ಎಂಭತ್ತೇಳರ ಗೇರುಗಲ್ಲು ಚಂದ್ರ ಮೌಳೇಶ್ವರ ಭಟ್ಟರು

ಅಕ್ಷರಗಳ ಜೊತೆ ಒಡನಾಡುವ ಬಗೆ ಮತ್ತು ಚಿತ್ತಾರಗಳು ಸೂಸುವ ಹೊಸ ಹೊಸ ಅರ್ಥಗಳನ್ನು ಹೇಳಿಕೊಟ್ಟ ಗೇರುಗಲ್ಲಿನ‌ ಚಂದ್ರ ಮೌಳೇಶ್ವರ ಭಟ್ಟರಿಗೀಗ ಎಂಭತ್ತೇಳು ವರುಷಗಳೆಂದರೆ ನಂಬಲಾಗುತ್ತಿಲ್ಲ. ಅವರೊಂದಿಗಿನ ಒಡನಾಟದ ಕುರಿತು ಲೇಖಕ ನೆಂಪೆ ದೇವರಾಜ್ ಅವರ ಒಂದು ಬರಹ, ಮುಂದೆ ಓದಿ…

ಹಾರೋಗೊಳಿಗೆ ಹಿರಿಯ ಪ್ರಾಥಮಿಕ ಶಾಲೆಗೆ ಇವರು ಮುಖ್ಯೋಪಾದ್ಯಾಯರಾಗಿ ಬಂದಿದ್ದಾಗ ನಾನಿನ್ನೂ ಒಂದನೆ ತರಗತಿಯವ.ಶಿಸ್ತನ್ನು ತಮ್ಮ ಕಠೋರ ಕರ್ಮಟ ಗಾಂಭೀರ್ಯದ ಮೂಲಕ ಹೊರ ಹೊಮ್ಮಿಸುತ್ತಿದ್ದ ಚಂದ್ರ ಮೌಳೇಶ್ವರರು ಅಡ್ರಾ ಬಡ್ರಾ ತನವೆ ಶಾಲೆಯೊಳಗಿನ ಬಹು ಮುಖ್ಯ ಸಂಸ್ಕೃತಿ ಎಂದು ತಿಳಿದಿದ್ದವರಿಗೆ ಚಂದ್ರ ಮೌಳೇಶ್ವರ ಭಟ್ಟರು ಕಬ್ಬಿಣದ ಕಡಲೆಯಾದರು.ಮಾನವ ಪ್ರೇಮಿ ದಿವಂಗತ ಜಿ.ವಿ ಶಂಕರಪ್ಪ,ಮಹದೇವಪ್ಪ,ಧರ್ಮರಾವ್ ಮುಂತಾದ ಶಿಕ್ಷಕರುಗಳು ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ ತರುವಲ್ಲಿ ಚಂದ್ರ ಮೌಳೇಶ್ವರ ಭಟ್ಟರಿಗೆ ಹೆಗಲಾಗಿದ್ದರಿಂದ ನನ್ನಂತವರ ವಿದ್ಯಾಭ್ಯಾಸದ ಬಡಕಲು ರೆಕ್ಕೆಗೆ ಸಣ್ಣ ಪುಟ್ಟ ಪುಕ್ಕಗಳು ಅಂಟಿಕೊಳ್ಳಲು ಕಾರಣವಾಯಿತು.ಇನ್ನೂರು ಮಕ್ಕಳ ಶಾಲೆಯೊಂದು ಎಪ್ಪತ್ತರ ದಶಕದಲ್ಲಿ ಗಿಜಿಗುಡುತ್ತಿದ್ದ ಬಗೆ ಕಿವಿಯೊಳಗಿನ್ನೂ ಜೀವಂತ.

ಚಂದ್ರ ಮೌಳೇಶ್ವರ ಭಟ್ಟರು

ಚಿತ್ರಕಲೆಯಲ್ಲಿ ಪರಿಣಿತರಾಗಿದ್ದ ಚಂದ್ರ ಮೌಳೇಶ್ವರ ಭಟ್ಟರು ಈ ಎಂಭತ್ತೇಳನೇ ವಯಸ್ಸಿನಲ್ಲೂ ತಮ್ಮೊಳಗಿನಿಂದ ಹೊರತರುವ ಆ ಮುಗ್ಧ ನಗು ಇನ್ನೂ ಜೀವಂತವಾಗಿ ಸೆಳೆಯುತ್ತಾ ಹೋಯಿತು.ಮೊನ್ನೆ ಸಿಕ್ಕಾಗ ಹಳೆಯದೆಲ್ಲ ನೆನಪಿಗೆ ಬಂತು. ಕೆರೆಯ ಮಣ್ಣನ್ನು ತಂದು ಗಣಪತಿ ಮಾಡುತ್ತಿದ್ದ,ತಾವು ಹಾಗೂ ಹೆಸರಾಂತ ಕಲಾವಿದರುಗಳು ಬರೆದ ಚಿತ್ರಗಳ ಪ್ರದರ್ಶನ ಏರ್ಪಡಿಸುತ್ತಿದ್ದ ,ಚಿತ್ರ ಬರೆಯಲು ಹುಡುಗರನ್ನು ಪ್ರೆರೇಪಿಸುತ್ತಿದ್ದ ಚಂದ್ರ ಮೌಳೇಶ್ವರ ಭಟ್ಟರ ಹೆಸರನ್ನು ಕಡೆಯತನಕವೂ ಸ್ಪಷ್ಟವಾಗಿ ಉಚ್ಚರಿಸಲು ಸಾಧ್ಯವಾಗದವರ ಸಂಖ್ಯೆ ಅಗಾಧವಾಗಿದ್ದ ಕಾಲವದು. ಶಾಲೆಯ ಕಾಂಪೌಂಡಿನ ಕಲ್ಲು ಚಪ್ಪಡಿಯ ಮೇಲೆ ಸುಣ್ಣದಲ್ಲಿ ರಾತ್ರೋನು ರಾತ್ರಿ ಬರೆದಿದ್ದ ‘ತುರ್ತು ಪರಿಸ್ಥಿತಿ ರದ್ದಾಗಲಿ,ಸರ್ವಾಧಿಕಾರಿಗೆ ಧಿಕ್ಕಾರ’ದಂತಹ ಘೋಷಣೆಗಳನ್ನು ಇಡೀ ದಿನ ಶ್ರಮ ಹಾಕಿ ಅಳಿಸಿದ್ದೂ ಸಹಾ ಇವರೊಂದಿಗೆ ಮಾತನಾಡುತ್ತಿದ್ದಾಗ ನೆನಪಿಗೆ ಬಂತು.


  • ನೆಂಪೆ ದೇವರಾಜ್ – ಲೇಖಕರು, ಪತ್ರಕರ್ತರು, ತೀರ್ಥಹಳ್ಳಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW