ಸಮಯ ಕಮ್ಮಿ, ಮಾಡಲು ಬಲು ಸುಲಭ, ತಿನ್ನಲು ಬಲು ರುಚಿ ಆಲೂ ಫ್ರೈ… ನಳಪಾಕ ಪ್ರವೀಣೆ ರತ್ನ ಜಾಧವ್ ಅವರು ಹೇಳಿಕೊಟ್ಟ ಈ ತಿಂಡಿಯನ್ನು ಮನೆಯಲ್ಲಿ ಮಾಡಿ ನೋಡಿ….
ಬೇಕಾಗುವ ಸಾಮಗ್ರಿಗಳು :
ಆಲೂಗಡ್ಡೆ – ೪
ಉಪ್ಪು,ಖಾರಪುಡಿ – ರುಚಿಗೆ ತಕ್ಕಷ್ಟು
ಅರಶಿನ ಪುಡಿ, ಹಿಂಗು – ಸ್ವಲ್ಪ
ಬೇಕಾದ್ರೆ ನಿಂಬೆರಸ-ಸ್ವಲ್ಪ
ಚಿರೊಟಿ (ಸಣ್ಣ) ರವೆ – ಸ್ವಲ್ಪ

ಮಾಡುವ ವಿಧಾನ :
ಆಲೂಗಡ್ಡೆಯನ್ನು ಗುಂಡಗೆ ಹೆಚ್ಚಿಕೊಂಡು ನೀರಲ್ಲಿ ತೊಳೆದುಕೊಳ್ಳಬೇಕು. ಅದಕ್ಕೆ ಉಪ್ಪು, ಅರಶಿನ, ಖಾರಪುಡಿ, ಹಿಂಗು ಹಾಕಿ ಕಲಸಿ ಇಟ್ಟುಕೊಳ್ಳಬೇಕು. ತವಾವನ್ನು ಬಿಸಿ ಮಾಡಿ ಸ್ವಲ್ಪ ಎಣ್ಣೆ ಸವರಿ ಕಲಿಸಿಟ್ಟ ಆಲೂಗಡ್ಡೆಯನ್ನು ತವಾ ಮೇಲೆ ಒಂದೊಂದೇ ಇಡಬೇಕು.
ಆಮೇಲೆ ಸ್ವಲ್ಪ ಎಣ್ಣೆ ಹಾಕಿ ಮುಚ್ಚಡಬೇಕು. ಸ್ವಲ್ಪ ಸಮಯದ ನಂತರ ತಿರುವಿ ಹಾಕಬೇಕು. ಈಗ ಮುಚ್ಚುವುದು ಬೇಡ. ಎಣ್ಣೆ ಬೇಡವೆಂದರೆ ನೀರು ಚಿಮುಕಿಸಿ ಕೂಡ ಮಾಡಬಹುದು.
- ರತ್ನ ಜಾಧವ್ – ನಳಪಾಕ ಪ್ರವೀಣೆ, ಅಂಬಿಕಾನಗರ.
