ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದಿಂದ ನೀಡಲಾಗುವ ‘ರಾಜ್ಯ ಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ -೨೦೨೫’ ಗೆ ಆಯ್ಕೆಯಾದ ಲೇಖಕರ ಹೆಸರುಗಳು ಪ್ರಕಟವಾಗಿದೆ, ತಪ್ಪದೆ ಮುಂದೆ ಓದಿ…
ಕಳೆದ ವರ್ಷದಂತೆ 2024 ರಲ್ಲೂ ರಾಜ್ಯ ಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024 ಕೊಡ ಮಾಡಲು ಯಂಡಿಗೇರಿ ಜಿ. ಬಾಗಲಕೋಟ ವತಿಯಿಂದ ರಾಜ್ಯಾದ್ಯಂತ ಕಥಾಸಂಕಲನ, ಕಾದಂಬರಿ ಮತ್ತು ಕವನಸಂಕಲನ ವನ್ನು ಆಹ್ವಾನಿಸಲಾಗಿತ್ತು.

ಆ ಆಹ್ವಾನದ ಮೇರೆಗೆ ರಾಜ್ಯ ಮತ್ತು ಹೊರರಾಜ್ಯದಿಂದಲೂ ಈ ಮೂರು ಸಾಹಿತ್ಯ ಪ್ರಕಾರದಲ್ಲಿ ಲೇಖಕರು ಮತ್ತು ಪ್ರಕಾಶಕರಿಂದ 111 ಕೃತಿಗಳು ಸ್ಪರ್ಧೆಗೆ ಬಂದಿದ್ದವು. ಈ ಮೂರು ಪ್ರಕಾರದಲ್ಲೂ ತಲಾ ಒಂದೊಂದು ಕೃತಿಯನ್ನು ಆಯ್ಕೆ ಮಾಡಬೇಕಾಗಿತ್ತು.ಆ ಕಾರಣ ಕೃತಿಗಳ ಆಯ್ಕೆಗೆ ನಾಡಿನ ಮೂವರು ಹಿರಿಯ ವಿಮರ್ಶಕರು,ಲೇಖಕರು ಆದಂತಹ ಶ್ರೀ ಎಸ್. ಆರ್. ವಿಜಯಶಂಕರ್, ಡಾ. ಎಂ.ಎಸ್. ಆಶಾದೇವಿ ಮತ್ತು ಡಾ. ವಿಕ್ರಮ ವಿಸಾಜಿ ತೀರ್ಪುಗಾರರಾಗಿದ್ದರು.
ರಾಜ್ಯ ಮತ್ತು ಹೊರರಾಜ್ಯದಿಂದ ಬಂದಂಥ 111 ಕೃತಿಗಳಲ್ಲಿ ಈ ಕೆಳಗಿನ ಮೂರು ಕೃತಿಗಳನ್ನು ತೀರ್ಪುಗಾರರು ಆಯ್ಕೆ ಮಾಡಿರುವರು.

ಕಾದಂಬರಿ
ಅಟ್ರಾಸಿಟಿ-ಶ್ರೀ ಗುರುಪ್ರಸಾದ್ ಕಂಟಲಗೆರೆ

ಕಥಾಸಂಕಲನ
ತಿದಿಯ ತುದಿಗೆ ಬೆಂಕಿಯ ಉಗುಳು- ಶ್ರೀ ಲಕ್ಷ್ಮಣ ಶರೆಗಾರ

ಕವನಸಂಕಲನ
ಫ್ಯೂಪಾ- ಶ್ರೀ ಶಶಿ ತರಿಕೆರೆ
ಈ ಮೂವರು ಪ್ರಶಸ್ತಿ ವಿಜೇತರಿಗೆ ತಲಾ ರೂ. 10,000 ಮತ್ತು ಪ್ರಶಸ್ತಿ ಫಲಕ ನೀಡಿ ಗೌರವ ಸನ್ಮಾನ ಮಾಡಲಾಗುತ್ತದೆ.
ಈ ಪ್ರಶಸ್ತಿಪ್ರದಾನ ಸಮಾರಂಭವನ್ನು ದಿ. 23 ಫೆಬ್ರವರಿ 2025 , ರವಿವಾರದಂದು ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್,ಸೆಕ್ಟರ್ ಸಂಖ್ಯೆ-24 ,ನವನಗರ ಬಾಗಲಕೋಟೆ ಇಲ್ಲಿನ ಸಭಾಭವನದಲ್ಲಿ ಬೆಳಗ್ಗೆ 10.30 ಕ್ಕೆ ಜರುಗಿಸಲಾಗುವುದು.
ಈ ಪ್ರಶಸ್ತಿಪ್ರದಾನ ಸಮಾರಂಭಕ್ಕೆ ಹಿರಿಯ ಕಾದಂಬರಿಕಾರರು, ಕತೆಗಾರರಾದ ಶ್ರೀ ಶ್ರೀಧರ್ ಬಳಗಾರ, ಶ್ರೀ ಕೇಶವ ಮಳಗಿ ಅವರು ಆಗಮಿಸುವರು. ಹಾಗೆಯೇ ಕಾರ್ಯಕ್ರಮದ ಉದ್ಘಾಟಕರು ಮತ್ತು ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ಜಾನಕಿ.ಕೆ.ಎಂ. ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿಷ್ಣುವರ್ಧನ ಅವರು ಭಾಗವಹಿಸುವರು.
- ಆಕೃತಿಕನ್ನಡ ನ್ಯೂಸ್
