ಅನಂತನಾಗ್ ‘ಪದ್ಮ’ಕ್ಕೆ ಭೂಷಣ ಅಭಿಯಾನ ಆರಂಭ



ಕಲಾವಿದನಿಗೆ ಪ್ರೋತ್ಸಾಹ ನೀಡುವ ಕೆಲಸ ಪ್ರಶಸ್ತಿಗಳು ಮಾಡಬೇಕು..ಆ ಪ್ರಶಸ್ತಿಯಿಂದಲೇ ಇನ್ನಷ್ಟು ಕಲಾಸೇವೆ ಮಾಡಬೇಕು ಎನ್ನುವ ಉತ್ಸಾಹ ತುಂಬುತ್ತದೆ. ಆದಷ್ಟು ಬೇಗ ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಮುಡಿಗೇರಲಿ ಎಂದು ಎಲ್ಲರೂ ಶುಭ ಹಾರೈಸೋಣ…

ತನ್ನ ಜೀವನವನ್ನೆಲ್ಲ ಕಲೆಗೆ ಮುಡುಪಾಗಿಟ್ಟ ನಿಜವಾದ ಕಲಾವಿದ ಪ್ರಶಸ್ತಿಯ ಹಿಂದೆ ಹೋಗುವುದಿಲ್ಲ.ಬದಲಾಗಿ ಪ್ರಶಸ್ತಿಯೇ ಅವನ ಹಿಂದೆ ಬರುತ್ತದೆ. ಆದರೆ ಇಂದಿನ ಪ್ರಸ್ತುತ ವಿದ್ಯಮಾನಗಳಲ್ಲಿ ವಸೂಲಿ, ಹಣದ ಆಮಿಷನ್ ನೊಡ್ಡಿ ಯಾರು ಬೇಕಾದರೂ ಪ್ರಶಸ್ತಿ ಪಡೆಯಬಹುದಾಗಿದೆ. ಕಲಾವಿದನಿಗೆ ತಕ್ಕ ಗೌರವ ಸಿಗದೇಯಿದ್ದಾಗ #ಅಭಿಯಾನಗಳು ಹುಟ್ಟಿಕೊಳ್ಳುತ್ತದೆ.

ಜಾಲತಾಣದಲ್ಲಿ ಇದೀಗ ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಲ್ಲಬೇಕು ಎನ್ನುವಂತಹ ಅಭಿಯಾನ ಶುರುವಾಗಿದೆ. ತಡವಾದರೂ ಅವರ ಕಲಾಸೇವೆಗೆ ಈ ಪ್ರಶಸ್ತಿ ಸಲ್ಲಲೇಬೇಕು. ಈ ಅಭಿಯಾನವನ್ನು ರಿಷಬ್ ಶೆಟ್ಟಿ ಹಾಗು ರಕ್ಷಿತ್ ಶೆಟ್ಟಿ ಅವರು ಶುರುಮಾಡಿದ್ದು, ಜಾಲತಾಣದಲ್ಲಿ ಸಾಕಷ್ಟು ಬೆಂಬಲ ಸಿಕ್ಕಿದೆ.

#ಅನಂತನಾಗ್ ಅವರು ಪ್ರಶಸ್ತಿಗಾಗಿ ಸಿನಿಮಾ ಮಾಡಿದವರಲ್ಲ. #ಪ್ರಶಸ್ತಿ ಸಿಕ್ಕಿಲ್ಲವೆಂದು ಕಲೆಯಿಂದ ದೂರ ಸರೆದವರು ಅಲ್ಲ. ರಂಗಭೂಮಿಯಿಂದ ಆರಂಭವಾದ ಅವರ ನಟನೆ ೭೦ ವರ್ಷ ದಾಟಿದರು ಕೂಡಾ ಅವರ ನಟನೆ ನಿಂತಿಲ್ಲ. ಕೂದಲು ಬಿಳಿಯಾಯಿತು ಎನ್ನುವುದನ್ನು ಬಿಟ್ಟರೆ ಅವರು ಇಂದಿಗೂ ಅದೇ ತುಂಟ ನಟ, ಎಲ್ಲರ ಹೃದಯದಲ್ಲಿ ಅಚ್ಚಳಿಯದೆ ಕೂರುವಂತ ನಟ.

‘ನಾ ನಿನ್ನ ಬಿಡಲಾರೆ’ ಸಿನಿಮಾದಲ್ಲಿನ ಅವರ ಅಭಿನಯ ಪ್ರೇಕ್ಷಕರಿಗೆ ಚಳಿಜ್ವರ ಹಿಡಿಸಿತು. ‘#ಬೆಂಕಿಯ ಬಲೆ‘ ಸಿನಿಮಾದಲ್ಲಿ ನಾಯಕಿಯನ್ನು ಚಿತ್ರ ಹಿಂಸೆ ಕೊಡುವಾಗ ಅನಂತ ಅವರ ಮೇಲೆ ಪ್ರೇಕ್ಷಕರು ಕೆಂಡಾಮಂಡಲವಾಗಿದ್ದು ನಿಜ. ಒಬ್ಬ ಕಲಾವಿದ ನಾಯಕನಾಗಿ, ಖಳನಾಯಕನಾಗಿ, ಹಾಸ್ಯಕಲಾವಿದನಾಗಿ, ಪೋಷಕನಟನಾಗಿ ಪಾತ್ರಕ್ಕೆ ಜೀವ ತುಂಬುವ ಶಕ್ತಿ ಇದೆಯೆಂದರೆ  ಅದು ಅನಂತನಾಗ್ ಅವರಿಂದ ಮಾತ್ರ ಸಾಧ್ಯ. ಇತ್ತೀಚಿಗೆ ಸಾಮಾಜಿಕ ಕಳಕಳಿ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಗೋಧಿ ಬಣ್ಣ ಸಾಧಾರಣ ಮೈ ಕಟ್ಟು’ ಸಿನಿಮಾದಲ್ಲಿ ಅರಳು ಮರಳು ಹಿರೀಕನ ಪಾತ್ರವನ್ನು ನೋಡುವಾಗ ಸಾಕಷ್ಟು ಹಿರಿಯರು ಆ ಪಾತ್ರದಲ್ಲಿ ತಮ್ಮನ್ನು ತಾವು ಕಂಡುಕೊಂಡಿದ್ದು ಇದೆ. ತಮ್ಮ ನೈಜ್ಯ ಅಭಿನಯದಿಂದ ಎಲ್ಲರ ಪ್ರೀತಿಗೆ ಪಾತ್ರರಾದವರು.

ರಿಷಬ್ ಶೆಟ್ಟಿ ಅವರ ನಿರ್ದೇಶನದ ‘ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದ ಕೋರ್ಟ್ನಲ್ಲಿ ನಡೆಯುವ ದೃಶ್ಯವನ್ನು ಒಂದೇ ಟೆಕ್ ನಲ್ಲಿ ಉದ್ದದ ಡೈಲಾಗ್ ನ್ನು ಉಸಿರುಬಿಡದೆ ಹೇಳಿ ದಾಖಲೆ ಬರೆದ ಕಲಾವಿದ. ‘ನಾ ನಿನ್ನ ಬಿಡಲಾರೆ’, ‘ಬರ’, ‘ಹೆಂಡತಿಗೆ ಹೇಳ್ಬೇಡಿ’, ‘ಉದ್ಭವ’, ‘ಗೌರಿಗಣೇಶ’ ಮತ್ತು ‘ಗೋಧಿ ಬಣ್ಣ ಸಾಧಾರಣ ಮೈ ಕಟ್ಟು’ ಸಿನಿಮಾದ ಅಮೋಘ ಅಭಿನಯಕ್ಕಾಗಿ ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಆರು ಬಾರಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಐದು ಬಾರಿ ತಮ್ಮದಾಗಿಸಿಕೊಂಡಿದ್ದಾರೆ.



ಯಾವುದೇ ಅಭಿಮಾನಿ ಸಂಘಗಳಿಲ್ಲದೆ, ಸ್ಟಾರ್ಡಮ್ ಇಷ್ಟಪಡದೆ, ನಟನೆಯೇ ತಮ್ಮ ಜೀವ ಎಂದು ಕಲಾಸೇವೆಯಲ್ಲಿ ನಿರಂತರವಾಗಿ ತಮ್ಮನ್ನುತಾವು ತೊಡಗಿಸಿಕೊಂಡಂತಹ ನಟ. ಅವರ ಸಾಧನೆಯ ಬಗ್ಗೆ ಬರೆದಷ್ಟು ಮುಗಿಯುವುದಿಲ್ಲ. ಮಾಧ್ಯಮದಿಂದ ದೂರವಿದ್ದರು, ತಮ್ಮ ಪ್ರತಿಭೆಯಿಂದ ಮನೆ ಮನೆಮಾತಾಗಿರುವ ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಲ್ಲಲೇಬೇಕು. ಈ ಅಭಿಯಾನಕ್ಕೆ ಎಲ್ಲರು ಕೈಜೋಡಿಸಬೇಕು.

https://padmaawards.gov.in/

ಇದು ಕೇವಲ ಅನಂತನಾಗ್ ಅವರಿಗೆ ಸಲ್ಲುವ ಗೌರವವಷ್ಟೇ ಅಲ್ಲ, ಇಡೀ ಕನ್ನಡಿಗರಿಗೆ ಸಲ್ಲುವ ಗೌರವ. ಆದಷ್ಟು ಬೇಗ ಪದ್ಮಭೂಷಣ ಪ್ರಶಸ್ತಿಯು ಅನಂತನಾಗ್ ಅವರನ್ನು ಒಲೆದು ಬರಲಿ, ಈ ಅಭಿಯಾನಕ್ಕೆ ಚಾಲನೆ ನೀಡಿದ ರಿಷಬ್ ಶೆಟ್ಟಿ ಅವರಿಗೆ ಜಯಸಿಗಲಿ…ಇನ್ನಷ್ಟು ಈ ರೀತಿಯ ಅಭಿಯಾನದಿಂದ ಕನ್ನಡ ಕಲಾವಿದರಿಗೆ ಸಲ್ಲಬೇಕಾದ ಗೌರವಗಳು ಸಲ್ಲಲಿ ಎಂದು ಆಕೃತಿಕನ್ನಡ ಶುಭ ಹಾರೈಸುತ್ತದೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW