ಎಲ್ಲ ಅಣಬೆಗಳು ತಿನ್ನಲು ಯೋಗ್ಯವೇ ?

ಮಲೆನಾಡಿನಲ್ಲಿ ಮುಂಗಾರು ಆರಂಭವಾದಾಗ ತರಹಾವಾರಿ ರುಚಿಕರ ಅಣಬೆಗಳು ಸಿಗುತ್ತವೆ. ಆದರೆ ಸಸ್ಯ ವರ್ಗದ ಅಣಬೆಯಲ್ಲಿಯೂ ಕೆಲವೊಂದು ತಿನ್ನುವುದಿಲ್ಲ. ಅಣಬೆಯ ಕುರಿತು ಅರುಣ್ ಪ್ರಸಾದ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ….

ಪಶ್ಚಿಮ ಘಟ್ಟದಲ್ಲಿ 51 ವಿದದ ಅಣಬೆಗಳಲ್ಲಿ 8 ವಿದದ ಅಣಬೆ ಮಾತ್ರ ತಿನ್ನಲು ಯೋಗ್ಯವಂತೆ. ತರಕಾರಿ ಗುಂಪಿನ ಸಸ್ಯ ವರ್ಗಕ್ಕೆ ಸೇರಿದ ಈ ಶಿಲೀಂದ್ರ ಅಣಬೆ ಉತ್ತಮ ಆಹಾರ ಮತ್ತು ಇದರಲ್ಲಿ ಶರ್ಕರ ಪಿಷ್ಟ ಕಡಿಮೆ ಇರುವುದರಿಂದ ಡಯಾಬಿಟೀಸ್ ಇರುವವರಿಗೆ ಒಳ್ಳೆಯ ಆಹಾರ ಇದು.

ನಾನು ನೋಡಿದ್ದು ಇದರಲ್ಲಿ ಕೆಲವೇ ಕೆಲವು ಮತ್ತು ತಿಂದಿದ್ದು ಇನ್ನೂ ಕೆಲವು ಮಾತ್ರ. ನಮ್ಮಲ್ಲಿ ಹೆಚ್ಚಾಗಿ ಸಿಗುವುದು ಹೆಗ್ಗಲಾಣಬೆ ಅಂತ ( ಇದನ್ನು ಬೇರೆ ಹೆಸರಲ್ಲೂ ಕರೆಯುತ್ತಾರೆ) ಇದರಲ್ಲಿ ಕಪ್ಪು ಮೊಗ್ಗು ಮತ್ತು ಬಿಳಿ ಮೊಗ್ಗು ಎಂಬ ಎರಡು ವಿಧವಿದೆ.

ಮುಂಗಾರು ಮಳೆ ಪ್ರಾರಂಭದಲ್ಲಿ ಮತ್ತು ಮುಕ್ತಾಯದ ದಿನಗಳಲ್ಲಿ ಅರಣ್ಯ ಪ್ರದೇಶದಲ್ಲಿ ದೊರೆಯುತ್ತದೆ. ಇದಕ್ಕೆ ಬೇಡಿಕೆ ಜಾಸ್ತಿ, ರುಚಿ ಜಾಸ್ತಿ ಆದ್ದರಿಂದ ಕೆಜಿಗೆ 300 ಕ್ಕೂ ಹೆಚ್ಚು ಬೆಲೆಗೆ ಮಾರಾಟ ಆಗುತ್ತೆ.

ನುಚ್ಚಾಣುಬೆ ಹೆಸರು ಹೇಳುವಂತೆ ಸಣ್ಣ ಗಾತ್ರದ್ದು, ರುಚಿ ಜಾಸ್ತಿ, ಆದರೆ ಇದನ್ನು ಕಿತ್ತು ತಂದು ಸ್ವಚ್ಚ ಮಾಡುವುದು ಮೈತುಂಬಾ ಕೆಲಸವಾದ್ದರಿಂದ ಇದರ ಬಳಕೆ ಕಷ್ಟಕರ. (ಸಣ್ಣವನಾಗಿದ್ದಾಗ ತಿಂದ ನೆನಪು) ಎಣ್ಣಾಣುಬೆ (ಮೇಲ್ಪದರ ಎಣ್ಣೆ ಇದ್ದ೦ತೆ ಇರುತ್ತದೆ) ಇದು ಕೂಡ ಅತ್ಯಂತ ರುಚಿಕರವಾದ ಅಣುಬೆ ಹೆಚ್ಚು ಜನ ಬಳಸುತ್ತಾರೆ. ರಾಣಿ ಬೆನ್ನೂರು, ಹುಬ್ಬಳ್ಳಿ ಭಾಗದಲ್ಲಿ ಹುತ್ತದ ಮಣ್ಣಿನಲ್ಲಿ ಹೆಚ್ಚು ಬೆಳೆಯುವ ಹುತ್ತದ ಅಣಬೆ ಬಳಕೆಯಲ್ಲಿದೆ. (ನಾನು ರುಚಿ ನೋಡಿಲ್ಲ) ಧೂಪದ ಮರದ ಬುಡದಲ್ಲಿ ಬೀಳುವ ಒಣ ಎಲೆ ಮರೆಯಲ್ಲಿ ಬರುವ ಕಪ್ಪು ಬಣ್ಣದ ತಲೆಯ ಮಣ್ಣು ಅಣಬೆ ಅತ್ಯಂತ ರುಚಿಕರ ಅಂತೆ, ಆದರೆ ಇದು ಸಾವಿರ ರೂಪಾಯಿ ಕೊಟ್ಟರು ಸಿಗುವುದಿಲ್ಲ. (ಪ್ರಯತ್ನ ಪಟ್ಟರು ಸಿಕ್ಕಿಲ್ಲ)

ಕೂಗಲು ಅಣಬೆ ಕೋಳಿ ಮಾಂಸದ ರುಚಿ ಇರುತ್ತದೆ. ಕಿತ್ತಳೆ ಹಣ್ಣಿನ ಗಾತ್ರದ ಮೇಲು ಭಾಗ ಅರಿಶಿಣ ಬಣ್ಣ ಒಳಗೆ ಕಪ್ಪು ಮತ್ತು ಬಿಳಿ ಬಣ್ಣದ ಈ ಅಣಬೆಗೆ ಬಾರೀ ಬೇಡಿಕೆ ಇದೆ. (ಗೆಳೆಯರ ಅನುಭವ) ಕೊಡಗಿನ ಮ್ಯಾಜಿಕ್ ಅಣಬೆ ತಿಂದರೆ 24 ಗಂಟೆ ಅಮಲು ಇರುತ್ತದೆ ಎನ್ನುವ ಸುದ್ದಿ ಇದೆ. (ಪ್ರವಾಸೋದ್ಯಮ ಲೇಖನದಲ್ಲಿ ಮಾತ್ರ ನೋಡಿದ್ದು) ಅಣಬೆ ಖಾಧ್ಯದ ಜೊತೆ ಬಿಸಿ ಬಿಸಿ ಅಕ್ಕಿ ರೊಟ್ಟಿ ಅತ್ಯುತ್ತಮ ಕಾಂಬಿನೇಷನ್.

ಕೃತಕವಾಗಿ ಬೆಳೆದು ಮಾರಾಟ ಮಾಡುವ ಅಣಬೆ ಉದ್ಯಮವೂ ಬೆಳೆದಿದೆ ಆದರೆ ಪಶ್ಚಿಮ ಘಟ್ಟದ ಮುಂಗಾರು ಮಳೆ ಅವಲಂಬಿಸಿ ನೈಸರ್ಗಿಕವಾಗಿ ಬೆಳೆಯುವ ಅಣಬೆ ರುಚಿ ಮಾತ್ರ ವಿಶಿಷ್ಟ. ಸಂಪ್ರದಾಯಿಕ ಮೇಲ್ವರ್ಗದ ಬ್ರಾಹ್ಮ ಮತ್ತು ಲಿಂಗಾಯಿತರ ಕುಟುಂಬಗಳಲ್ಲಿ ಅಣಬೆ ಆಹಾರವಾಗಿ ಸ್ವೀಕರಿಸಲು ಅವಕಾಶ ಇಲ್ಲ ನಿಷೇದ ಇದೆ.


  • ಅರುಣ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW