ಆತ್ಮಹತ್ಯೆ ಅಭಿಮಾನವೆ? – ಡಾ. ರಾಜಶೇಖರ ನಾಗೂರ

ಮಕ್ಕಳಿಗಿರೊ ಬುದ್ಧಿಕೂಡ ಇಲ್ಲ. ನಟರ ಮೇಲಿನ ಅಭಿಮಾನ ಒಂದು ಟಿಕೇಟ್ ತೆಗೆದುಕೊಂಡು ಸಿನೆಮಾ ನೋಡುವವರೆಗೆ ಇರಬೇಕು. ನಾವೇ ಟಿಕೇಟ್ ತೊಗೊಂಡ್ ಎಗ್ರೊಹಾಗಿರಬಾರದು. ಅಲ್ವ? – ಡಾ. ರಾಜಶೇಖರ ನಾಗೂರ, ತಪ್ಪದೆ ಮುಂದೆ ಓದಿ…

ಇತ್ತೀಚೆಗೆ ಬಳ್ಳಾರಿಗೆ ಹೋಗಿದ್ದೆ. ಆಗ ರಾಜ್ಯಾದ್ಯಂತ ಕೆಜಿಎಫ್ ಸಿನಿಮಾ ಹವಾ. Cousins ಜೊತೆಗೂಡಿ ನಾನೂ ಮಗನೊಂದಿಗೆ ಮೂವಿಗೆ ಹೋದೆ. ಯಶ್ ನ ದೊಡ್ಡ ಕಟ್ಟೌಟಗಳು, ಅಭಿಮಾನಿಗಳ ಯಶ್ ಜೊತೆಗಿನ ಫೋಟೋಗಳು ರಾರಾಜಿಸುತ್ತಿದ್ವು. ಯಶ್ ನ ಅಬ್ಬರ ನೋಡುವಾಗ ಟಿಕೆಟ್ ಸಿಗಲ್ವೆನೋ ಅನ್ನೊ ಆತಂಕ ಕೂಡಾ. ಹಾಗೆ ಕ್ಯೂ ನಲ್ಲಿ ನಿಂತಾಗ ಅನಿಸ್ತು ಎಂತಹ ಜನಪ್ರಿಯ ನಟ. ಒಬ್ಬ ನಟ ಎಷ್ಟೊಂದು ಜನಪ್ರಿಯನಾಗಬಹುದಲ್ವ ಅಂತೆಲ್ಲ ಒಂದ್ ಕ್ಷಣಕ್ಕೆ ವಿಚಾರಗಳ ಅಬ್ಬರ ಬಂದಹೋದ್ವು. ಮರುಕ್ಷಣವೇ ನನ್ನ ಆರು ವರ್ಷದ ಮಗ ಅಜಯನಿಗೆ ಸಹಜವಾಗಿಯೇ ಕೇಳಿದೆ. ನೀನು ಯಶ್ ನ ಹಾಗೆ ಆಗ್ತಿಯಾ? ನೋಡು ಅದೆಷ್ಟು ಜನ ಅಂದೆ.

ಪಪ್ಪಾ ಮೂವಿ ಹೀರೋ ಸತ್ರೆ ಬಾಡಿ ಮೇಲೆ ಇಂಡಿಯಾ ಫ್ಲ್ಯಾಗ್ ಹಾಕ್ತಾರಾ ಅಂತ ಕೇಳ್ದ. ನೋ ಮಗ ಅಂದೆ. ಆಸ್ಟ್ರೊನಾಟ್ (ಗಗನ-ಯಾನಿ ಆಗುವ ಕನಸು ಅವನಿಗೆ) ಸತ್ತರೆ ಇಂಡಿಯನ್ ಫ್ಲ್ಯಾಗ್ ಹಾಕ್ತಾರಾ ಅಂತ ಕೇಳ್ದ. ಹೂ ಮಗಾ ಹಾಕಬಹುದು ಅಂದೆ. ಹಾಗಾದ್ರೆ ನಾನು ಯಶ್ ಆಗಲ್ಲ ಆಸ್ಟ್ರೊನಾಟ್ (Austronaut) ಆಗ್ತಿನಿ ಅಂದು ಬಿಡೋದಾ. ಆ ಮರುಕ್ಷಣವೇ ಆ ದೈತ್ಯಾಕಾರದ ಯಶ್ ನ ಕಟ್ಟೌಟಗಿಂತ ನನ್ನ ಆರು ವರ್ಷದ ಮಗ ಎತ್ತರವಾಗಿ ಕಂಡ. ನನ್ನ ಮಗುವೇ ಹೀರೊ ಅನಿಸಿದ್ದು ಸತ್ಯ. ಆ ಮೂವಿ ಮುಗಿಯೋವರೆಗೂ ಅವನ ಮಾತುಗಳೇ ಕಿವೀಲಿ.

ಫೋಟೋ ಕೃಪೆ :google

ಇತ್ತೀಚೆಗೆ ಯಾರೋ ಅಂಧಾಭಿಮಾನಿಯೊಬ್ಬ ಯಶ್ ಬರ್ತಡೆ ಇರುವಾಗ ಯಶ್ ಕೇಕ್ ಕಟ್ ಮಾಡ್ಲಿಲ್ಲ ಅಂತ ಆತ್ಮ ಹತ್ಯೆ ಮಾಡ್ಕೊಂಡನಂತೆ, ಕೇಳಿ ಬೇಜಾರಾಯ್ತು. ಈ ಆರು ವರ್ಷದ ಕಂದನಿಗಿರೋ ದೇಶಾಭಿಮಾನ, ಸ್ವಾಭಿಮಾನ,ತಿಳುವಳಿಕೆ ದೊಡ್ಡವರಿಗಿಲ್ಲವಲ್ಲ ಅಂತ ಮರುಕ ಬಂತು. ಅಭಿಮಾನ ಇಡುವುದಾದರೆ ಹೆತ್ತತಾಯಿ, ಹೊತ್ತ ತಾಯಿ(ದೇಶ)ಯ ಮೇಲಿಡ್ರಪ್ಪ. ನಟನೆ ಮಾಡೋರಿಗಾಗಿ ಸಾಯ್ತಿರಿ ಅಂದ್ರೆ, ಕನಿಷ್ಠ ನಿಮ್ಮ ಮೇಲೆ ನಿಮಗೆ ಅಭಿಮಾನವಿಲ್ಲವೆಂತಾಯ್ತು. ಮೂವಿಗಳು ಬರ್ತಾವೆ ಹೋಗ್ತಾವೆ. ನಟಿಸುವ ಹೀರೋಗಳು ಬರ್ತಾರೆ ಹೋಗ್ತಾರೆ. ಜೀವನ ಬರುತ್ತಾ??

ನಟರ ಮೇಲಿನ ಅಭಿಮಾನ ಒಂದು ಟಿಕೇಟ್ ತೆಗೆದುಕೊಂಡು ಸಿನೆಮಾ ನೋಡುವವರೆಗೆ ಇರಬೇಕು. ನಾವೇ ಟಿಕೇಟ್ ತೊಗೊಂಡ್ ಎಗ್ರೊಹಾಗಿರಬಾರದು. ಅಲ್ವ?
Powerful people come not from powerful places but from powerful mind.


  • ಡಾ. ರಾಜಶೇಖರ ನಾಗೂರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading