ಹೆಲ್ಥ್‌ ಟಿಪ್ಸ್‌

– ಅನ್ನಪೂರ್ಣಮ್ಮ ಮೇಲಿನಮನಿ

ಊಟದ ಕ್ರಮ ಹೀಗಿರಲಿ

ಊಟದಲ್ಲಿ ಮೂರು ಹಂತದಲ್ಲಿ ಪದಾರ್ಥಗಳನ್ನು ಸ್ವೀಕರಿಸಬೇಕು. ಮೊದಲು ಸಿಹಿ ಪದಾರ್ಥಗಳನ್ನು ತಗೆದುಕೊಳ್ಳಬೇಕು. ನಂತರ ಖಾರ, ಹುಳಿ, ಉಪ್ಪು ಹೀಗೆ ರುಚಿಯಾಗಿರುವ ಪದಾರ್ಥಗಳನ್ನು ತಗೆದುಕೊಳ್ಳಬೇಕು. ಮೂರನೆ ಹಂತದಲ್ಲಿ ತುಸು ಕಹಿ,ಒಗರುಳ್ಳ ಪದಾರ್ಥಗಳನ್ನು ತಗೆದುಕೊಳ್ಳಬೇಕು.

ಸಿಹಿಯು ಬಾಯಲ್ಲಿರುವ ಲಾವಾ ರಸ ಗ್ರಂಥಿಗಳನ್ನು ಪ್ರಚೋದಿಸಿ ಅದು ಹೆಚ್ಚು ಸ್ರವಿಸುವಂತೆ ಮಾಡುತ್ತದೆ. ಅದರಿಂದ ಪಚನಕ್ರಿಯೆ ಸರಾಗವಾಗುತ್ತದೆ. ಮನಸ್ಸು ಹಗುರವಾಗಿ ಉಲ್ಲಾಸವುಂಟು ಮಾಡುತ್ತದೆ. ಹಾಗೂ ಊಟದಲ್ಲಿ ಆಸಕ್ತಿ ಹುಟ್ಟಿಸುತ್ತದೆ. ಲಾವಾ ರಸವು ಊಟದ ರುಚಿಯನ್ನೂ ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿಯೇ ಊಟದಲ್ಲಿ ಮೊದಲು ಸಿಹಿಯನ್ನು ಬಡಿಸುತ್ತಾರೆ. ಮದುವೆ ಮನೆ, ಇತರ ಹಬ್ಬಗಳ ಕಾರ್ಯಕ್ರಮದಲ್ಲಿ ಸಿಹಿ ಬಡಿಸುವುದು ಕಡ್ಡಾಯವಾಗಿರುತ್ತದೆ.

ಎರಡನೆಯ ಹಂತದಲ್ಲಿ ಖಾರ, ಹುಳಿ, ಉಪ್ಪು ಇರುವ ಪದಾರ್ಥಗಳನ್ನು ಸ್ವೀಕರಿಸಬೇಕು. ಅದಕ್ಕಾಗಿ ಪುಳಿಯೊಗರೆ, ಪಚಡಿ, ಸಾಲಾಡ್‌, ಹಪ್ಪಳ, ಬೋಂಡಾ, ಅನ್ನ, ಸಾಂಬಾರ್‌ ಹುಳಿ, ರಸಂ ಬಡಿಸುತ್ತಾರೆ. ಇವುಗಳಲ್ಲಿಯ ಪೋಷ್ಠಕಾಂಶಗಳು ಲಾವಾರಸದೊಂದಿಗೆ ಮಿಶ್ರವಾಗಿ ಹಸಿವನ್ನು ಹಿಂಗಿಸಲು ಮತ್ತು ದೇಹಕ್ಕೆ ಶಕ್ತಿ , ಚೈತನ್ಯ ನೀಡಲು ಸಹಾಯ ಮಾಡುತ್ತವೆ. ಕೊನೆಯಲ್ಲಿ ಮಜ್ಜಿಗೆ ಅನ್ನ ಬಡಿಸುತ್ತಾರೆ. ಇದರಿಂದ ಸೃಜಿಸುತ್ತಿದ್ದ ಲಾವಾರಸವನ್ನು ನಿಲ್ಲಿಸಿ ಆಗಲೇ ದೇಹದೊಳಗೆ ಸೇರಿರುವ ಆಹಾರವನ್ನು ಪಚನಕ್ರಿಯೆಗೆ ಒಳಪಡಿಸಲು ಸಹಾಯ ಮಾಡುತ್ತದೆ.

ಈ ಕ್ರಮದಲ್ಲಿ ಊಟ ಮಾಡಿದರೆ ದೇಹ ಸಮತೋಲನ ಕಾಯ್ದುಕೊಂಡು ನಿರೋಗಿಗಳಾಗಲು ಸಹಾಯವಾಗುವುದಂತೂ ಖಂಡಿತ.

#ಬಯರಚ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading