The World Ahead 2026 ಇದು ದಡ್ಡರಿಗಲ್ಲ!

ಪ್ರತಿ ವರ್ಷದಂತೆ World Ahead 2026 ನ ಆವೃತ್ತಿಯ ಮುಖಪುಟದಲ್ಲಿ ಅಚ್ಚಾಗಿರುವ ಚಿತ್ರಗಳು ಹಲವು ರಹಸ್ಯಗಳನ್ನು ಬಹಿರಂಗಪಡಿಸುತ್ತಿವೆ. ಅಲ್ಲದೇ ಸೂಕ್ಶ್ಮ ಓದುಗ ವಲಯಕ್ಕೆ ಜಾಗತಿಕ ಭವಿಷ್ಯವಾಣಿಗಳ ರೀತಿಯಲ್ಲಿ ಹಲವು ಸಂದೇಶಗಳನ್ನು ರವಾನಿಸುತ್ತಿವೆ. ಸಂತಶಿಶು ಅವರು ಈ ಪತ್ರಿಕೆಯ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಜಗತ್ತಿನಾದ್ಯಂತ ಅತೀ ಹೆಚ್ಚು ಕುತೂಹಲದಿಂದ ಓದಲ್ಪಡುವ The Economist ಎಂಬ ಪತ್ರಿಕೆಯು 2026ರ ತನ್ನ ವಿಶೇಷ ಆವೃತ್ತಿ, The World Ahead 2026ನ್ನು ಹೊರತಂದಿದೆ. ಪ್ರತಿ ವರ್ಷವೂ ಈ ಪತ್ರಿಕೆ, ಆಯಾ ವರ್ಷದುದಕ್ಕೂ ಏನೇನು ಸಂಭವಿಸಲಿದೆ ಎಂಬುದನ್ನು coding ಮೂಲಕ ಮುಂಚಿತವಾಗಿಯೇ ಬಹಿರಂಗಪಡಿಸುತ್ತದೆ.
ಪತ್ರಿಕೆಯ ಒಡೆತನ ಒಂದು ಯಹೂದಿ ಮನೆತನ the Rothschild family ಗೆ ಸೇರಿದೆ. ಈ ಮನೆತನದ ಹಿಡಿತದಲ್ಲಿ ಜಗತ್ತಿನ ಬ್ಯಾಕಿಂಗ್ ವ್ಯವಸ್ಥೆಯಿದೆ. ಅಂದರೆ ಪರೋಕ್ಷವಾಗಿ ಈ ಕುಟುಂಬವು ಜಗತ್ತಿನ ಒಡೆತನವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ.

ಅಂದಹಾಗೆ, ಪ್ರತಿ ವರ್ಷದಂತೆ World Ahead 2026 ನ ಆವೃತ್ತಿಯ ಮುಖಪುಟದಲ್ಲಿ ಅಚ್ಚಾಗಿರುವ ಚಿತ್ರಗಳು ಹಲವು ರಹಸ್ಯಗಳನ್ನು ಬಹಿರಂಗಪಡಿಸುತ್ತಿವೆ. ಅಲ್ಲದೇ ಸೂಕ್ಶ್ಮ ಓದುಗ ವಲಯಕ್ಕೆ ಜಾಗತಿಕ ಭವಿಷ್ಯವಾಣಿಗಳ ರೀತಿಯಲ್ಲಿ ಹಲವು ಸಂದೇಶಗಳನ್ನು ರವಾನಿಸುತ್ತಿವೆ.

ಸುಮಾರು 200 ವರ್ಷಗಳಿಂದ ಈ ಪತ್ರಿಕೆ ಅಚ್ಚಾಗುತ್ತಿದ್ದು ಇದರ ಓದುಗರಲ್ಲಿ ಜಗತ್ತಿನ ಅತೀ ದೊಡ್ಡ ಶ್ರೀಮಂತರು, ಜಾಗತಿಕ ನಾಯಕರು, ಆರ್ಥಿಕ ತಜ್ಞರು, ರಾಜಕೀಯ ಮುತ್ಸದ್ದಿಗಳು, ಖ್ಯಾತ ವಿಶ್ಲೇಷಕರು ಮತ್ತು ಬುದ್ದಿಜೀವಿಗಳು ಸೇರಿದ್ದಾರೆ.

ಈ ಪತ್ರಿಕೆಯ ಕಳೆದ ವರ್ಷದ edition, The World Ahead 2025 ದ ಮುಖಪುಟವನ್ನು decode ಮಾಡಿದ ನನ್ನ ಅಲ್ಪಮತಿಯು ಹಲವು ವಿಷಯಗಳು ಸತ್ಯವಾಗಿರುವುದನ್ನು ಗಮನಿಸಿತು. ಉದಾಹರಣೆಗೆ ಅಮೇರಿಕಾದ ಕರೆನ್ಸಿ ಮೇಲ್ಮುಖ ಚಲನೆಯಲ್ಲಿದ್ದರೆ, ಚೈನಾದ ಕರೆನ್ಸಿ ಇಳಿಮುಖದಲ್ಲಿ ತೋರಿಸಿದ್ದು, ಯುದ್ಧಗಳ ಸಂಕೇತವಾಗಿ ರಾಕೇಟ್ ಗಳನ್ನು ತೋರಿದ್ದು, ಎಲೆಕ್ಟ್ರಿಕ್ ಕಾರು, ಗ್ಲೋಬ್ ನ ಮಧ್ಯದಲ್ಲಿ ಟ್ರಂಪ್ ನನ್ನು ಕಾಣಿಸಿರುವುದು, ಗ್ಲೋಬಿನ ಮೇಲ್ಗಡೆ ಸೆಟರ್ನ ತೋರಿಸಿದ್ದು. ಕ್ರಾಂತಿಯ ಚಿಹ್ನೆಯನ್ನು ತೋರಿಸಿದ್ದು ಇತ್ಯಾದಿ ಇತ್ಯಾದಿ. ಅದೇ ಆವೃತ್ತಿಯ ಮುಖಪುಟದಲ್ಲಿ ಕಂಡ ಎರಡು ಕಣ್ಣುಗಳು, ಒಂದು ಮೂಗು, ಕುಹಕ ನಗೆಯ ಬಾಯಿ ಹಲವು ರಹಸ್ಯಗಳನ್ನು ಸಾರುತ್ತಿತ್ತು.

2025ನ್ನು ನಾವು ನೋಡಿದೆವು. ಜಗತ್ತು ಹಲವು ಯುದ್ಧಗಳನ್ನು ಕಂಡಿತು. ಲಕ್ಷಾಂತರ ಸಾವು ನೋವುಗಳು ಮನುಷ್ಯತ್ವವನ್ನು ಇನ್ನೂ ಕಟಕಟೆಯಲ್ಲಿ ನಿಲ್ಲಿಸಿವೆ. ಈ ಸಲದ ಮುಖಪುಟ ಕಳೆದ ವರ್ಷಕ್ಕಿಂತಲೂ ಭಯಾನಕವಾಗಿದೆ. ಇಡೀ ಗ್ಲೋಬಿನಲ್ಲಿ ರಾಕೇಟ್ ಗಳನ್ನು, ಯುದ್ಧ ಟ್ಯಾಂಕರ್ ಗಳನ್ನು ತೋರಿಸಲಾಗಿದೆ. ಒಬ್ಬ ಆಟಗಾರನು ಗ್ಲೋಬನ ಹೊರಗಡೆಯಿದ್ದು ಗ್ಲೋಬನ್ನೇ ಕಿಕ್ ಮಾಡುತ್ತಿದ್ದಾನೆ. ಇವು ಕೇವಲ ಕಾಕತಾಳೀಯವಲ್ಲ. ಅವುಗಳ ಹಿಂದೆ ಘನವಾದ ಉದ್ದೇಶವಿದೆ.

ಮುಖಪುಟದಲ್ಲಿ ಇನ್ನೂ ಹಲವು ಚಿತ್ರಗಳಿವೆ. ನನಗೆ ತಿಳಿದ ವಿಚಾರಗಳು ಇಷ್ಟು. ಬುದ್ಧಿಜೀವಿಗಳಾದ ತಾವು ಅವನ್ನು decode ಮಾಡುವಿರಾಗಿ ನಂಬಿದ್ದೇನೆ.


  • ಸಂತಶಿಶು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW