ಖರ್ಜೂರದ ಮಹತ್ವ –  ಸುಮನಾ ಮಳಲಗದ್ದೆ

ಖರ್ಜೂರ ಮರಳುಗಾಡಿನ ಬೆಳೆಯಾದರೂ ಈಗ ಇದನ್ನು ಇಲ್ಲಿಯೇ ಬೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು ಅದರಲ್ಲಿ ಯಶಸ್ಸು ಕಂಡಿದ್ದಾರೆ.ಆ ಖರ್ಜೂರದ ಮಹತ್ವದ ಕುರಿತು ನಾಟಿವೈದ್ಯೆ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಸಾಧಾರಣವಾಗಿ ಖರ್ಜೂರವನ್ನು ಎರಡು ರೀತಿಯಲ್ಲಿ ಉಪಯೋಗಿಸ್ತಾರೆ. ಒಂದು ಒಣ ಖರ್ಜೂರ ಅಂದ್ರೆ ನಮ್ಮಲ್ಲಿ ಅದಕ್ಕೆ ಉತ್ತುತ್ತೆ ಅಂತ ಹೇಳ್ತಾರೆ ಮತ್ತೊಂದು ನಾವೆಲ್ಲ ತಿಂತಿವಲ್ವಾ ಸಿಹಿ ಇರುತ್ತೆ ನೋಡಿ ಆ ಖರ್ಜೂರ.

ಖರ್ಜೂರದ ಮರದಲ್ಲಿ ಈಚಲ ಮರದಲ್ಲಿ ಹ್ಯಾಗೆ ಬಟ್ಟಿಯನ್ನು ಇಳಿಸಿ ತೆಗಿತಾರೆ.ಇದು ತೆಂಗಿನ ಮರದ ಕಳ್ಳಿನ ರುಚಿ ಇರುತ್ತದೆ. ಇದು ಕೆಲವು ಕಡೆ ಮಾತ್ರ ಅದರ ಔಷಧಿಯಾಗಿ ಬಳಕೆ ಇದೆ. ಖರ್ಜೂರವನ್ನು ಹೋಳಿಗೆ ಹಲ್ವಾ ಮತ್ತು ಮುಂತಾದ ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಉತ್ತುತ್ತೆಯನ್ನು ಪಲ್ಯ ಸಾಂಬಾರು ಮಜ್ಜಿಗೆ ಹುಳಿ, ಕೋಸಂಬರಿ, ಕಾಯಿರಸ. ಮುಂತಾದ ತುಂಬಾ ರುಚಿಯುಕ್ತವಾದ ಆಹಾರವನ್ನು ತಯಾರಿಸಬಹುದು.

ಫೋಟೋ ಕೃಪೆ : vijayavani

1)ಇದರ ಬೀಜ ಕಾಫಿ ಬೀಜ ಹುರಿದಂಗೆ ಹುರಿಬೇಕಾಗುತ್ತೆ ನಂತರ ಪುಡಿ ಮಾಡಿ ಕಾಫಿ ಮಾಡಿ ಕುಡಿದರೆ ಮಂಡಿ ನೋವು ಕಡಿಮೆ ಮಾಡುತ್ತೆ ಮತ್ತು ವಾತ ರೋಗವನ್ನು ಗುಣ ಮಾಡುತ್ತೆ.
2)ಖರ್ಜೂರ ತಿನ್ನುವುದರಿಂದ ದೌರ್ಬಲ್ಯ ದೂರವಾಗುತ್ತದೆ ಮತ್ತು ಆಯಾಸ ನಿವಾರಣೆಯಾಗುತ್ತದೆ.
3)ಖರ್ಜೂರದ ಸೇವನೆಯಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ.
4) ಖರ್ಜೂರದ ಸೇವನೆಯು ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು.
5) ಹಿಮೋಗ್ಲೋಬಿನ್ ಹೆಚ್ಚಿಸಲು ಖರ್ಜೂರದ ಉಪಯೋಗವು ಒಳ್ಳೆಯ ಮೆಡಿಸಿನ್.
6) ಖರ್ಜೂರದ ಸೇವನೆಯಿಂದ ಮಲವಿಸರ್ಜನೆ ಸರಿಯಾಗಿ ಆಗುತ್ತದೆ ಇದರಿಂದ ಪೈಲ್ಸ್ ಸಮಸ್ಯೆ ಬರುವುದಿಲ್ಲ.
7) ಮಕ್ಕಳು ಮತ್ತು ವೃದ್ಧರು ಖರ್ಜೂರವನ್ನು ತಿನ್ನುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ .
8) ಆಹಾರದಲ್ಲಿ ಖರ್ಜೂರವನ್ನು ಸೇರಿಸಿದರೆ, ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ.
9)ಖರ್ಜೂರದ ಸೇವನೆಯು ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.
10) ಹೆಂಗಸರಲ್ಲಿ ಅಪೌಷ್ಟಿಕತೆಯ ಕೊರತೆಯಿಂದ ಮಕ್ಕಳಾಗದಿದ್ದರೆ ಖರ್ಜೂರದ ಸೇವನೆಯು ಆರೋಗ್ಯಕರ ಗರ್ಭಧಾರಣೆಯನ್ನು ಸಹ ಬೆಂಬಲಿಸುತ್ತದೆ.
11) ಉತ್ತುತ್ತೆಯನ್ನು ಮಕ್ಕಳು ಜಗಿದು ತಿನ್ನುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ.
12) ಉತ್ತುತ್ತಿಯ ಲೇಹ ದೇಹದ ಪುಷ್ಟಿಗೆ ತುಂಬಾ ಒಳ್ಳೆಯದು.


  •  ಸುಮನಾ ಮಳಲಗದ್ದೆ – ನಾಟಿ ವೈದ್ಯರು
0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW