‘ಅಲೆಯೊಳಗಿನ ಮೌನ’ ಕೃತಿ ಪರಿಚಯ

ಕವಿಯತ್ರಿ ಶ್ರೀದೇವಿ ಕೆರೆಮನೆ ಅವರ ಮೊದಲ ಗಜಲ್ ಸಂಕಲನ ‘ಅಲೆಯೊಳಗಿನ ಮೌನ’. ಉರ್ದು ಕಾವ್ಯ ಪ್ರಕಾರದಲ್ಲಿ ಮೆರೆದ ಗಜಲ್ ಗಳು ಕನ್ನಡದಲ್ಲೂ ಈಗ ಜನಪ್ರಿಯ ವಾಗುತ್ತಿವೆ. ಈ ಕೃತಿಯ ಕುರಿತು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಕೃತಿ  : ಅಲೆಯೊಳಗಿನ ಮೌನ
ಲೇಖಕರು: ಶ್ರೀದೇವಿ ಕೆರೆಮನೆ
ಪ್ರಕಾಶನ : ಕ್ರಾಂತಿ ಪ್ರಕಾಶನ ಧಾರವಾಡ
ಮುದ್ರಣದ ವರ್ಷ:೨೦೧೮ 
ಪುಟಗಳು: ೭೨
ಬೆಲೆ: ರೂ. ೮೦

ಉರ್ದು ಮತ್ತು ಹಿಂದಿಯಲ್ಲಿ ಕೇಳುಗನ ಜೀವಭಾವ ಸೆಳೆದುಕೊಂಡು ಪ್ರಸಿದ್ಧಿ ಪಡೆದ ವಿಶೇಷ ಕಾವ್ಯ ಪರಂಪರೆಯ ಹೆಸರೇ ಗಜಲ್.

ಈ ಜಗತ್ತು ಪ್ರೀತಿ ಎನ್ನುವ ತಳಹದಿಯ ಮೇಲೆ ನಿಂತಿದೆ. ಕೋಪ, ಮತ್ಸರ, ವಿರಹ, ದುಃಖ ಹೀಗೆ ಉಳಿದೆಲ್ಲ ಭಾವಗಳು ಪ್ರೀತಿಯನ್ನು ಸುತ್ತುವರೆದಿದೆ. ಬಹುತೇಕ ಕವಿಗಳಿಗೆ ಪ್ರೀತಿಯೇ ಮೂಲ ವಸ್ತು. ಅದರಲ್ಲೂ ಗಜಲ್ ಎನ್ನುವ ಅದ್ಭುತ ಪ್ರಕಾರಕ್ಕಂತೂ ಪ್ರೀತಿಯೇ ದೈವ. ಹಿಂದೊಮ್ಮೆ ಉರ್ದು ಕಾವ್ಯ ಪ್ರಕಾರದಲ್ಲಿ ಮೆರೆದ ಗಜಲ್ ಗಳು ಕನ್ನಡದಲ್ಲೂ ಈಗ ಜನಪ್ರಿಯ ವಾಗುತ್ತಿವೆ. ಪ್ರೀತಿ ಹಾಗೂ ವಿರಹದ ಉತ್ಕಂಟತೆಯನ್ನು ಸಾದರ ಪಡಿಸಲು, ಯಾವುದೇ ಭಾವ ತೀವ್ರತೆಯನ್ನು ಸರಾಗವಾಗಿ ಹೇಳಲು ಅನುಕೂಲವಾಗುವ ಇಂತಹ ೫೬ ಗಜಲ್ ಗಳನ್ನು ಸೇರಿಸಿ ಈ ಸಂಕಲನವನ್ನು ಪ್ರಕಟಿಸಲಾಗಿದೆ ಎಂದು ಶ್ರೀದೇವಿಯವರು ಮುನ್ನುಡಿಯಲ್ಲಿ ಹೇಳಿದ್ದಾರೆ.

ದ್ವಿಪದಿಯಲ್ಲಿ ಬಂದ ಗಜಲ್ ೫ ರಿಂದ ೨೪ ದ್ವಿಪದಿಯಲ್ಲಿ ಇರಬೇಕೆಂಬ ನಿಯಮಾವಳಿ ರೂಢಿಸಿಕೊಂಡ ಇದರ ಎರಡು ಸಾಲುಗಳಿಗೆ ‘ಮತ್ಲಾ’ ಎನ್ನುತ್ತಾರೆ. ಅಂತಿಮ ಸಾಲಿನ ಎರಡು ಶಬ್ಧಗಳಿಗೆ ಕಾಫಿಯಾ ಹಾಗೂ ಪ್ರಾಸಕ್ಕೆ ‘ರದೀಪ್’ ಮತ್ತು ಕೊನೆಯ ದ್ವಿಪದಿಗೆ ‘ಮಕ್ತಾ’ ಎನ್ನುವರು. ಈ ಸಾಲಿನಲ್ಲಿ ಕವಿಯ ಕಾವ್ಯನಾಮ ಬಳಸುವ ಸಂಪ್ರದಾಯವಿದೆ. ಅಂತೆಯೇ ಶ್ರೀದೇವಿ ಕೆರೆಮನೆ ಯವರು ‘ಸಿರಿ’ ಎಂಬ ಅಂಕಿತ ನಾಮದೊಡನೆ ಮುಕ್ತಾಯ ಹೊಂದುವ ಗಜಲ್ ಗಳನ್ನು ಬರೆದಿದ್ದಾರೆ.

ಇಲ್ಲಿನ ಗಜಲ್ ಗಳ ಸುಂದರವಾದ
ಸಾಲುಗಳನ್ನು ನೋಡಿ….

  • ಒಲವ ಹಾದಿಯಲ್ಲಿ ಗುಲ್ ಮೊಹರ್ ಹಾಸಿದ್ದೇನೆ. ನೀ ಎಲ್ಲಿದ್ದರೂ ಬಂದು ಬಿಡು ಮಲ್ಲಿಗೆ ಚಪ್ಪರವ ದಾರಿ ಯುದ್ದಕ್ಕೂ ಹಾಸಿದ್ದೇನೆ ನೀ ಎಲ್ಲಿದ್ದರೂ ಬಂದು ಬಿಡು ಉಸಿರು ನಿಲ್ಲುವ ತನಕ ನಿನ್ನದೊಂದೇ ಹೆಸರು ಎದೆಯೊಳಗೆ, ಈ ಮುನಿಸು ತರವಲ್ಲ, ಹಠ ತೊರೆದು ಒಲವ ಹರಿಸಲು ನೀ ಎಲ್ಲಿದ್ದರೂ ಬಂದು ಬಿಡು.
  •  ಸಂಜೆಯಾಗಸದಲ್ಲಿ ಬಹುವರ್ಣದ ಕಾರಂಜಿ ಚಿಮ್ಮಿದೆ. ಬಣ್ಣವನ್ನೆಲ್ಲಾ ಕದ್ದು ಮನದೊಳಗೆ ನಿನ್ನ ಚಿತ್ರ ಮೂಡಿಸಿದ್ದೇನೆ. ನಿನ್ನ ಬೆರಳ ತುದಿಯ ನವಿರು ಸ್ಪರ್ಶದ ಬಿಸಿಗೆ ಎದೆಯ ಹಿಮ ಕರಗುತ್ತಿದೆ. ಬಿಸಿನೀರ ಬುಗ್ಗೆಯಲ್ಲಿ ಐರಾವತವನ್ನೇರಿ ‘ಸಿರಿ’ ಸಗ್ಗದಸವಾರಿ ಹೊರಟಿದ್ದೇನೆ.
  • ಮಾತೇನೂ ಬೇಡ, ನಾಲ್ಕೇ ನಾಲ್ಕು ಹೆಜ್ಜೆಯ ಪಯಣ. ಕೈ ಕೈ ಹಿಡಿದು, ಜೊತೆಯಾಗಿ ನಡೆದು ಬಿಡೋಣ. ಮಾತು ಮುನಿಸು, ಪ್ರೀತಿ ವಿರಹ ಏನಿದ್ದರೂ ಸರಿ. ಹೆಜ್ಜೆ ಹೆಜ್ಜೆಗೂ ಜೊತೆಯಾಗಿ ಸಿರಿಯ ಹಂಚಿ ಉಣ್ಣೋಣ.

ಇಂತಹ ಇನ್ನಷ್ಟು ಗಜಲ್ ಗಳನ್ನು ಸವಿಯಲು ಪುಸ್ತಕವನ್ನು ಓದಿರಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW