ಇಂದು ಮಹಿಳಾ ದಿನಾಚರಣೆ, ಆದರೆ ಮಹಿಳೆಗೆ ಆದ ಶೋಷಣೆಯ ಲೆಕ್ಕವೆಷ್ಟು?



ಇಂದು ವಿಶ್ವಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದರೆ ವರ್ಷದಲ್ಲಿ ಮಹಿಳೆಗೆ ಆದ ಶೋಷಣೆಯ ಕುರಿತು ಲೇಖಕಿ ರೇಶ್ಮಾ ಗುಳೇದಗುಡ್ಡಾಕರ್ ಅವರ ಚಿಂತನೆಯ ಲೇಖನವನ್ನು ಓದುಗರ ಮುಂದಿಟ್ಟಿದ್ದಾರೆ. ಓದಿ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಮೀ ಟೂ ಅಭಿಯಾನದ ದನಿಯತ್ತಿದ ಪತ್ರಕರ್ತೆ ಪ್ರಿಯಾ ರಮಣಿ ಅವರ ಬಗೆಗಿನ ನ್ಯಾಯಾಲಯದ ತೀರ್ಪು. ಭಾರತ ಮಹಿಳೆಯರಿಗೆ ಕೊಂಚ ಭರವಸೆ ನೀಡಿದೆ ಆದರೆ ನ್ಯಾಯಾಲಯ ಇನ್ನೊ ಮಹಿಳೆಗೆ ನಿಲುಕದ ಗಗನ ಕುಸುಮವಾಗಿದೆ ಪಿತೃ ಪ್ರಧಾನ ಮೆಟ್ಟಿಲುಗಳು ಅವಳನ್ನು ನ್ಯಾಯಲಯದ ಒಳಗೆ ಬಿಡುವುದಿಲ್ಲ. ಕಂಚಾಣದ ಮಹಿಮೆ ನಿಯತ್ತಿಗೆ ಬೀಗ ಹಾಕಿದೆ . ಇದು ಸುಶಿಕ್ಷತ ಅಥವಾ ಅಶಿಕ್ಷತ ಮಹಿಳೆಯಾದರೂ ಒಂದೇ ತಾರತಮ್ಯ , ಭೇದ ಭಾವ ನ್ಯಾಯಾಲಯದ ಅಂಗಳಲ್ಲೆ ಅಳಿನಿಂತಿವೆ .ಈ ತೀರ್ಪಿನ ಹಿಂದೆ ಪ್ರಿಯಾ ಅವರ ಅಗಣಿತ ಮಾನಸಿಕ ವ್ಯಥೆ.ನೋವು ಇದೆ. ಮಹಿಳೆಗೆ ಹಣ,ಜಾತಿ ಅಧಿಕಾರದ ಬಲವಿಲ್ಲದೆ ನ್ಯಾಯ ನ್ಯಾಯಯುತವಾಗಿ ತಲುಪಿದಾಗ ಮಾತ್ರ ಕಾನೂನಿನಲ್ಲಿ ಜನಸಾಮಾನ್ಯರಿಗೆ ನಂಬಿಕೆ ಬರುತ್ತದೆ. ಶೋಷಣೆ ತಗ್ಗುತ್ತದೆ. ಮಹಿಳೆಯ ಬದುಕು ಹಸನಾಗುತ್ತದೆ ,ಹೆಣ್ಣು ತಾಯಿಯಾಗಿ ಬೇಕು ಮಗಳಾಗಿ ಬೇಡ ಎನ್ನುವ ಮನೋಭಾವ ಬೇರು ಬಿಟ್ಟಿರುವಾಗ ಮಹಿಳೆಗೆ ನೆರಳೆಲ್ಲಿ ? . ಪ್ರಕೃತಿ ಯ ಕಣ್ಣಲ್ಲಿ ಗಂಡು ಮತ್ತು ಹೆಣ್ಣು ಸಮಾನರು ಅದರೆ ಮಾನವರ ಬದುಕಲ್ಲಿ ಸಮಾನತಗೆ ಅವಕಾಶ ಬಹಳ ಪ್ರಯಾಸ ಹೆಣ್ಣಿನ ವಿಚಾರದಲ್ಲಿ ನಮ್ಮ ಕಾನೂನು ಬಹಳ ಸುಂದರವಾಗಿದೆ ಮಹಿಳೆ ಮತ್ತು ಅವಳ ಬದುಕಿಗೆ ಅದರೆ ಅದು ಹೊತ್ತಿಗೆಯಲ್ಲಿ ಭದ್ರವಾಗಿ ಕೊಳಿತಿದೆ. ಪಾಲನಗೆ ಇಲ್ಲ. ಪಾಲಿಸಲು ಅದನ್ನು ಓದಿದವರೆ ಹಿಂದೇಟು ಹಾಕಿತ್ತಾರೆ. ಎನ್ನೆಲ್ಲಿ ನ್ಯಾಯದ ಬೆಳಕು ಪಸರಿಸುವದು ನೊಂದ ಬಾಳಿಗೆ ? ದೆಹಲಿಯ ಮಹಿಳಾ ಯೋಗಕ್ಕೆ ಕಳೆದ ವರ್ಷ ದಾಖಲೆ ದೂರುಗಳು ಬಂದವು ಶೋಷಣೆ ತನ್ನ ಧಾಪುಗಲನ್ನು ಲಾಕ್ಡೌನ್ ಸಮಯದಲ್ಲಿ ಹಾಕಿತ್ತು .

ಫೋಟೋ ಕೃಪೆ : girls not bride

ಇನ್ನು ಶಾಲೆ ಇಂದ ದೂರ ಇದ್ದ ಮಕ್ಕಳಿಗೆ ಮಾಂಗಲ್ಯ ದ ಬಂಧನ ಅಡುವ ವಯಸ್ಸಲ್ಲಿ ಅದು ಲಾಕ್ಡೌನ್ ಅಲ್ಲಿ ಸರಾಗವಾಗಿ ನಡಿದಿದೆ ! ಬಾಲ್ಯ ವಿವಾಹ ಇನ್ನೊ ಬದುಕಿದೆ. ಅಲ್ಲದೆ ಇಂದಿಗೂ ಮನೆ, ಹೊಲ, ಕಾರ್ಖಾನೆ, ಎಂದರೆ ಗಾಣದ ಎತ್ತಿನಂತೆ ದುಡಿಯುವ ಜೀವ ಹೆಣ್ಣು. ಜಗತ್ತಿನಾದ್ಯಂತ ಮಾನಸಿಕ ಖಿನ್ನತೆಯ ಮಡಿಲಿಗೆ ಜಾರುವವರು ಮಹಿಳೆ ..!! ನಮ್ಮ ದೇಶದಲ್ಲಿ ಇದು ತುಸು ಹೆಚ್ಚೆ ಇದೆ ಸಾವಿರಾರು ಆಚರಣೆಗಳು ,ಪದ್ದತಿಗಳು ಜೊತೆಗೆ ನಿತ್ಯ ದ ಅಗು ಹೋಗು ಎಲ್ಲವು ನಮ್ಮಲ್ಲಿ ಹೆಣ್ಣಿನ ತಲೆಗೆ ಕಟ್ಟಿ ನಿರಾಳರಾಗುತ್ತಾರೆ .

ಮಹಿಳೆ ಯಾಗಲಿ ಯುವತಿಯಾಗಲಿ ಖಿನ್ನತೆಗೆ ಜಾರಿದರೆ ಹೊರ ಜಗತ್ತಿರಲಿ ಅವಳ ಮನೆಯವರೆ ಅವಳನ್ನು ದೂರವಿಡುತ್ತಾರೆ . ಇದು ಕಟು ವಾಸ್ತವ ಇಂದಿಗೊ ಬ್ರೋಣಹತ್ಯ, ವರದಕ್ಷಿಣೆ ಶೋಷಣೆ ,ನಿಲ್ಲುತ್ತಿಲ್ಲ ನವನವೀನ ಬಗೆಯಲ್ಲಿ ಪ್ರಜ್ವಲಿಸುತ್ತಿವೆ ಸಮಾಜದಲ್ಲಿ ಎಂದರೆ ಎಂತಹ ಸುಧಾರಣೆ ಇದೆ ಎಙದು ತಿಳಿಯುತ್ತದೆ. ಮೃಗತ್ವ ದಿನದಿನಕ್ಕೂ ನಮ್ಮ ಭಾವನಾತ್ಮಕ ನೆಕೆಯಲ್ಕಿ ಗಟ್ಟಿಯಾಗುತ್ತಿದೆ …..!? ಹಿಂದಿಗಿಂತ ಇದಕ್ಕೆ ಪೊರಕವಾದ ಮಹಿಳಾ ಶೋಷಣೆ ಪತ್ರಕೆ ,ದೂರದರ್ಶನ ದಲ್ಲಿ ವರಿದಿಯಾಗುತ್ತಲೇ ಇರುತ್ತದೆ .

ಇನ್ನೊ ಸಾರ್ವಜನಿಕ ಸ್ಥಳಗಳಲ್ಲಿ ಅಂತರ್ಜಾಲ ದಲ್ಲಿ ಪುರಷರ ತನ್ನ ಮೃಗತ್ವ ತೃಷೆ ತೀರಿಸಿಕೊಳ್ಳುತ್ತಾನೆ. ತನ್ನದೆ ಆದರ ರೀತಿಯಲ್ಲಿ . ಒಮ್ಮೆ ತನ್ನ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ನನ್ನ ಗೆಳತಿ ಬಸ್ಸ ಹತ್ತಿ ಕುಳಿತಳು ಪಕ್ಕದಲ್ಲಿ ಬಂದು ಕುಳಿತ ಹಿರಿಯ ವ್ಯಕ್ತಿ ತಂದೆಯ ಸಮ ಇರುವ ವಯಸ್ಸಿನವ ಅವಳೂಂದಿಗೆ ಅನುಚಿತ ನಡತೆ !?? ಪರಿಸ್ಥಿತಿ ಬಿಗಡಾಯಿಸುತ್ತಿರುವಾಗಲೆ ಅಲ್ಲಿಂದ ಪಾಲಯಾನ ಗೈದ…!

ಅನಿರೀಕ್ಷಿತ ನಡೆಯಿಂದ ಅವಳು ಹೊರ ಬರಲು ತಿಂಗಳುಗಳೆ ಕಳೆಯಿತು .ಇದು ಒಂದು ಚಿಕ್ಕ ಉದಾಹರಣೆ ಇದಕ್ಕಿಂತ ಘೋರತೆ ಬಹಳ ನಡೆಯುತ್ತವೆ. ಇಂತಹವರು ಎಲ್ಲಾ ವಲಯಗಳಲ್ಲಿಯು ಇರುತ್ತಾರೆ. ಹೆಣ್ಣನ್ನು ಕಾಮದ ಬೊಂಬೆಯಂತೆ ನೋಡುತ್ತಾರೆ ಹೊರತು ಅವಳಲ್ಲಿ ತನ್ನ ಮಗಳು, ತಂಗಿ, ಅಕ್ಕ ಎಂಬ ಭಾವನೆಯನ್ನು ಅವರು ಕನಸಿನಲ್ಲಿಯೂ ಕಾಣುವದಿಲ್ಲ. ಮದುವೆಯ ವಯಸ್ಸಿನ ಮಕ್ಕಳು ಇದ್ದರು ,ಮೊಮ್ಮಕ್ಕಳು ಇದ್ದರು ಕಂಡವರ ಹೆಣ್ಣುನ್ನು ಕಾಮದಿಂದ ನೋಡುವ ಮುದಿ ನಾಯಿಗಳಗೆ ಕಡಿಮೆ ಇಲ್ಲ .

ಫೋಟೋ ಕೃಪೆ : plan international

ಹೆಣ್ಣಿನ ಭಾವಚಿತ್ರ ಹಾಕಿ ಖಾತೆ ತೆಗೆದು ಅಂತರ್ಜಾಲಗಳಲ್ಲಿ ಅನುಚಿತವಾಗಿ ಮೆಸೆಜ್ ಮಾಡುವದು ,ಕಿರಿಕಿರಿ ಮಾಡುವದು ಎಗ್ಗಿಲ್ಲದೆ ಸಾಗಿದೆ ಇಂತಹ ನೀಚ ವರ್ತನೆಯಲ್ಲಿ ಯಾವ ಸುಖ ಇದೆಯೂ ಆ ಭಗವಂತನೆ ಬಲ್ಲ .ಅದರೆ ನೋವು ಅನುಭವಿಸುವದು ಹೆಣ್ಣು ಕೆಲವರು ನಿರ್ಲಕ್ಷ್ಯ ಮಾಡಿದರೆ ಹಲವರು ಖಾತೆಯನ್ನೆ ಡಿಲಿಟ್ ಮಾಡುತ್ತಾರೆ .ಒಟ್ಟಿನಲ್ಲಿ ಹೆಣ್ಣು ತನ್ನ ಭಾವಕ್ಕೆ ತಕ್ಕಂತೆ ಬದುಕಲು ಹಲವು ಅಡೆತಡೆಗಳು .

ಇಂತಹ ಪ್ರಕರಣ ಸಾವಿರಾರು ಇವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವದಾಗಲಿ ಅಥವಾ ಇದ್ದ ಜಾಗದಲ್ಲೆ ಭದ್ರತೆ ಪಡೆಯುವದು ಬಹಳ ಕಷ್ಟಕರ ಹೆಣ್ಣಿಗೆ . ಸೀತೆಯ ಪಾಡು ಇಂದಿಗೂ ಪ್ರಸ್ತುತ ರಾಮ ,ರಾವಣರ ನಡುವೆ ಅವಳನ್ನು ತುಲನ ಮಾಡಿ ನೋಡುತ್ತಾರೆ . ಶಿವತಾಂಡವ ರಚಿಸಿ ಶಿವ ಪ್ರಿಯ ನಾದ ರಾವಣ ಸೀತೆಯ ಅಪಹರಣ ಮಾಡುತ್ತಾನೆ ಇತ ಒಂದೆಡೆಯಾದರೆ. ಪಿತೃ ವಾಕ್ಯ ಪರಿಪಾಲಕ ,ಮರ್ಯಾದಾ ಪುರುಷ ರಾಮ ಒಂದೆಡೆ .



ರಾವಣನೊಂದಿಗೆ ಸಂಭಾಷಿಸುವಾಗ ಹುಲ್ಲಿನ ಎಸಳು ಹೀಡಿದು ಮಾತನಾಡಿ ಅವನ್ನು ತೃಣಕ್ಕೆ ಸಮನಾಗಿ ಕಂಡ ಸೀತೆ ಅವನ ವೈಭವ ಭೋಗಗಳಿಗೆ ಮರುಳಾಗಲಿಲ್ಲ. single mother ಎಂಬ ಹಣೆಪಟ್ಟಿಯನ್ನು ತಣ್ಣಗೆ ಸ್ವೀಕರಿಸಿ ಬದುಕಿ ತೋರಿಸಿದಳು. ಈ ಹಿರಿಮೆ ತ್ರೇತಾಯುಗದ ಜಾನಕಿಯದು. ರಾಮನಿಗೆ ದಿಟ್ಟ ಉತ್ತರ ನೀಡಿ ರಾಜಾದಿರಾಜ ರಾಮನನ್ನು ನಿರಾಕರಿಸಿದ ಗಟ್ಟಿಗಿತ್ತಿ . ಇಂತಹ ಜಾನಕಿ ಜಗದ ನೋಟದಲ್ಲಿ ಅದರಲ್ಲೂ ಪ್ರತಿ ಹೆಣ್ಣಿನ ರೂಪದಲ್ಲಿ ಉದ್ಬವಿಸುತ್ತಿದ್ದಾಳೆ .

ಮಹಿಳಾದಿನ ಎಂದು ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದರೂ ಹಿಂಸೆಯ ಜಗತ್ತಿಗೆ ಶಾಂತಿ ಎಂಬ ಸೂರ್ಯನ ಕಿರಣ ಬೀಳುವ ದಿಲ್ಲ ವೇನೋ . ಎಂಬಂತೆ ಅದು ಸಾಗುತ್ತಲೆ ಇದೆ. ತಾರತಮ್ಯವನ್ನು ಅಧುನಿಕತೆಯ ಬಣ್ಣ ಬಳಿದುಕೊಂಡು ಸಾಗುತ್ತಿದೆ. ಹೆಚ್ಚು ಓದಿದರೆ ಗಂಡು ಸಿಗುವುದಿಲ್ಲ, ದಪ್ಪ ಇದ್ದರೆ ಮದುವೆ ಇಲ್ಲ. ಹೀಗೆ ಪಟ್ಟಿಸಾಗುತ್ತದೆ. ಪದವಿ ಮುಗಿಯುವದರಲ್ಲೆ ಮದುವೆ ಗೊತ್ತಾಗುತ್ತದೆ .ಕಡಿಮೆ ಓದಿರ ಬೇಕು ಎಂದು ಕೇಳುವ ಪುರಷ ಮಹಾಶರಿಗೆ ಕಡಿಮೆ ಇಲ್ಲ .ಕಾಲ ಯಾವುದರಲ್ಲಿ ಬದಲಾದರೂ ಮಹಿಳೆಯ ಕಟ್ಟುಪಾಡು, ನೀತಿ ನಿಯಮ ವಿಧಿಸುವದರಲ್ಲಿ ಗಮನಾರ್ಹ ಬದಲಾವಣೆ ಇನ್ನೊ ಅಗಿಲ್ಲ. ಸ್ವಾವಲಂಬನೆ ಬದುಕು ಪಡೆಯಲು ಅವಳು ಹರಸಾಹಸ ಪಡಬೇಕು .


  • ರೇಶ್ಮಾ ಗುಳೇದಗುಡ್ಡಾಕರ್
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW