‘ಯೋಗಮಯಂ ಯೋಗ ಸಾಧನಾ ಕೇಂದ್ರ’ ಧಾರವಾಡ ಹಾಗೂ ಮಹಾತ್ಮ ಬಸವೇಶ್ವರನಗರ ಅಭಿವೃದ್ಧಿ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ
ಸಾಮೂಹಿಕ ಯೋಗ ಪ್ರದರ್ಶನ ಮತ್ತು ಸಭಾ ಕಾರ್ಯಕ್ರಮ ನಡೆಯಿತು, ಮುಂದೆ ಓದಿ…
ಯೋಗಮಯಂ ಯೋಗ ಸಾಧನಾ ಕೇಂದ್ರ – ಧಾರವಾಡ ಹಾಗೂ ಮಹತ್ಮಾ ಬಸವೇಶ್ವರ ನಗರ ಅಭಿವೃದ್ದಿ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಜೂನ್ ೨೧ ,೨೦೨೩ ರಂದು “ವಿಶ್ವ ಯೋಗ ದಿನಾಚರಣೆ” ಯನ್ನು ಸಾಮೂಹಿಕ ಯೋಗ ಪ್ರದರ್ಶನ ಮತ್ತು ಸಭಾ ಕಾರ್ಯಕ್ರಮದ ಮೂಲಕ ಧಾರವಾಡ ನಗರದಲ್ಲಿ ಯಶಸ್ವಿಯಾಗಿ ಆಚರಿಸಲಾಯಿತು.
ಕುಮಾರಿ ಮದುವಂತಿ ರಾಜಪುರೋಹಿತರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶ್ರೀ ಸುರೇಶ ಹೆಗಡೆಯವರು ಎಲ್ಲರನ್ನೂ ಸ್ವಾಗತಿಸಿ ಅತಿಥಿಗಳ ಪರಿಚಯ ಮಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಮಹಾ ಪೌರರಾದ ಶ್ರೀ ಈರೇಶ ಅಂಚಟಗೇರಿಯವರು ಮಾತನಾಡುತ್ತಾ ದೇಶದ ಪ್ರಜೆಗಳಿಗೆ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಲು ಪ್ರೇರಣೆ ನೀಡಿದ್ದು ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಎಂದು ಹೇಳುತ್ತಾ ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿಯೆಂದು ಹಾರೈಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಗೆ ಸದಸ್ಯರು ಹಾಗೂ ಹಿರಿಯರಾದ ಶ್ರೀಯುತ ಶ್ರೀಧರ ಜಿ. ನಾಡಗೇರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಯೋಗಭ್ಯಾಸದಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ದೇಶದ ಪ್ರತಿಯೊಬ್ಬ ನಾಗರಿಕನು ಯೋಗವನ್ನು ತಪ್ಪದೇ ಮಾಡುವ ಮೂಲಕ ಅನಾರೋಗ್ಯವನ್ನು ದೂರಮಾಡಿಕೊಳ್ಳಬೇಕು ಎಂಬ ಕರೆ ನೀಡಿದರು. ಭಾರತ ವಿಶ್ವ ಗುರುವಾಗಬೇಕೆಂದರೆ, ದೇಶದ ಪ್ರತಿ ಪ್ರಜೆಯು ಸಹ ಉತ್ತಮ ಆರೋಗ್ಯವನ್ನು ಹೊಂದಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಾ.ಎಸ್.ಆರ್.ರಾಮನಗೌಡರ ರವರು ಮಾತನಾಡಿ ಉದ್ವೇಗ ರಹಿತ ಜೀವನಕ್ಕೆ ಯೋಗವೇ ಬುನಾದಿಯೆಂದು ಯೋಗದ ಪ್ರಾಮುಖ್ಯತೆ ತಿಳಿಸಿದರು. ಪ್ರತಿನಿತ್ಯ ಯೋಗ ಮಾಡುವುದರಿಂದ ಮಾನಸಿಕ ಆರೋಗ್ಯ ಸಮತೋಲನ ಸ್ಥಿತಿಯಲ್ಲಿದ್ದು ವ್ಯಕ್ತಿಗಳು ಕ್ರಿಯಾಶೀಲರಾಗಿರುತ್ತಾರೆಂದು ತಿಳಿಸಿದರು. ಪ್ರತಿ ದಿನದ ಯೋಗವು ವ್ಯಕ್ತಿಗಳನ್ನು ರೋಗಗಳಿಂದ ದೂರವಿರುವಂತೆ ಮಾಡಲು ಸಹಾಯಕವಾಗುತ್ತದೆಯೆಂದು ಅಭಿಪ್ರಾಯ ತಿಳಿಸಿದರು.
ಯೋಗಮಯಂ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಲಕ್ಷ್ಮಣ ಬೋಡಕೆಯವರು ಯೋಗದ ವಿವಿಧ ಪ್ರಕಾರಗಳ ಆಸನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಸಭಿಕರಿಗೆ ಮಾಡಿಸಿದರು. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂಬುದನ್ನು ಮನದಟ್ಟು ಮಾಡಿದರು. ಶ್ರೀಮತಿ ರೇಣುಕಾ ಮಲ್ಲನಗೌಡರ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀಮತಿ ಸುಮನ್ ಹೆಬ್ಳೇಕರ್ ವಂದನಾರ್ಪಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಕಾಶಪ್ಪ ದೊಡ್ಡವಾಡ, ಸಿ.ಎಸ್.ಪಾಟೀಲ, ಬಸವರಾಜ ಕಡಕೋಳ, ನರೇಂದ್ರ ಪಾಟೀಲ್, ಜಗದೀಶ ಶಾ, ಸುರೇಶ ಹೆಗಡೆ, 250 ಕ್ಕೂ ಹೆಚ್ಚು ಅನೇಕ ಯೋಗ ಪಟುಗಳು ಹಾಗೂ ಗುರುಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- ಆಕೃತಿ ನ್ಯೂಸ್