‘ಆ ಕಣ್ಣುಗಳು’ ಕವನ – ನಾಗರಾಜ ಬಿ.ನಾಯ್ಕ

 

‘ಎರಡು ಪುಟ್ಟ ಕಣ್ಣುಗಳು ನಿಂತು ಜಗವ ನೋಡುತ್ತದೆ’… ಕವಿ ನಾಗರಾಜ ಬಿ.ನಾಯ್ಕ ಅವರು ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಬಿಂಬಗಳಾಚೆ ನಿಂತರೂ
ಬದುಕು ಕಾಣಿಸುತ್ತದೆ ಕಣ್ಣಿಗೆ
ಕಣ್ಣೇ ಮರೆಯುವುದಿಲ್ಲ
ಆ ಕಣ್ಣುಗಳು

ತುಂಬಿಕೊಳ್ಳುತ್ತದೆ ಮತ್ತೆ ಮತ್ತೆ
ಚಿತ್ರಗಳನ್ನ ಬದುಕನ್ನ
ಆ ಕಣ್ಣುಗಳಲ್ಲಿ ತರೇವಾರಿ
ನೋಟ ಪ್ರತಿ ನೋಟಗಳು
ನೋವ ನಡುವಿನ ಮಾತುಗಳನ್ನು
ಕಥೆಗಳಂತೆ ನಗುವಿನಲ್ಲೂ,
ಬಿಂಬಗಳುಂಟು ಸಾವಿರ
ಕಣ್ಣುಗಳು ಮಾತ್ರ ಸಾಕ್ಷಿಯಾಗುವಂತೆ

ಎರಡು ಪುಟ್ಟ ಕಣ್ಣುಗಳು
ನಿಂತು ಜಗವ ನೋಡುತ್ತದೆ
ಪುಟಾಣಿ ಹಕ್ಕಿಗೂ
ಅವೇ ಕಣ್ಣುಗಳು ನೋಡಲು
ಆ ಕಣ್ಣುಗಳಲ್ಲಿ
ಸೋಜಿಗ ಕಾತರ ತಲ್ಲಣ

ಎಷ್ಟೊಂದು ಕೆಲಸಗಳಿಗೆ
ಮೂಲ ಆ ಪುಟ್ಟ ಕಣ್ಣುಗಳು
ಕಾಡುತ್ತವೆ ಹುಡುಕುತ್ತದೆ
ಮತ್ತೆ ಮತ್ತೆ ಎದುರಾಗುತ್ತದೆ
ಅದೇ ನಗುವ
ಮತ್ತೆ ತುಂಬಿಸಿಕೊಳ್ಳುತ್ತಾ
ಜೀವಂತಿಕೆ ತೋರತ್ತಾ
ಒಲವಿನ ಕಿರುನಗೆ ಬೀರುತ್ತಾ……


  • ನಾಗರಾಜ ಬಿ.ನಾಯ್ಕ – ಹುಬ್ಬಣಗೇರಿ , ಕುಮಟಾ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW