ಬೇಸಿಗೆ ಕಾಲಕ್ಕೆ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಉತ್ತಮ. ಇದರಲ್ಲಿ ನೀರಿನಂಶ ಹೆಚ್ಚು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಕಲ್ಲಂಗಡಿ ಹಣ್ಣಿನ ಹಲ್ವಾ ಬಗ್ಗೆ ಯಾರಿಗಾದರೂ ಗೊತ್ತಿದೆನಾ? ವೀಣಾ ಉದಯ ಪಟ್ಟಾಜೆ ಅವರು ಓದುಗರೊಂದಿಗೆ ಕಲ್ಲಂಗಡಿ ಹಣ್ಣಿನ ಹಲ್ವಾ ರೆಸಿಪಿ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಕಲ್ಲಂಗಡಿ ಹಣ್ಣಿನ ಸಿಪ್ಪಿಯನ್ನು ತೆಗೆದು, ತಿರುಳನ್ನು ತುರಿದು ಇಟ್ಟುಕ್ಕೊಳ್ಳಿ.
ಬೇಕಾಗುವ ಸಾಮಾನುಗಳು :
- 3 ಗ್ಲಾಸ್ ತುರಿದ ತಿರುಳು
- 1 ಗ್ಲಾಸ್ ಸಕ್ಕರೆ
- 1 ಚಿಟಿಕೆ ರಂಗಿನ ಹುಡಿ
- 1 ಸ್ಪೂನ್ ಏಲಕ್ಕಿ ಹುಡಿ
- 3 or 4 ಸ್ಪೂನ್ ತುಪ್ಪ
ಮಾಡುವ ವಿಧಾನ : ಮೊದಲಿಗೆ ಬಾಣಲೆಗೆ ತುರಿದ ತಿರುಳು ಹಾಕಿ. ಸಣ್ಣ ಉರಿಯಲ್ಲಿ, ಸ್ವಲ್ಪ ನೀರು ಚುಮುಕಿಸಿ, ಬೇಯಲು ಬಿಡಿ. ನೀರು ಎಲ್ಲಾ ಆರಿದ ನಂತರ ಸಕ್ಕರೆ ಹಾಕಿ
ಸಕ್ಕರೆ ಕರಗಿ, ಅದು ಆರಿದ ನಂತರ ಏಲಕ್ಕಿ, ರಂಗಿನ ಹುಡಿ ಹಾಕಿ. ನಂತರ ತುಪ್ಪ ಹಾಕಿ, ಚೆನ್ನಾಗಿ ತಿರುವಿ ನಂತರ ದ್ರಾಕ್ಷಿ, ಗೋಡಂಬಿ ಹಾಕಿ.
ಬಿಸಿ ಬಿಸಿ ಕಲ್ಲಂಗಡಿ ಹಣ್ಣಿನ ತಿರುಳಿನ ಹಲ್ವಾ ರೆಡಿ
- ವೀಣಾ ಉದಯ ಪಟ್ಟಾಜೆ
