ್ಕಳೆದೆಯಲಿ ಬೆಳೆವಳು…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿ ಬಂದ ‘ತಾಯಿ’ ಕವನ ಹೃದಯ ಸ್ಪರ್ಶಿಸುತ್ತದೆ, ಮುಂದೆ ಓದಿ…
ತಾಯಿಯೊಡಲಲಿ ಒಡೆದು ಮೂಡಿದ
ಕಾಯವಿದುವೆ ಬಾಗಲಿ
ದೇವ ಮಡಿಲದು ಎಂದು ಕೇಡನು
ಬಯಸದಂತೆ ಸಾಗಲಿ
ಕಾಮಧೇನಿನ ಗುಣದ ಮಾತೆಯು
ಸುಧೆಯನಿಡುವ ದೇವಿಯು
ತಾನು ಸವೆಯುತ ನೋವ ಬಸಿಯುತ
ಜೀವದಾತೆ ತಾಯಿಯು
ಜೀವ ಜಗದಲಿ ಭಾವದಿಂದಲಿ
ಹಡೆವ ದಿವ್ಯ ಶಕ್ತಿಯು
ಇಳೆಯ ರೂಪವು ಬೆಳಗು ದೀಪವು
ಮಿಡಿವ ಭವ್ಯ ಭುಕ್ತಿಯು
ತಾನು ದಹಿಸುತ ಬಾನು ಬೆಳಗಿಸಿ
ಮಕ್ಕಳೆದೆಯಲಿ ಬೆಳೆವಳು
ದೇವ ಗಂಗೆಯು ಪಾಪ ಕಳೆವಳು
ಅವಳ ರೂಪದಿ ಉಳಿವಳು
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು.
