ನಾನು ಎ ವಿ ಕೃಷ್ಣಮೂತಿ೯ ಅವರ ಬರವಣಿಗೆಗೆ ಫಿದಾ ಆದ ಓದುಗ ಅವರ ಸರಣಿ ಲೇಖನಗಳನ್ನು ಬಕ ಪಕ್ಷಿಯಂತೆ ಕಾಯುತ್ತಿದ್ದೆ. ಅವರ ಬರೆದದ್ದೆಲ್ಲ ಪ್ರಕಟ ಮಾಡಿದರೆ ಐದಾರು ಪುಸ್ತಕ ಆಗಲಿದೆ. ಅವರ ಪುಸ್ತಕ ಲೋಕಾರ್ಪಣೆ ಆದ ಮೇಲೆ ಅವರೊಬ್ಬ ಹೊಸ ಸಾಹಿತಿ ಕನ್ನಡ ಸಾರಸ್ವತ ಲೋಕದಲ್ಲಿ ಉದಯ ಆಗಲಿದ್ದಾರೆ – ಕೆ.ಅರುಣ್ ಪ್ರಸಾದ್, ತಪ್ಪದೆ ಓದಿ…
ಅವರ ಲೇಖನಗಳು ಪುಸ್ತಕವಾಗಲಿ ಎಂದು ಆಶೀರ್ವಾದಿಸಿವರಲ್ಲಿ ನಾನು ಒಬ್ಬ ಅದನ್ನು ಅವರಿಗೆ ಆಗಾಗ ತಿಳಿಸುತ್ತಿದ್ದೆ. ಈಗ ಎರಡು ಭಾಗದಲ್ಲಿ ಅಚ್ಚಾಗಲಿರುವ ಇವರ ಆತ್ಮಚರಿತ್ರೆ “ನನ್ನ ಬಾಲ್ಯ”ಕ್ಕೆ ಮುನ್ನುಡಿ ಬರೆಯಲು ಪ್ರೀತಿಯಿಂದ ಕೇಳಿದ್ದಾರೆ. ಅವರ ಎಲ್ಲಾ ಲೇಖನಗಳನ್ನು ಓದಿರುವ ನಾನು ಬರೆದ ಮುನ್ನುಡಿ ಕೆಳಗಿದೆ. ಎ ವಿ ಕೃಷ್ಣಮೂತಿ೯ ಅವರಿಗೆ ಅವರ ಆತ್ಮಚರಿತ್ರೆ ಪ್ರಕಟವಾಗುವ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.
ನಾ ಬರೆದ ಮುನ್ನುಡಿ…
ಕೊಪ್ಪ ಶಿವಮೊಗ್ಗ ಜಿಲ್ಲೆಯ ಬಗಲಿನ ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಕೇಂದ್ರ, 1960ರ ದಶಕದ ಅಲ್ಲಿನ ಚಿತ್ರಣವನ್ನು ಎ ವಿ ಕೃಷ್ಣಮೂರ್ತಿ ಎಷ್ಟು ಸುಂದರವಾಗಿ ಸರಳವಾಗಿ ವಿವರಿಸಿದ್ದಾರೆನ್ನುವುದು. ಅವರ ಆತ್ಮಚರಿತ್ರೆ ಆದ ಈ ಪುಸ್ತಕದಲ್ಲಿ ನೋಡಬಹುದು. ಎಲ್ಲರೂ ನಂತರದ ದಿನಗಳಲ್ಲಿ ಇವರ ಲೇಖನಗಳಿಗೆ ಅಭಿಮಾನಿಗಳಾಗಿದ್ದಾರೆ.
ಇವರ ಆತ್ಮಚರಿತ್ರೆ ಇಂಗ್ಲೀಷ್ ನಲ್ಲಿ ಬರೆದ ನೂರಕ್ಕೂ ಹೆಚ್ಚು ಅಧ್ಯಾಯಗಳನ್ನು ಇವರು ಇವರ ಸಹೋದರಿಗಾಗಿ ಕನ್ನಡದಲ್ಲಿ ಅನುವಾದಿಸಿರುವುದೇ ಈ ಪುಸ್ತಕ. ಇದರಲ್ಲಿ ಇವರ ಬಾಲ್ಯದ ಕಥೆಗಳು ಮಲೆನಾಡಿನ ಅಂದಿನ ಪರಿಸರ, ಕಾಲಮಾನಗಳ ಜೊತೆ ಪೊಣಿಸಿದ ಸುಂದರವಾದ ಹೂ ಮಾಲೆಯಂತೆ ಇದೆ.
1954 ರಲ್ಲಿ ತುಂಗಾ ನದಿಯಲ್ಲಿ ದೇಹ ಪರಿತ್ಯಾಗ ಮಾಡಿದ ಶೃಂಗೇರಿ ಜಗದ್ಗುರುಗಳ ಆ ಘಟನೆ, 1965 ರಲ್ಲಿ ಅವರ ಸ್ಮರಣಾರ್ಥ ಶೃಂಗೇರಿಯಲ್ಲಿ ಪ್ರಾರಂಭವಾದ ಕಾಲೇಜು ಉದ್ಘಾಟನೆ ಮಾಡಿದವರು. ಮಣಿಪಾಲಿನ ಡಾ.ಟಿ.ಎಂ.ಎ.ಪೈ ಆ ಕಾರ್ಯಕ್ರಮದ ಅಧ್ಯಕ್ಷತೆ ಅಂದಿನ ಚಿಕ್ಕಮಗಳೂರು ಜಿಲ್ಲಾಧಿಕಾರಿ ಎಚ್ ಎಲ್ ನಾಗೇಗೌಡರು (ಜನಪದಲೋಕ) ವಹಿಸಿದ್ದರಂತೆ.
ಆಡಳಿತ ಮಂಡಳಿ ಒತ್ತಾಯದಿಂದ ಶಿವಮೊಗ್ಗದ ಶಾಲೆ ತೊರೆದು ಈ ಕಾಲೇಜಿನ ಮೊದಲ ವಿದ್ಯಾರ್ಥಿ ಆದ ಎ ವಿ ಕೃಷ್ಣಮೂತಿ೯ ಅದೇ ವರ್ಷ ರಾಜ್ಯಕ್ಕೆ 4 ನೇ ರಾಂಕ್ ತಂದು ಕಾಲೇಜಿನ ಇತಿಹಾಸದಲ್ಲಿ ದಾಖಲೆ ಮಾಡುತ್ತಾರೆ.
ಬಿಎಸ್ಸಿಯಲ್ಲಿ ರಾಜ್ಯಕ್ಕೆ 10 ನೇ ರಾಂಕ್ ಬರುತ್ತದೆ ಇವರಿಗೆ, ನಂತರ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಖನಿಜ ಶಾಸ್ತ್ರದಲ್ಲಿ ಇಂಜಿನಿಯರಿಂಗ್ ಕಲಿಯಲು ಸೇರುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಬೆಂಗಳೂರಿನ ಸುಭಾಷ್ ನಗರ ಬಸ್ ನಿಲ್ದಾಣದಿಂದ ಶೃಂಗೇರಿಗೆ ಇವರಣ್ಣ ಪುಟ್ಟಣ್ಣನ ಜೊತೆ ವಾಪಾಸ್ ಬರುತ್ತಾರೆ೦ದರೆ ಬಡವರಿಗೆ ಅಹ೯ತೆ ಇದ್ದರೂ ಹಣ ಹೊಂದಿಸಲಾಗದೆ ಅನರ್ಹರಾಗುವ ಅವರ ಜೀವನದ ಕಥೆ ಒಂದು ದುರಂತವೇ ಆಗಿದೆ.
ನಿಜಕ್ಕೂ ನನಗೆ ಇವರ ಲೇಖನಗಳು ರಸವತ್ತಾಗಿ ಮುಂದಿನ ಅಧ್ಯಾಯಕ್ಕಾಗಿ ಕಾಯುತ್ತಿದ್ದೆ. ಕೆಲವು ಅವರ ಜೀವನದ ಕಷ್ಟಗಳು ನನ್ನ ದುಃಖ ಉಮ್ಮಳಿಸಿತ್ತಿತ್ತು.
ಇಂಜಿನಿಯರ್ ಆಗಿ ದೊಡ್ಡ ವಿಜ್ಞಾನಿಯೇ ಆಗಬಹುದಿದ್ದ ಪ್ರತಿಭಾವಂತ ಎ ವಿ ಕೃಷ್ಣಮೂತಿ೯ ಬ್ಯಾಂಕ್ ಆಡಿಟರ್ ಆಗಿ ಸೀನಿಯರ್ ಮ್ಯಾನೇಜರ್ ಆಗಿ ಸ್ವಯಂ ನಿವೃತ್ತರಾಗಿದ್ದಾರೆ.
ಇವರ ಹುರಳಿ ಹಕ್ಕಲಿನ ಗತ ವೈಭವ, ಬ್ಯಾಂಕಿನ ದಿನಗಳು ಮುಂದಿನ ದಿನಗಳಲ್ಲಿ ಕನ್ನಡ ಓದುಗರಿಗೆ ಪುಸ್ತಕವಾಗಿ ಸಿಗಲಿ ಎಂದು ಹಾರೈಸುತ್ತೇನೆ.
1960-70 ರ ದಶಕದ ಶಿವಮೊಗ್ಗ ಅವತ್ತಿನ ಶಿವಮೊಗ್ಗದ ಮಿನಾಕ್ಷಿ ಭವನ, ಗಾರ್ಡನ್ ಏರಿಯಾ,ನೆಹರೂ ರಸ್ತೆ, ಬ್ರಾಹ್ಮಣ ವಿದ್ಯಾರ್ಥಿ ನಿಲಯ, ನ್ಯಾಷನಲ್ ವಿದ್ಯಾ ಸಂಸ್ಥೆ, ಸಹ್ಯಾದ್ರಿ ಕಾಲೇಜು, ಅಂದಿನ ಖ್ಯಾತ ಸಾರಿಗೆ ಬಸ್ಸುಗಳಾದ CKMS ಮತ್ತು ಶಂಕರ್ ಕಂಪನಿ, ಅಡಿಕೆ – ಭತ್ತ- ವೀಳ್ಯದೆಲೆ ಕೃಷಿ ಮತ್ತು ಅದರ ಮಾರಾಟ, ಆಗಷ್ಟೇ ಬಳಕೆ ಪ್ರಾರಂಭವಾದ ಗ್ರಾಮಾಫೋನು, ಅಲಾರಂ, ರೆಡಿಯೋ ಇತ್ಯಾದಿಗಳಿಂದ ನಮ್ಮನ್ನೆಲ್ಲಾ ಹಿಂದಿನ ಶತಮಾನಕ್ಕೆ ಕರೆದೊಯ್ಯುವ ಈ ಶಕ್ತಿಶಾಲಿ ಲೇಖಕ ಎ ವಿ ಕೃಷ್ಣಮೂತಿ೯ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸಾಹಿತಿಗಳಾಗಿದ್ದಾರೆ.
ಅವರ ಜೀವನದ ನೆನಪುಗಳು ಎಲ್ಲವೂ ಪುಸ್ತಕವಾಗಿ ಬರಲಿ ಎ೦ದು ಹಾರೈಸುತ್ತೇನೆ.
- ಕೆ.ಅರುಣ್ ಪ್ರಸಾದ್ , ಹೊಂಬುಜ ರೆಸಿಡೆನ್ಸಿ ಆನಂದಪುರಂ.