ವಿಶ್ವ ಓಜೋನ್ ದಿನ

ಸೆಪ್ಟೆಂಬರ 16 ರಲ್ಲಿ ಮಾಂಟ್ರಿಯಲ್ ಪ್ರೋಟೊಕಾಲ್ ನಲ್ಲಿ ಹಾಗೂ 1994 ಸೆಪ್ಟೆಂಬರ್ 16 ರಲ್ಲಿ ನಡೆದ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಾಮಾನ್ಯ ಸಭೆಯಲ್ಲಿ ಓಝೋನ್ ಪದರದ ಸಂರಕ್ಷಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ದಿನ ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ವಿಶ್ವ ಓಜೋನ್ ದಿನವೆಂದು ಆಚರಿಸುತ್ತಾರೆ.

The theme for World Ozone Day 2026 is Global Action for a Cooler Planet – Celebrating 10 years of sustainable cooling under the Kigali Amendment to the Montreal Protocol.

“As umbrella protects us from rain, Ozone layer protects the earth from sun”. ಮಳೆಗಾಲದಲ್ಲಿ ಕೊಡೆಯು ನಮ್ಮನ್ನು ಮಳೆ ಇಂದ ರಕ್ಷಿಸುವ ಹಾಗೆ, ಓಝೋನ್ ಪದರು ನಮ್ಮನ್ನು ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ.

“Ozone is like our Heart, If broken then we are Finish”

ಇದನ್ನು ಅರಿತು 1987 ಸೆಪ್ಟೆಂಬರ 16 ರಲ್ಲಿ ಮಾಂಟ್ರಿಯಲ್ ಪ್ರೋಟೊಕಾಲ್ ನಲ್ಲಿ ಹಾಗೂ 1994 ಸೆಪ್ಟೆಂಬರ್ 16 ರಲ್ಲಿ ನಡೆದ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಾಮಾನ್ಯ ಸಭೆಯಲ್ಲಿ ಓಝೋನ್ ಪದರದ ಸಂರಕ್ಷಣೆಗೆ ಸಂಬಂಧಿಸಿದ ಅಂತರರಾಷ್ಟ್ರೀಯ ದಿನ ಆಚರಿಸಲು ನಿರ್ಧರಿಸಲಾಯಿತು.

ಇದರ ಉದ್ದೇಶ ಓಝೋನ ಪದರಿನ ಸವಕಳಿ ಹಾಗೂ ಜಾಗತಿಕ ತಾಪಮಾನ ಏರಿಕೆ ನಿಯಂತ್ರಣ, ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ.
ಓಝೋನ್ ರಂಧ್ರ ಕಂಡು ಬಂದದ್ದು 1956 ರಲ್ಲಿ ಆಮ್ಲಜನಕದ ಮೂರು ಪರಮಾಣುಗಳು ಸೇರಿ ಓಝೋನ್ (03) ಆಗುತ್ತದೆ. ವಾತಾವರಣದ ಮೇಲೆ ಭೂಮಿಯನ್ನು ಆವರಿಸಿರುವ ಓಝೋನ್ ಪದರವು ಅಪಾಯಕಾರಿಯಾದ ಸೂರ್ಯನಿಂದ ಬರುವ ಅತಿನೇರಳೆ ಕಿರಣವನ್ನು ಹೀರುತ್ತವೆ. ಭೂಮಿಯಿಂದ 20-30 ಕಿ.ಮೀ ಮೇಲೆ ಓಝೋನ್ ಪದರು ಭೂಮಿಯನ್ನು ಆವರಿಸಿದೆ.

ಓಝೋನ್ ಪದರನ್ನು 1913 ರಲ್ಲಿ ಫ್ರೆಂಚ್ಚನ್ ಭೌತಶಾಸ್ತ್ರದ ವಿಜ್ಞಾನಿ ಚಾರಲ್ಸ್ ಫರ್ಬಿ ಕಂಡು ಹಿಡಿದನು. ಓಝೋನ್ ಪದರಿನ ಮುಖ್ಯವಾದ ಕಾರ್ಯವೆಂದರೆ ಸೂರ್ಯನಿಂದ ಬಂದ 97-98% ಅತಿನೇರಳೆ ಕಿರಣಗಳನ್ನು ಹಿರಿಕೊಂಡು ಬೆಳಕಿನ ಕಿರಣಗಳನ್ನು ಮಾತ್ರಭೂಮಿ ಮೇಲೆ ಬೀಳುವಂತೆ ಮಾಡುತ್ತದೆ.

ಬೆಳಕಿನ ಕಿರಣಗಳ ರಾಸಾಯನಿಕ ಕ್ರಿಯೇ ಇಂದ ಓಝೋನ್ ಪದರು ತಯಾರಾಗುತ್ತದೆ. ಎಂದು ಬ್ರಿಟಿಷನ್ ಭೌತವಿಜ್ಞಾನಿ ಸೆಡ್ನಿ ಚಾಪಿಮನ್ 1930 ರಲ್ಲಿ ಕಂಡು ಹಿಡಿದನು. ಸೂರ್ಯನಿಂದ ಬರುವಂತಹ ಅತಿನೇರಳೆ ಕಿರಣಗಳು ವಾತಾವರಣದಲ್ಲಿ ಇರುವ ಆಮ್ಲಜನಕ (o2) ಮೇಲೆ ಬಿದ್ದಾಗ ಆಮ್ಲಜನಕ ಎರಡು ಅಣುಗಳಾಗಿ (o) ಬೇರ್ಪಡುತ್ತವೆ. ಬೇರ್ಪಡೆದ ಇದ್ದ ಆಮ್ಲಜನಕ (o2) ಜೊತೆ ಮತ್ತೊಂದು ಅಣು ಸಂಯೋಗವಾಗಿ ಓಜೋನ್ (o3) ಆಗುತ್ತದೆ.

ಓಝೋನ್ ಪದರು ನಾಶವಾಗಲು ಮುಖ್ಯವಾದ ಕಾರಣಗಳು ಪ್ರಿಜ್ ಮತ್ತು ಕೋಲ್ಡ ಹೌಸಗಳಲ್ಲಿ ಉಪಯೋಗಿಸುವ Chlorofluorocarbons (CFCS) ಮತ್ತು ವಾಯುಮಾಲಿನ್ಯ CFCS ಯ ಒಂದು ಅಣುವು ಓಝೋನ್‍ನ 100,000 ಅಣುಗಳನ್ನು ನಾಶ ಮಾಡುತ್ತದೆ. ಇದು ಸರಪಳಿ ರಾಸಾಯನಿಕ ಕ್ರಿಯೆಯಾಗಿದೆ.

ಓಝೋನ್ ಪದರದ ನಾಶದಿಂದ ಅತಿಯದ ಮಳೆ, ಅತಿಯಾದ ಬರ, ಸಮುದ್ರ ಮಟ್ಟದಲ್ಲಿ ಏರಿಕೆ, ನದಿ ಪ್ರವಾಹಗಳು, ಒಣಗುತ್ತಿರುವುದು , ಬರಿದಾಗುವ ಕಾಡುಗಳು, ಭೂತಾಪ ಏರಿಕೆ, ಅತಿಯಾದ ಚಳಿ, ಅತಿಯಾದ ಶಾಖ, ಚಂಡಮಾರುತಗಳ ಹೆಚ್ಚಳ ಮತ್ತು ಇಂಗಾಲ ಇತ್ಯಾದಿ ವಾಯುಗಳ ಹೊರಸೊಸುವಿಕೆ ಹೆಚ್ಚಳದಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ.
“I can feel that the world this day is different than all the days of our lives before”.  ಇದರಿಂದಾಗಿ ಶಹರದಲ್ಲಿ ಉಸಿರಾಡಲು ಶುದ್ಧವಾದ ಗಾಳಿಸಿಗುವುದೇ ಕಷ್ಟವಾಗಿದೆ. ಮತ್ತು ಮನುಷ್ಯನು ಚರ್ಮದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ.

“If earth is our mother, then Ozone is our father”.

ಪ್ರಾಣಿಗಳು ಜೀವಿಸಲು ಮುಖ್ಯ ವಾದದು ಭೂಮಿ, ಆದರಿಂದ ಭೂಮಿಯನ್ನು ಭೂ ತಾಯಿಗೆ ಹೊಲಿಸುತ್ತೇವೆ. ಅದೆ ರೀತಿ ಓಝೋನ್ ಪದರು ಸಹ ಜೀವಿಸು ಅಷ್ಟೆಮುಖ್ಯ. ಭೂಮಿಯ ಮೇಲೆ ಇರುವ ಓಝೋನ್ ಪದರು ನಾಶವಾದರೆ ಸೂರ್ಯನಿಂದ ಬರುವ ಅತಿನೇರಳೆ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತವೆ. ಆಗ ಭೂಮಿಯ ಮೇಲೆ ಅತಿಯಾದ ಶಾಖ, ಉಂಟಾಗುತ್ತದೆ. ಭೂಮಿಯ ಮೇಲೆ ಇರುವ ಉತ್ತರ, ದಕ್ಷಿಣ ಧೃವದಲ್ಲಿ ಹಾಗೂ ಭೂಮಿಯ ಮೇಲೆ ಇರುವ ಎಲ್ಲ ಮಂಜುಗಡ್ಡೆ ಕರಗಿ ನೀರಾಗಿ ನದಿಗಳ ಮುಖಾಂತರ ಸಮುದ್ರವನ್ನು ಸೇರುತ್ತವೆ. ಆಗ ಸಮುದ್ರದ ಮಟ್ಟವು 113 ಅಡಿಗಳಷ್ಟು ಎರುತ್ತದೆ. ಸಮುದ್ರ ಮಟ್ಟ ಇಷ್ಟು ಏರಿದರೆ ಭೂಮಿಯು ನೀರಿನಿಂದ ಆವರಿಸುತ್ತದೆ. ಈ ದಿನವನ್ನೇ ನಾವು ಡೂಮ್ಸಡೇ ಎಂದು ಕರೆಯುತ್ತೇವೆ.

ಮಾನವನು ಇದೇ ರೀತಿಯಾಗಿ ಪರಿಸರವನ್ನು ನಾಶಮಾಡುತ್ತ ಹೋದರೆ ಒಂದು ದಿನ ಭೂಮಿಯು ಮಂಗಳ ಗೃಹದಂತೆ ಬರುಡಾಗಿ ಬಿಡುತ್ತದೆ.

Protect the ozone layer, save life on earth : ಓಜೋನ್ ಪದರು ರಕ್ಷಿಸಿ, ಭೂಮಿಯ ಮೇಲೆ ಇರುವ ಜೀವಿಗಳನ್ನು ಜೀವಿಸಲು ಸಹಕರಿಸಿ.

“Save ozone layer else you may lie in no zone”

‘ವಿಶ್ವ ಓಝೋನ್ ದಿನ’ ದಂದು ನಾವು ಪ್ರತಿಜ್ಞೆ ಗೈಯೋಣ “ನಾವು ಇಂದಿನಿಂದ ಪರಿಸರ ಮಾಲಿನ್ಯ ಹಾಗೂ ಓಝೋನ್ ಪದರಿನ ನಾಶ ಮಾಡುವುದನ್ನು ನಿಲ್ಲಿಸುತ್ತೇವೆ. ನಾವು ವಾಸಿಸುವ ಭೂಮಿಯನ್ನು ಚೆನ್ನಾಗಿ ಇಟ್ಟುಕೊಂಡು ಹೇಗೆ ನಮ್ಮ ಹಿಂದಿನವರು ಓಝೋನ್ ಸಹಿತ ಭೂಮಿಯನ್ನು ಕಾಪಾಡಿಕೊಂಡು ನಮಗೆ ಕೊಟ್ಟರೋ ಹಾಗೆ ನಾವು ಮುಂದಿನ ಪೀಳಿಗೆಗೆ ಓಝೋನ್ ಸಹಿತ ಭೂಮಿಯನ್ನು ಕೊಡುತ್ತೇವೆ.


ಸಂಗ್ರಹ ಲೇಖನ: ಸಂತಸ ಡಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading