ಕವಿ ಹೆಚ್.ಪಿ.ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ರಿಸರ್ವ್ ಬ್ಯಾಂಕಿನ
ನೋಟುಗಳಲ್ಲಿ
ಭ್ರಷ್ಟರ ಹವಾಲದ
ಕಂತೆಗಳಲ್ಲಿ
ಸಿರಿವಂತರ ರಹಸ್ಯ
ತಿಜೋರಿಗಳಲಿ
ಗಾಂಧಿ
ನೀನು ಬಂಧಿ!
ಈಗೆಲ್ಲ
ನಿನ್ನ ಪಟಕಿಂತ ನಿನ್ನ ಮುಖ ಮುದ್ರೆ
ಇರುವ ನೋಟುಗಳನ್ನೇ
ಇಷ್ಟ ಪಡೋದು
ಈ ಜಗದ ಮಂದಿ!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
