ಆಲೆಮನೆಗಳಲ್ಲಿ ಬೇಲದ ಹಣ್ಣು ನಿಶೇಧವಿದೆ

ಬೇಲದ ಹಣ್ಣಿನ ಉಂಡೆ, ಬೆಲ್ಲ ಅಚ್ಚು ಬೆಲ್ಲ ತಯಾರಿಸುವ ಆಲೆಮನೆಗಳಲ್ಲಿ ನಿಶೇಧವಿತ್ತು. ಯಾಕೆ? ಎನ್ನುವುದನ್ನು ಅರುಣ್ ಪ್ರಸಾದ್ ಈ ಲೇಖನದ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಭಾರತೀಯ ಮೂಲದ ಬೇಲದ ಹಣ್ಣು. ಇದರಿಂದ ರುಚಿಕರ ಚಟ್ನಿ ತಯಾರಿಸುತ್ತಾರೆ. ಉಂಡೆ ಬೆಲ್ಲ ಅಚ್ಚು ಬೆಲ್ಲ ತಯಾರಿಸುವ ಆಲೆಮನೆಗೆ ಇದು ನಿಶೇಧ?. ಬೆಲ್ಲದ ಹದ ಕೆಡಿಸುವ ಗುಣ ಬೇಲದ ಹಣ್ಣಿಗೆ ಇದೆ. ಈಗೆಲ್ಲ ಅಲೇ ಮನೆಗಳು ಅಸ್ತಿತ್ವದಲ್ಲಿ ಇಲ್ಲ, ಮಲೆನಾಡಿನ ಜೋನಿ ಬೆಲ್ಲದ ಆಲೇ ಮನೆ ಅಲ್ಲೊಂದು ಇಲ್ಲೊಂದು ನಡೆಯುತ್ತದೆ.

ಫೋಟೋ ಕೃಪೆ : google

ಬಯಲು ಸೀಮೆಯಲ್ಲಿ ಜೋನಿ ಬೆಲ್ಲದ ತಯಾರಿಕೆ ಮತ್ತು ಬಳಕೆ ಇಲ್ಲವೇ ಇಲ್ಲ. ಅಲ್ಲಿ ಅಚ್ಚು ಬೆಲ್ಲ ಮತ್ತು ಉಂಡೆ ಬೆಲ್ಲ ಮಾತ್ರ ತಯಾರಿಸುತ್ತಿದ್ದರು. ಈಗ ಅದೂ ಇಲ್ಲವಾಗಿದೆ. ಅಚ್ಚು ಬೆಲ್ಲ ಮತ್ತು ಉಂಡೆ ಬೆಲ್ಲ ಮಾಡಲು ವಿಶೇಷ ಹದ ಹಿಡಿಯುವ ಅನುಭವಿ ಪಾಕ ಪ್ರವೀಣರು ಆ ಕಾಲದಲ್ಲಿ ಇರುತ್ತಿದ್ದರಂತೆ.

ಆದರೆ ಈ ಅನುಭವಿ ಪಾಕ ಪ್ರವೀಣರಲ್ಲಿ ವೃತ್ತಿ ದ್ವೇಷ ಇರುತ್ತಿದ್ದರಿಂದ ಅವರು ಬಯಲು ಸೀಮೆಯಲ್ಲಿ ಹೇರಳವಾಗಿರುತ್ತಿದ್ದ ಬೇಲದ ಹಣ್ಣು, ಕಬ್ಬಿನ ಹಾಲು, ಬೆಲ್ಲ ತಿನ್ನಲು ಬರುತ್ತಿದ್ದ ಮಕ್ಕಳ ಕೈಯಲ್ಲಿ ಕೊಟ್ಟು ಕುಡಿಯುತ್ತಿದ್ದರು. ಕಬ್ಬಿನ ಹಾಲು, ಬೆಲ್ಲ ಮಾಡಲು ಬಳುಸುವ ಕೊಪ್ಪರಿಗೆ ಹಾಕಿಸಿ ಬಿಡುತ್ತಿದ್ದರಂತೆ. ಆಗ ಆ ಕೊಪ್ಪರಿಗೆಯ ಬೆಲ್ಲ ಉಂಡೆ ಕಟ್ಟುವ ಹದಕ್ಕೆ ಯಾವ ಕಾರಣಕ್ಕೂ ಬರುತ್ತಿರಲಿಲ್ಲವಂತೆ.

ಫೋಟೋ ಕೃಪೆ : google

ಆದ್ದರಿಂದಲೇ ಬಯಲು ಸೀಮೆಯಲ್ಲಿ ಆಲೆಮನೆಯಲ್ಲಿ ಬೇಲದ ಹಣ್ಣಿನ ಪ್ರವೇಶಕ್ಕೆ ನಿಶೇದವಿತ್ತಂತೆ. ಕಬ್ಬಿನ ಹಾಲು ಬೆಲ್ಲ ಕೇಳಿ ಬರುವ ಮಕ್ಕಳ ಜೇಬು – ಶಾಲೆ ಚೀಲ ಪರೀಕ್ಷೆ ಮಾಡಿ ಬೇಲದ ಹಣ್ಣು ಇದ್ದರೆ ಆ ಮಕ್ಕಳಿಗೆ ಧರ್ಮದ ಏಟು ಬೀಳುತ್ತಿಂತೆ. ಹೀಗಾಗಿ ಬೇಲದ ಹಣ್ಣು ಅಂದರೆ ಆಲೆಮನೆಯವರು ಬೆಚ್ಚಿ ಬೀಳುತ್ತಿದ್ದರಂತೆ,ಬೆಲ್ಲದ ಹದ ತಪ್ಪಿಸುವ ಬೇಲದ ಹಣ್ಣು ವಿಶೇಷವಾಗಿದೆ.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading