ವಿಷ್ಣು ದಾದಾ ಸ್ಮಾರಕ ಎಲ್ಲಿ? ಎಲ್ಲಿ?…

ಲೇಖನ : ಶಾಲಿನಿ ಪ್ರದೀಪ್

aakritikannada@gmail.com

ಅಂಬಿ ಅಗಲಿಕೆಯ ನೋವು ಮಾಸುವ ಮುನ್ನವೇ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕರ್ನಾಟಕಾದ್ಯಂತ ಅಭಿಮಾನಿಗಳ ಒತ್ತಾಯ ಹೆಚ್ಚಾಗಿದೆ. ಇದು ಸಮಂಜಸನೀಯವೂ ಹೌದು.

ನಾನು ಚಿಕ್ಕಂದಿನಿಂದಲೂ ಅವರ ನಟನೆ ನೋಡುತ್ತಾ ಬೆಳೆದ್ದದಷ್ಟೇ ಅಲ್ಲ.ದಾದಾ ಒಳ್ಳೆಯ ನಟನಾಗುವ ಮುಂಚೆ ಒಳ್ಳೆಯ ವ್ಯಕ್ತಿತ್ವ ಹೊಂದಿದಂತ ಮನುಷ್ಯ ಎನ್ನಬಹುದು ಇದೇ ಕಾರಣಕ್ಕೆ ಬಹುಶಃ ಯಾವುದೇ ಮಾಧ್ಯಮಗಳಿಗೆ ಆಹಾರವಾಗದೆ ಕೊನೆಯವರೆಗೂ ಉಳಿದರು. ಇನ್ನು ದಾದಾ ತೆರೆಯ ಮೇಲೆ ಸೂಟು- ಬೂಟು ಹಾಕಿಕೊಂಡು ಸಿನಿಮಾದಲ್ಲಿ ಒಂದೇ ಎಂಟ್ರಿ ಕೊಟ್ಟರೆ ಸಾಕು ನೆರೆದಿದ್ದ ಪ್ರೇಕ್ಷಕರ ಶಿಳ್ಳೆಯಿಂದಲೇ ತಿಳಿದುಕೊಳ್ಳಬೇಕು ಅವರಷ್ಟು ಸುರದ್ರೂಪಿ ನಟ ಬೇರೋಬ್ಬ ನಿಲ್ಲನೆಂದು. ದಾದಾನಲ್ಲಿದ್ದ ಇನ್ನೊಂದು ವಿಶೇಷ ಗುಣವೇನೆಂದರೆ ತಾವು ಬದುಕಿದ್ದ ದಿನಗಳಷ್ಟು ಪೂರ್ಣಪ್ರಮಾಣವಾಗಿ ನಟರಾಗಿಯೇ ಉಳಿದರು ಮತ್ತು ಎಂದೂ ರಾಜಕಿಯತ್ತ ಕಣ್ಣು ಕೂಡಾ ಆಡಿಸಲಿಲ್ಲ.

ದೂರದಿಂದಲೇ ಅವರನ್ನು ನೋಡುತ್ತಿದ್ದ ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನಿಗೂ ಅವರೆಂದರೆ ಅಚ್ಚುಮೆಚ್ಚು. ಬಿಳಿಯ ಕುರ್ತಾ,ಪಯಿಜಾಮ ತಲೆಗೆ ಬಿಳಿಯ ಬಟ್ಟೆಹಾಕಿಕೊಂಡು ನಿಂತರೆ ಸಾಕ್ಷ್ಯತ ಸಾಹಿ ಬಾಬಾ ಅವರನ್ನೇ ನೋಡಿದ ಹಾಗೆ ಆಗುತ್ತಿತ್ತು. ಅವರ ಮುಖದಲ್ಲಿನ ನಗು, ಶಾಂತತೆ ಅವರ ಎದುರಿದ್ದವರ ಮನಸ್ಸನ್ನು ತಿಳಿಗೊಳ್ಳಿಸುತ್ತಿತ್ತು. ಒಂದು ರೀತಿಯಲ್ಲಿ ಪಾಸಿಟಿವ್ ಎನರ್ಜಿ ತುಂಬುವ ಶಕ್ತಿ ಅವರಲ್ಲಿತ್ತು. ಒಟ್ಟಿನಲ್ಲಿ ಅತ್ಯಂತ ಸರಳ ಅಪ್ಪಟ ಕಲಾವಿದ ಎಂದರೆ ಕೇವಲ ವಿಷ್ಣು ದಾದಾ ಮಾತ್ರ.

ವಿಷ್ಣು ದಾದಾ ನಮ್ಮನೆಲ್ಲ ಅಗಲಿ ಡಿಸೆಂಬರ್ ೩೦ಕ್ಕೆ ಬರೋಬ್ಬರಿ ೧೦ವಾಗುತ್ತದೆ. ಕನ್ನಡದ ಅತ್ಯಂತ ಅದ್ಬುತ ನಟನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಅವರ ಸ್ಮಾರಕ ನಿರ್ಮಾಣಕ್ಕೆ ಇಷ್ಟು ದಿನಗಳು ಬೇಕಾಗಿತ್ತಾ? ಎನ್ನುವ ಪ್ರಶ್ನೆಗಳು, ನೋವು ಎಲ್ಲಾ ಅಭಿಮಾನಿಗಳದು.

ವಿಷ್ಣು ದಾದಾ ಅವರ ಪುಣ್ಯಭೂಮಿ ಅಭಿಮಾನ ಸ್ಟುಡಿಯೋದಲ್ಲಿದೆ. ಇದು ಎಲ್ಲಾ ಅಭಿಮಾನಿಗಳಿಗೂ ಮತ್ತು ಎಲ್ಲಾ ಕರ್ನಾಟಕದ ಜನತೆಗೆ ಗೊತ್ತಿರುವ ವಿಚಾರ. ಒಮ್ಮೆಯಾದರು ದಾದಾ ಅವರ ಪುಣ್ಯಭೂಮಿ ಸ್ಥಳಕ್ಕೆ ಭೇಟಿ ನೀಡಿ. ಅಲ್ಲಿ ಕಾಣಸಿಗುವುದು ಅತ್ಯಂತ ಸರಳವಾದಂತಹ ಮಂಟಪ ಅದರ ಕೆಳಗೆ ದಾದಾ ಅವರ ಸಮಾಧಿ. ದಾದಾ ಸಮಾಧಿ ಯಾವುದೇ ಮಂಟಪವಿಲ್ಲದೆ ಎಷ್ಟೋ ದಿನಗಳವೆರೆಗೂ ಬಿಸಿಲಿಗೆ ತತ್ತರಿಸಿ ಹೋಗಿತ್ತು.ಅದನ್ನು ಕುಟುಂಬದವರು ನೋಡಲಾಗದೆ ಅವರ ಸ್ವಂತ ಹಣದಲ್ಲಿಯೇ ಆ ಮಂಟಪವನ್ನು ನಿರ್ಮಿಸಿದ ಕಥೆ ಕೇಳಿ ನಿಜಕ್ಕೂ ಕಣ್ಣಲ್ಲಿ ನೀರು ತುಂಬಿತು. ೨೨೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಸಾಹಸ ಸಿಂಹನಿಗೆ ಸಿಕ್ಕ ಗೌರವ ಇದು ಸರಿಯೇ? ಅವರ ಪುಣ್ಯಭೂಮಿಯಲ್ಲಿ ಸ್ಮಾರಕ ನಿರ್ಮಿಸಲು ಇಷ್ಟು ವರ್ಷಗಳು ಬೇಕಾಗಿತ್ತಾ? ಕಟ್ಟಲು ಎದುರಾದ ಸಮಸ್ಯೆಗಳೇನು ? ಎನ್ನುವ ಪ್ರಶ್ನೆಗಳು ಅಭಿಮಾನಿಗಳಿಗೆ ಕಾಡುತ್ತಿವೆ.

ಅಷ್ಟೇ ಅಲ್ಲ ಈ ಹಿಂದೆ ಸಮಾಧಿಯನ್ನೇ ಸ್ಥಳಾಂತರ ಮಾಡುವ ವದಂತಿ ಕೂಡಾ ಹಬ್ಬಿತ್ತು.ಒಬ್ಬ ವ್ಯಕ್ತಿ ಸತ್ತಾಗ ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಆಶಿಸುತ್ತಾರೆ. ಆದರೆ ಸಮಾಧಿಯನ್ನೇ ಸ್ಥಳಾಂತರ ಮಾಡುವುದು ನಿಜಕ್ಕೂ ಎಲ್ಲಿಯೂ ಕೇಳಿರಲಿಲ್ಲ. ವಿಷ್ಣು ದಾದಾ ಕೇವಲ ಒಂದು ಕುಟುಂಬಕ್ಕೆ ಯಜಮಾನರಾಗಿರಲಿಲ್ಲ. ಕರ್ನಾಟಕದ ೬ಕೋಟಿ ಕನ್ನಡಿಗರ ಯಜಮಾನರಾಗಿದ್ದರು. ಚಿರನಿದ್ರೆಯಲ್ಲಿರುವ ವಿಷ್ಣು ದಾದಾ ಅವರಿಗೆ ಇನ್ನು ತೊಂದರೆಕೊಡುವುದು ಬೇಡ.

ಸ್ಮಾರಕ ಎನ್ನುವುದು ಅವರಿಗೆ ಕೊಡುವ ಒಂದು ಗೌರವದ ಪ್ರತೀಕ ಎಂದೂ ನಾವೆಲ್ಲಾ ನಂಬಿದ್ದೇವೆ. ಅವರ ಪುಣ್ಯ ಭೂಮಿಯಲ್ಲಿಯೇ ಅವರ ಸ್ಮಾರಕವಾದರೆ ಒಳ್ಳೆಯದು. ಇಲ್ಲವಾದರೆ ಅವರ ಕುಟುಂಬದವರ ಆಸೆಯಂತೆ ಮೈಸೂರಿನಲ್ಲೇ ಆಗಲಿ. ಸ್ಮಾರಕ ಎಲ್ಲಾದರೂ ಆಗಲಿ ಅದು ಸಮಸ್ಯೆ ಅಲ್ಲ. ಆದರೆ ಅವರ ಪುಣ್ಯಭೂಮಿಗೆ ಯಾರಿಂದಲೂ ನೋವಾಗಬಾರದು. ಸರ್ಕಾರ ಆ ಸ್ಥಳದಲ್ಲಿ ಇನ್ನಷ್ಟು ಅನುಕೂಲಗಳನ್ನು ಕಲ್ಪಿಸಿಕೊಡಲಿ ಮತ್ತು ಆದಷ್ಟು ಬೇಗ ಒಂದು ಇತ್ಯರ್ಥಕ್ಕೆ ಬರಲಿ.

ರಾಜಣ್ಣ,ವಿಷ್ಣು ದಾದಾ, ಅಂಬಿ ಅವರು ಕನ್ನಡದ ಮೂರೂ ನಕ್ಷತ್ರಗಳು. ಈ ಮೂವರು ಯಾರಿಗೂ ಕಮ್ಮಿ ಇಲ್ಲ. ಈ ಮೂರೂ ನಕ್ಷತ್ರಗಳು ಸದಾ ಕಾಲ ಕನ್ನಡ ನಾಡಿನಲ್ಲಿ ಮಿನುಗುತ್ತಿರಲಿ ಎನ್ನುವುದು ಎಲ್ಲಾ ಅಭಿಮಾನಿಗಳ ಆಶಯ.

ನಾನು ಕಂಡ ಸಾಹಸ ಸಿಂಹ ವಿಷ್ಣುವರ್ಧನ

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW