ಚಂದದ ಗೊಂಬೆ ಇವಳೇ ಲಕ್ಷ್ಮಿ ಚೆಲುವೆ : ನಿತಿನ್ ಅಂಕೋಲಾ

70-80ರ ದಶಕದ ಹೆಸರಾಂತ ಚಿತ್ರನಟಿ ಲಕ್ಷ್ಮಿ. ಅವರು ತುಂಬಾ ಸುದ್ದಿ ಆಗಿದ್ರು. ಅವರ ವೈಯಕ್ತಿಕ ಜೀವನ ಬಿಟ್ಟು ನೋಡಿದ್ರೆ ಅವರು ಪಂಚಭಾಷೆ ತಾರೆಯಾಗಿ ತನಗೆ ಸಿಕ್ಕ ಪಾತ್ರಗಳಲ್ಲಿ ಪರಿಪೂರ್ಣವಾಗಿ ನ್ಯಾಯ ಒದಗಿಸಿದವರು. ಅವರ ಅಭಿನಯದ ಕುರಿತು ನಿತಿನ್ ಅಂಕೋಲಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಮೊನ್ನೆ ಮೊನ್ನೆ ಲಕ್ಷ್ಮಿ ತುಂಬಾ ಸುದ್ದಿ ಆಗಿದ್ರು. ಅದೆಲ್ಲ ತಮಗೆ ಗೊತ್ತಿದೆ. ಕೆಲವೊಬ್ಬರು ಸಕಾರಾತ್ಮಕವಾಗಿ ಇನ್ನೂ ಯಥೇಚ್ಛವಾಗಿ ನಕಾರಾತ್ಮಕವಾಗಿ ಅರ್ಥೈಸಿಕೊಂಡು ಅವರ ವೈಯಕ್ತಿಕ ಬದುಕನ್ನು ತಳುಕು ಹಾಕಿ ಕೆಟ್ಟ ಕೆಟ್ಟ ಕಮೆಂಟ್ ನಲ್ಲಿ ಫುಟ್ಬಾಲ್ ಆಡಿದರು. ಆ ವಿಷಯ ಬೇರೆ ಬಿಡಿ. ಅವರ ವೈಯಕ್ತಿಕ ಜೀವನ ಬಿಡಿ, ನಾವ್ಯಾರು ಅವರ ಬಗ್ಗೆ ಕಮೆಂಟ್ ಮಾಡೋದಕ್ಕೆ??? ಮೊದಲು ನಮ್ಮ ನಮ್ಮ ಜೀವನ ನೋಡಿಕೊಳ್ಳೋಣ. ಅವರನ್ನು ಜನ ಬೆಳೆಸಿದ್ದು ಕಲಾವಿದೆಯಾಗಿ ಹಾಗಾಗಿ ಕಲಾವಿದೆಯ ಸಾಧನೆಯನ್ನು ಮನದಾಳದಲ್ಲಿ ನೆಲೆಯೂರಿಸಿಕೊಂಡೆ ಈಗ ವಿಷಯಕ್ಕೆ ಬರ್ತೀನಿ ಕೇಳಿ

ಚಿತ್ರನಟಿ ಲಕ್ಷ್ಮಿ ನನ್ನ ತಲೆಮಾರಿನ ನಟಿಯಲ್ಲ.70-80ರ ದಶಕದ ಹೆಸರಾಂತ ನಾಯಕ ನಟಿ.ಕನ್ನಡದ ಬಹುತೇಕ ನಟರೊಟ್ಟಿಗೆ ತೆರೆ ಹಂಚಿಕೊಂಡ ಚೆಲುವೆ. ಡಾ ರಾಜಕುಮಾರ್, ಲೋಕೇಶ್, ಶ್ರೀನಾಥ್, ವಿಷ್ಣುವರ್ಧನ್ ಅಂಬರೀಶ್, ಅನಂತನಾಗ್… ಮೊದಲಾದವರೊಡನೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲದೆ ತಮಿಳು, ತೆಲುಗು,ಮಲಯಾಳಂ ಹಿಂದಿ ಭಾಷೆಯಲ್ಲಿ ಅಭಿನಯಿಸಿ ಪಂಚಭಾಷೆ ತಾರೆಯಾಗಿ ತನಗೆ ಸಿಕ್ಕ ಪಾತ್ರಗಳಲ್ಲಿ ಪರಿಪೂರ್ಣವಾಗಿ ನ್ಯಾಯ ಒದಗಿಸಿ ಅಭಿಮಾನಿ ಮನಸ್ಸನ್ನು ಸ್ಪರ್ಶಿಸಿದಾಕೆ. ವಿಶೇಷ ಏನಂತಂದ್ರೆ ಇಲ್ಲಿ ತನಕ ಅಭಿನಯಿಸಿದ 650ಕ್ಕೂ ಅಧಿಕ ಸಿನಿಮಾಗಳಲ್ಲಿ ಸ್ವತಃ ಅವರೇ ಅಭಿನಯಿಸಿ ಅವರೇ ಕಂಠದಾನ ಮಾಡಿದ್ದಾರೆ.ಹಾಗಾಗಿ ಲಕ್ಷ್ಮಿ ಓರ್ವ ನಟಿಯಾಗಿ ನಿಂತ್ಕೊಳ್ಳೋದಿಲ್ಲ.ಪರಿಪೂರ್ಣ ಕಲಾವಿದೆಯಾಗಿ ನಿಂತುಕೊಳ್ಳುತ್ತಾರೆ. ಕನ್ನಡ, ತಮಿಳು, ತೆಲುಗು,ಹಿಂದಿ,ಮಲಯಾಳಂ ಓದಬಲ್ಲ ಬರೆಯಬಲ್ಲ ಮಾತನಾಡಬಲ್ಲ ಕಲಾವಿದೆ.She has strong linguistic ability…ಅದರ ಬಗ್ಗೆ ಎರಡು ಮಾತಿಲ್ಲ.

ಕನ್ನಡದಲ್ಲಿ ಅವರಿಗೆ ಸಿಕ್ಕಂತಹ ಹಾಡುಗಳು ಅಬ್ಬಬ್ಬಾ!!! ಅದರಲ್ಲಿ ನನ್ನ ಮನಸ್ಸಿನಲ್ಲಿ ಕೂತು ಬೆರೆತು ಆಗಾಗ ನೆನಪಾಗಿ ದುಃಖ ಭಾವ ಹಗುರ ಮಾಡುವಂತಹ ಹಾಡುಗಳು ಹೋಗಿರುವಂತಹ ಹಾಡುಗಳು..

1. ಒಲವು ಮೂಡಿದಾಗ ಚಿತ್ರದ ಬುದ್ಧಿ ಮಾತು ಕೇಳಿ ಓ ಮುದ್ದು ಮಕ್ಕಳೇ
2. ನಾ ನಿನ್ನ ಬಿಡಲಾರೆ ಚಿತ್ರದ ಹೊಸ ಬಾಳಿಗೆ ನೀ ಜೊತೆಯಾದೆ
3. ಮುದುಡಿದ ತಾವರೆ ಅರಳಿತು ಚಿತ್ರದ ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
4. ಗಾಳಿಮಾತು ಚಿತ್ರದ ಒಮ್ಮೆ ನಿನ್ನನ್ನು ಕಣ್ತುಂಬ,ನಗಿಸಲು ನೀನು ನಗುವೆನು ನಾನು, ಬಯಸದೆ ಬಳಿ ಬಂದೆ ಬಯಕೆಯ ಸಿರಿತಂದೆ ನಿನ್ನ ಅಂದಕ್ಕೆ ಬೆರಗಾದೆ
5. ನಾ ನಿನ್ನ ಮರೆಯಲಾರೆ ಚಿತ್ರದ
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ
6. ಬಿಡುಗಡೆಯ ಬೇಡಿ ಚಿತ್ರದ ಏನೋ ಹೊಸ ಸಂತೋಷದೆ
7. ಚಂದನದ ಗೊಂಬೆ ಚಿತ್ರದ ಈ ಬಿಂಕ ಬಿಡು ಬಿಡು
8. ಇಬ್ಬನಿ ಕರಗಿತು ಚಿತ್ರದ ಚೆಲುವೆ ಓ ಚೆಲುವೆ ನಿಜವ ನಾ ನುಡಿವೆ
9. ಬೆಂಕಿಯ ಬಲೆ ಚಿತ್ರದ ಒಲಿದ ಜೀವ ಜೊತೆಯಲಿರಲು ಬಾಳು ಸುಂದರ ಮತ್ತು ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ, ನನಗಾಗಿ ಬಂದ ಆನಂದ ತಂದ
10. ಟೋನಿ ಚಿತ್ರದ ಚೆಲುವ ಪ್ರತಿಮೆ ನೀನು ನಲಿವ ರಸಿಕ ನಾನು &
ಆನಂದವೇ ಮೈದುಂಬಿದೆ
11. ಅವಳ ಹೆಜ್ಜೆ ಚಿತ್ರದ ಬಂದೆಯ ಬಾಳಿನ ಬೆಳಕಾಗಿ, ನೆರಳನು ಕಾಣದ ಲತೆಯಂತೆ ಬಿಸಿಲಿಗೆ ಬಾಡಿದ ಹೂವಂತೆ
12. ಒಲವು ಗೆಲುವು ಚಿತ್ರದ ನನ್ನೆದೆ ಕೋಗಿಲೆಯ, ಅರಳುತಿದೆ ಮೋಹ
13. ಪಲ್ಲವಿ ಅನುಪಲ್ಲವಿ ಚಿತ್ರದ ನಗು ಎಂದಿದೆ ಮಂಜಿನ ಬಿಂದು
14. ರವಿಚಂದ್ರ ಚಿತ್ರದ ಓ ಎಂಥ ಸೌಂದರ್ಯ ಕಂಡೆ
15. ತೆಲುಗಿನಲ್ಲಿ ಸಿರಿಮಲ್ಲೆ ನೀವೇ (ಕನ್ನಡದ ಬಯಲು ದಾರಿ ಚಿತ್ರದ ಬಾನಲ್ಲು ನೀನೆ ಬುವಿಯಲ್ಲು ನೀನೆ ಹಾಡಿನ ರಾಗದಲ್ಲಿದೆ)

ಹೇಳ್ತಾ ಹೋದ್ರೆ ಸುಮಾರ್ ಇದೆ..ಯಾಕೆಂದ್ರೆ ಇವರಿಗೆ ಸಿಕ್ಕ ಹಾಡುಗಳು ಅಷ್ಟು ಚೆನ್ನಾಗಿದೆ..ಬಹುಶಃ ಬೆರಳೆಣಿಕೆಯಷ್ಟು ನಟಿಯರು ಇರಬೇಕು ಅಷ್ಟು ಒಳ್ಳೆಯ ಹಾಡುಗಳನ್ನು ಪಡೆದುಕೊಂಡೋರು..ಆರತಿ, ಮಂಜುಳಾ, ಕಲ್ಪನಾ ಕೂಡ ಇವರು ಸಾಲಿಗೆನೇ ನಿಲ್ತಾರೆ..ಇವರ ಅಭಿನಯದ ಹಾಡು ಕೇಳಿದಾಗ ಮನಸ್ಸು ಅಷ್ಟು ನಿರಾಳ ಆಗತ್ತೆ..ಸಾಲದಕ್ಕೆ ನನ್ನ ಮೊಬೈಲ್ ಕಾಲರ್ ಟ್ಯೂನ್ ಕೂಡ ಇವರ ಚಿತ್ರದ ಹಾಡೇ.ಆ ತಲೆಮಾರಿನಲ್ಲಿ ಹುಟ್ಟಿದವರು ಎಷ್ಟು ಅದೃಷ್ಟವಂತರು??? ಮಧುರತೆಯಿಂದ ತುಂಬಿದ ಇಂಪಾದ ಸಂಗೀತಕ್ಕೆ ಲಯಬದ್ಧವಾದ ಸಾಹಿತ್ಯದಿಂದ ಕೂಡಿದ ಸಂಗೀತ. ನಾನು ಯಾಕೆ ಆ ತಲೆಮಾರಿನಲ್ಲಿ ಹುಟ್ಟಿಲ್ಲ??ಎಂಬ ಪ್ರಶ್ನೆ ಆಗಾಗ ದೇವರ ಮುಂದೆ ಇಡ್ತಾ ಇರುತ್ತೇನೆ.

ಇವೆಲ್ಲ ಹೇಳುತ್ತಿರುವ ಉದ್ದೇಶ ಇಷ್ಟೇ. ಆತ್ಮೀಯ ರಾಮಚಂದ್ರ ಹಡಪದರವರ ಆತ್ಮೀಯ ಕರೆಯೋಲೆಯನ್ನು ಸ್ವೀಕರಿಸಿ ಪರಮಪದ ತಂಡ ಕೋಣನಕುಂಟೆ ಕ್ರಾಸ್ನ ಪ್ರೆಸ್ಟೀಜ್ ಸಭಾಂಗಣದಲ್ಲಿ ಆಯೋಜಿಸಿದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿ ತುಂಬಾ ಖುಷಿ ಪಟ್ಟೆ.ಕಳೆದ ವರ್ಷ ಜಯಂತ್ ಕಾಯ್ಕಿಣಿ, ಪ್ರಣಯರಾಜ ಶ್ರೀನಾಥ್,ಸಂಗೀತ ಸಾಮ್ರಾಟ ಸಿ.ಅಶ್ವತ್ ರವರ ಕಾರ್ಯಕ್ರಮ ನೋಡಿ ಖುಷಿಪಟ್ಟಿದ್ದೆ. ಈ ವರ್ಷ ಚಿತ್ರನಟಿ ಲಕ್ಷ್ಮಿಯವರ ಚಿತ್ರದ ಮಧುರ ಗೀತೆಗಳ ಗಾನ ಸಂಜೆ “ಚೆಲುವಾದ ಗೊಂಬೆ” ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸ್ಮರಣೀಯ ಅನಿಸಿತು.ಆರಂಭದಲ್ಲಿ ಮಾತೃ ಹೃದಯಿ ಎಂ ಆರ್ ಕಮಲಾ ಅಮ್ಮ ಸಿಕ್ಕರು. ಬಳಿಕ ಖ್ಯಾತ ಕವಿ ಬಿ ಆರ್ ಲಕ್ಷ್ಮಣ್ ರಾವ್ ಸಿಕ್ಕರು. ಜೋಗಿ ಸಿಕ್ಕರು. ನಿರೂಪಕ ರಾಘವೇಂದ್ರ ಕಾಂಚನ್ ದೂರದಿಂದಲೇ ನೋಡಿ ಮುಗುಳ್ನಕ್ಕರು. ಸಭಾಂಗಣದೊಳಗೆ ಪ್ರವೇಶಿಸಿದಾಗ ನಿಧಾನ ಗತಿಯಲ್ಲಿ ಸಂಗೀತ ರಸಿಕರು ಆಗಮಿಸಲು ಆರಂಭಿಸಿದರು.

ಸಂಜೆ 6:00 ರ ಅಷ್ಟೊತ್ತಿಗೆ ನಾನು ಗಮನಿಸಿದಂತೆ ಒಂದು ಆಸನವು ಖಾಲಿ ಇರಲಿಲ್ಲ. ಸಭೀಕರಿಂದ ಸಂಪೂರ್ಣವಾಗಿ ತುಂಬಿ ಹೋಗಿತ್ತು. ಸಂಜೆ 6.30ರ ಹೊತ್ತಿಗೆ ನಟಿ ಲಕ್ಷ್ಮಿ ಆಗಮಿಸಿದರು. ನೆರೆದಿದ್ದ ಸಂಗೀತಾ ಪ್ರೇಮಿಗಳೆಲ್ಲ ಎದ್ದು ನಿಂತು ಹರ್ಷೋದ್ಗಾರದಿಂದ ಚಪ್ಪಾಳೆ ಹೊಡೆದರು. ನನಗೆ ತುಂಬಾ ಖುಷಿ ಕೊಟ್ಟಿದ್ದು ಗಾಯಕ ರಾಮಚಂದ್ರ ಹಡಪದ ಗಾಯಕಿ ಸ್ಪರ್ಶ ಹಾಡಿದ ಹೊಸ ಬಾಳಿಗೆ ನೀ ಜೊತೆಯಾದೆ  ಮತ್ತು  ಬಂದೆಯಾ ಬಾಳಿನ ಬೆಳಕಾಗಿ ಯುಗಳ ಗೀತೆ. ದಿವ್ಯ ರಾಘವನ್ ರವರು ಹಾಡಿದ ನಗು ಎಂದಿದೆ ಮಂಜಿನ ಬಿಂದು ಮತ್ತು ನನ್ನೆದೆ ಕೋಗಿಲೆಯ ಹಾಡು ಆಲಿಸಿದಾಗ ಮೂಲ ಹಾಡಿಗೆ ಇವರು ಹಾಡಿದ ಹಾಡಿಗೆ ವ್ಯತ್ಯಾಸವೇ ಇಲ್ಲವೇನೋ ಎಂಬಂತಿತ್ತು. ಒಂದೊಂದು ಹಾಡುಗಳ ಮಧ್ಯವು ನಟಿ ಲಕ್ಕ್ಷ್ಮಿಯವರ ಜೀವನಾನುಭವದ ಕೆಲವು ಅಚ್ಚಳಿಯದ ನೆನಪುಗಳ ಮಾತು ಕಣ್ಣಿಗೆ ಕಟ್ಟುವಂತೆ ಹಂಚಿಕೊಂಡಿದ್ದು.


  • ನಿತಿನ್ ಅಂಕೋಲಾ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW