‘ವಂಡರ್ ವಿಮೆನ್’ ಸಿನಿಮಾ ಕುರಿತು – ಆತ್ಮಾ ಜಿ.ಎಸ್

ಅಂಜಲಿಮೆನನ್ ನಿರ್ದೇಶನದ ವಂಡರ್ ವಿಮೆನ್ ಸಿನಿಮಾದಲ್ಲಿ ನಿತ್ಯಾ ಮೆನನ್, ಪಾರ್ವತಿ, ನಾಡಿಯಾ ಮೊಯ್ದು ಸೇರಿದಂತೆ ನಟಿಮಣಿಯರಿರು ಚಿತ್ರ. ಇದೊಂದು ಮಹಿಳಾ ಪ್ರಧಾನ ಇರುವಂತ ಚಿತ್ರವಾಗಿದ್ದು, ಆ ಚಿತ್ರದ ಕುರಿತು ಲೇಖಕಿ ಆತ್ಮಾ ಜಿ.ಎಸ್ ಅವರ ಒಂದು ನೋಟ, ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…

ಸಿನಿಮಾ : ವಂಡರ್ ವಿಮೆನ್
ನಿರ್ದೇಶಕರು: ಅಂಜಲಿ ಮೆನನ್
ಕಲಾವಿದರು:ನಿತ್ಯಾ ಮೆನನ್, ಪಾರ್ವತಿ, ನಾಡಿಯಾ ಮೊಯ್ದು .
ಸಿನಿಮಾ ವೀಕ್ಷಿಸಲು : sony_liv

ತಾಯ್ತನ…

ಹೆಣ್ಣಿಗೆ ಅನುಭೂತಿ, ಪುನರ್ಜನ್ಮ,ಸಾರ್ಥಕ ಕ್ಷಣದ ಭಾವ.ಅದರಲ್ಲೂ ಮೊದಲ ಬಾರಿ ಗರ್ಭಿಣಿಯಾದಾಗ ಪ್ರತಿ ಕ್ಷಣವೂ ಹೊಸ ಹೊಸ ಅನುಭವಗಳ ಆಗರ.ಒಮ್ಮೊಮ್ಮೆ ಕಾರಣವಿಲ್ಲದೆ ಸಂತಸ ಅನುಭವಿಸಿದರೆ ಇನ್ನು ಕೆಲವೊಮ್ಮೆ ವ್ಯಕ್ತಪಡಿಸಲು ಆಗದ ದುಗುಡ.ಇದು ಹೆಣ್ಣಿಗೆ ಪ್ರಕೃತಿ ಕೊಟ್ಟ ಅದ್ಭುತ ವರವಾದರೂ, ಸುಲಭವಾಗಿ ನಿಭಾಯಿಸಲು ಆಗದೇ ಸಹಜವಾಗಿ ಸ್ವೀಕರಿಸಲು ಆಗದ ಹೆಣ್ಣು ಮಕ್ಕಳು ನಮ್ಮ ಜೊತೆಯಲ್ಲಿಯೇ ಇದ್ದಾರೆ.ಇಂತಹ ಭಿನ್ನ ಮನೋಭಾವದ ,ಬೇರೆ ಬೇರೆ ಸ್ಥಳದಿಂದ.ಸಾಮಾಜಿಕ ಸ್ತರದಲ್ಲಿ ವ್ಯತ್ಯಾಸ ಇರುವ 6 ಮಂದಿ ಗರ್ಭಿಣಿ ಸ್ತ್ರೀಯರು ಪ್ರಸವ ಪೂರ್ವ ತರಬೇತಿಗೆ ಒಂದೆಡೆ ಸೇರುವುದು ಹಾಗೂ ಅಲ್ಲಿಯ ವಿವಿಧ ಅನುಭವಗಳ ಕಥೆಯೇ #wonder_women.

ಸುಮನಾ “ತರಬೇತಿ ನೀಡುವ ಸಂಸ್ಥೆಯ ಒಡತಿಯೂ ಒಳ್ಳೆಯ ಮನದ ಹೆಣ್ಣು ಮಗಳು.ಗರ್ಭಿಣಿ ಮಹಿಳೆಯರು ತನ್ನದೇ ಅಸ್ತಿತ್ವ ಕಂಡು ಕೊಳ್ಳಬೇಕು ಎಂದೇ ಆರಂಭಿಸುವ ತರಬೇತಿಯ ಮೊದಲ ದಿನವೇ ಒಬ್ಬಬ್ಬರ ಭಿನ್ನ ಮನಸ್ಥಿತಿ ಒಬ್ಬರಿಗೊಬ್ಬರಿಗೆ ಪರಿಚಯವಾಗುತ್ತದೆ..ಭಿನ್ನ ಮನಸ್ಥಿತಿಯ ನಡುವೆಯೂ ಒಬ್ಬರಿಗೆ ಒಬ್ಬರು ಪೂರಕವಾಗಿ ಸಂಬಂಧಗಳ ನಡುವೆ ಬಂಧಿಯಾಗುವುದು ಕಥೆಯ ಹಂದರ..

ಮನರಂಜನೆ,ಹಾಡು,ಮಾಮೂಲು ಸಿನಿಮಾಗಳ ಯಾವುದೇ ಮಾನದಂಡ ಇಲ್ಲದ ಚಿತ್ರವಿದು.ಸಹಜವಾಗಿ ಹೆಣ್ಣು ತಾಯ್ತನಕ್ಕೆ ಅಣಿಯಾದರು ಆಕೆಯ ಮಾನಸಿಕ ಸ್ಥಿತಿ ಮನೆಯವರು ಮತ್ತು ಆಕೆಯ ಗಂಡ ಹೇಗೆ ಆಕೆಯ ಜೊತೆಯಲ್ಲಿ ಸ್ಪಂದಿಸುತ್ತಾರೆ ಎಂಬುದರ ಮೇಲೆ ಅವಲಂಬಿತ.ಮಗು ತಾಯಿಯ ಸ್ವತ್ತು ಎಂಬ ಭಾವ ಈಗಲೂ ಕೆಲವು ತಂದೆಯಲ್ಲಿ ಸ್ಥಿರವಾಗಿದೆ.ಮಗುವನ್ನು ಮುಟ್ಟಲು ,ಎತ್ತಲು ಹರಸಾಹಸ ಪಡುವವರು ಇದ್ದಾರೆ. ಈ ದೃಷ್ಟಿಯಲ್ಲಿ ಗಂಡು ಹಾಗೂ ಹೆಣ್ಣಿಗೆ ಪೂರ್ವತಯಾರಿ ಅಗತ್ಯ.ಇಂತಹ ಪೂರ್ವ ತಯಾರಿಯನ್ನು ಚಂದವಾಗಿ ಕಟ್ಟಿಕೊಟ್ಟಿದ್ದು  wonder women ಸಿನಿಮಾ. ಹೊಸದಾಗಿ ಸಂಸಾರದ ಬಂದಕ್ಕೆ ಒಳಗಾದ, ಮಗುವಿನ ನಿರೀಕ್ಷೆಯಲ್ಲಿ ಇರುವ ದಂಪತಿಗಳು ಒಟ್ಟಾಗಿ ಕುಳಿತು ನೋಡಿದಲ್ಲಿ ತಮ್ಮೊಳಗೆ ತಾವು ಇಣುಕಿ ನೋಡಿ ಒಂದಷ್ಟು ಅರಿಯುವ ಕೆಲಸ ಆದೀತು.

ಅಂಜಲಿಮೆನನ್ ನಿರ್ದೇಶನದ ಚಿತ್ರವೆಂದರೆ ನೋಡುಗರಿಗೆ ಒಂದು ಕಲ್ಪನೆ ಬರುತ್ತದೆ. ಸಾಮಾಜಿಕ ಕಳಕಳಿ. ಸುತ್ತಮುತ್ತಲಿರುವ ಸಮಸ್ಯೆಗಳ ಕೇಂದ್ರೀಕೃತ ಕಥೆಗಳನ್ನು ಹೆಣೆಯುವ ರೀತಿ ಇಷ್ಟವಾಗುವಂಥದ್ದು. ಹೆಸರು ಕೇಳಿಯೆ “ಮಹಿಳಾ ಪ್ರಧಾನ “ಎಂಬ ಭಾವದಲ್ಲಿ ಸಿನಿಮಾ ನೋಡುವ ಅಗತ್ಯವಿಲ್ಲ.ಎಲ್ಲಿಯೂ ಹೆಣ್ಣನ್ನು ಹೆಣ್ಣೇ ಶೋಷಣೆ ಮಾಡುವ ಅತ್ತೆ,ಗಂಡನ ಹಿಡಿತದಲ್ಲಿರುವ ಹೆಣ್ಣಿನ ಚಿತ್ರಣ ಇಡೀ ಸಿನಿಮಾದಲ್ಲಿ ಕಾಣಸಿಗದು.ಹಾಗಂತ ಮಹಿಳೆಯರ ಸಹಜ ಸಣ್ಣತನ,ಅರಿವಿಲ್ಲದೆ ಹೆಂಡತಿಯನ್ನು ನಿರ್ಲಕ್ಷಿಸುವ ಗಂಡನ ಪಾತ್ರ ಕಂಡು ಬರುವುದಲ್ಲದೆ, ತರಬೇತಿ ಕೇಂದ್ರದಲ್ಲಿ ಹೆಂಡತಿಯೊಂದಿಗೆ ದಿನ ವ್ಯಯಿಸುವುದರ ಮೂಲಕ ಒಬ್ಬರನ್ನು ಒಬ್ಬರು ಅರಿತುಕೊಳ್ಳುವುದು ಚಿತ್ರಿತವಾಗಿದೆ. ಈವರೆಗೂ ಹೊಸ ಹೊಸ ಕಥೆ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ನಿತ್ಯಾ ಮೆನನ್, ಪಾರ್ವತಿ, ನಾಡಿಯಾ moidu. ಅಭಿನಯ ಚೆನ್ನಾಗಿದೆ. ಮಲಯಾಳಂ ಭಾಷೆಯ ಸಿನಿಮಾ ಆದರೂ ಇಂಗ್ಲಿಷ್ ಸಂಭಾಷಣೆಗಳೆ ಹೆಚ್ಚಿರುವುದರಿಂದ ಮಲಯಾಳದ Nativity ಕೊರತೆ ಗೊತ್ತಾಗುತ್ತದೆ.

ಮಹಿಳೆಯೂ ಅದ್ಭುತ ಆಗಬಲ್ಲಳೇ ? ಎಂದು ಪದಗಳಲ್ಲಿ ಹಿಡಿಯಲು ಆಗದ ಭಾವಕ್ಕೆ ದಕ್ಕುವ wonder_women
sony_liv


  • ಆತ್ಮಾ ಜಿ.ಎಸ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW