ನಾಟಕಕಾರ ಶ್ರೀ ಹೂಲಿಶೇಖರ ಅವರಿಗೆ ನಾಡಿನಾದ್ಯಂತ ನೂರಾರು ಸಂಸ್ಥೆಗಳು ಮಾನ ಸನ್ಮಾನ ಬಿರುದು-ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ‘ಅಕ್ಷರ ಬ್ರಹ್ಮ’ ಎಂಬ ಬಿರುದನ್ನು – ಪಡೆದಿರುವ ಇವರು. ಸಮಾಜದಿಂದ ದೊರೆತ ಈ ಋಣ ತೀರಿಸಲು ಮತ್ತು ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನುವ ಅರ್ಥದಲ್ಲಿ ಪ್ರತಿ ವರ್ಷ ‘ಆಕೃತಿ ಕನ್ನಡಶ್ರೀ’ ಎಂಬ ಪ್ರಶಸ್ತಿಯನ್ನು ತನ್ನಂತೆಯೇ ಇರುವ ಗ್ರಾಮೀಣ ಪ್ರತಿಭಾವಂತರಿಗೆ ನೀಡಲು ನಿರ್ಧರಿಸಿದ್ದಾರೆ. ಮತ್ತು ಸಮಾಜಕ್ಕೆ ಮಾದರಿಯಾಗಿದ್ದಾರೆ.
ಎಲೆಮರೆಯ ಕಾಯಿಯಂತೆ ಇದ್ದು ಸದಾ ಕಲೆಯನ್ನೇ ತಮ್ಮ ಜೀವನದುಸಿರು ಎಂದು ನಂಬಿಕೊಂಡಿರುವ ಕಲಾವಿದರು-ನಾಟಕಕಾರರು-ನಾಟಕ ನಿರ್ದೇಶಕರು -ಮೇಕಪ್ ಕಲಾವಿದರು ಮತ್ತು ರಂಗ ಸಂಗೀತಗಾರರಿಗೆ ಇದನ್ನು ನೀಡಲು ನಿರ್ಧರಿಸದ್ದಾರೆ. ಐದು ಸಾವಿರ ರೂಪಾಯಿ ನಗದು ಹಣ-ಹಾರ-ಶಾಲು- ಫಲಕಗಳನ್ನೊಳಗೊಂಡ ಈ ಪ್ರಶಸ್ತಿ ಎಲ್ಲ ವೆಚ್ಚವನ್ನು ಶ್ರೀ ಹೂಲಿಶೇಖರ್ ಮತ್ತು ಅವರ ಕುಟುಂಬದವರು ಭರಿಸುತ್ತಾರೆ. ಅವರ ಶ್ರೀಮತಿಯವರು, ಮಗ-ಸೊಸೆ,ಹೆಣ್ಣುಮಕ್ಕಳು- ಅಳಿಯಂದಿರು ಈ ಪ್ರಶಸ್ತಿಯ ಹಿಂದಿದ್ದಾರೆ. ಮತ್ತು ಪ್ರಶಸ್ತಿಯ ಗೌರವವನ್ನು ಎತ್ತಿ ಹಿಡಿಯಲು ಸನ್ನದ್ಧರಾಗಿದ್ದಾರೆ, ಪ್ರಸಕ್ತ ಸಾಲಿನಲ್ಲಿ ಕೊಡ ಮಾಡುತ್ತಿರುವ ಈ ಪ್ರಶಸ್ತಿ ಮೊದಲನೆಯದಾಗಿದ್ದು ಇದಕ್ಕೆ ಭಾಜನರಾದವರು ಧಾರವಾಡದ ಕಲಾವಿದ ಶ್ರೀ ಅನಂತ ದೇಶಪಡೆಯವರು.