ಶ್ರೀ ವಿದ್ವಾನ್ ಅನಂತ ಭಾಗ್ವತ್ ಮಾರ್ಗದರ್ಶನದಲ್ಲಿ ಗುರುಪೂರ್ಣಿಮೆ

-ಶಾಲಿನಿ ಪ್ರದೀಪ್

‘ಶ್ರೀ ರಾಮಭಕ್ತಾನುಗ್ರ ಹಿಂದೂಸ್ತಾನಿ ಸಂಗೀತ ವಿದ್ಯಾಲಯ’ವು ಗುರುಪೂಣಿ೯ಮೆ ಅಂಗವಾಗಿ ಜುಲೈ ೨೧,೨೨,೨೮,೨೯ ಮತ್ತು ಆಗಸ್ಟ್೫ ರಂದು ಹಿಂದೂಸ್ತಾನಿ ಸಂಗೀತಾರಾಧನೆ ಕಾಯ೯ಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂಗೀತ ಶಾಲೆಯ ಒಂಬತ್ತನೇ ಗುರುಪೂಣಿ೯ಮೆ ಇದಾಗಿದ್ದು,ಕಾಯ೯ಕ್ರಮವು ಶೋತೃಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ವಿದ್ವಾನ್‌ ಶ್ರೀ ಅನಂತ್‌ ಭಾಗ್ವತ್‌ ಅವರ ಮಾಗ೯ದಶ೯ನದಲ್ಲಿ ಒಂದು ತಿಂಗಳ ಕಾಲ ವಾರಾಂತ್ಯದಲ್ಲಿ ಸಂಗೀತಾರಾಧನೆಯನ್ನು ಮಾಡಲಾಯಿತು. ಹಿಂದೂಸ್ತಾನಿ ಸಂಗೀತದಲ್ಲಿ ಸಾಕಷ್ಟು ಸಾಧನೆಗೈದ ಪಂಡಿತರಾದ ಆರ್.ಪಿ.ಅಸುಂಡಿ, ಶ್ರೀ ಪರಮೇಶ್ವರ್‌ ಹೆಗಡೆ ಅವರಿಂದ ಗಾಯನ, ವಿದ್ವಾನ್‌ ಶ್ರೀ ಎಂ.ಖಾಸೀಮ್‌ ಮಲ್ಲಿಗೆ ಮಡುವು ಅವರಿಂದ ಕುಮಾರವ್ಯಾಸ ಭಾರತ ವಾಚನ ಮತ್ತು ವಿದ್ವಾನ್‌ ಶ್ರೀ ಅನಂತ ಭಾಗ್ವತ್‌ ಅವರ ವಿದ್ಯಾಥಿ೯ಗಳ ರಾಗ,ಆಲಾಪನೆಗಳು ಕೇಳುಗರನ್ನು ಮತ್ರಮುಗ್ಧರನ್ನಾಗಿಸಿದವು.

ವಿದ್ವಾನ್‌ ಶ್ರೀ ಅನಂತ ಭಾಗ್ವತ್‌ ಅವರು ಕೇವಲ ಸಂಗೀತ ಹೇಳಿಕೊಡುವುದಷ್ಟೆ ಅಲ್ಲ. ತಮ್ಮ ವಿದ್ಯಾಥಿ೯ಗಳಿಗೆ ಉತ್ತಮ ವೇದಿಕೆ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವಷ೯ವೂ ಈ ಗುರುಪೂಣಿ೯ಮೆ ದಿನದಂದು ಹಿಂದೂಸ್ತಾನಿ ಸಂಗೀತಾರಾಧನೆ ಎನ್ನುವ ಕಾಯ೯ಕ್ರಮವನ್ನು ಹುಟ್ಟುಹಾಕಿದ್ದಾರೆ. ತಮ್ಮ ವಿದ್ಯಾಥಿ೯ಗಳಿಗೆ ದೊಡ್ಡ ವೇದಿಕೆಯನ್ನು ಕಲ್ಪಿಸುವುದರ ಜೊತೆಗೆ ಅವರಲ್ಲಿ ಆತ್ಮಸ್ಥೈಯ೯ ಮೂಡಿಸುವಲ್ಲಿ ಇವರ ಪಾತ್ರ ಹಿರಿಯದು.

ಭಾಗ್ವತ್‌ ಅವರ ಶಿಷ್ಯಂದಿರಲ್ಲಿ ಒಬ್ಬರಾದ ಪರಮೇಶ್ವರ್‌ ಹೆಗಡೆಯವರ ಬಳಿ ನನ್ನ ಮಕ್ಕಳು ಸಂಗೀತಾಭ್ಯಾಸ ಮಾಡುತ್ತಿದ್ದು, ಸಂಗೀತವು ಮನರಂಜನೆಯ ನೀಡುವುದರ ಜೊತೆಗೆ ಜೀವನದಲ್ಲಿ ಶಿಸ್ತು,ಶ್ರದ್ಧೆಯನ್ನು ಹೇಗೆ ಕಲ್ಪಿಸಬಹುದು ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಇವರ ಮುಖಾಂತರ ಶ್ರೀ ಅನಂತ ಭಾಗ್ವತ್‌ ಅವರ ಗುರುಪೂಣಿ೯ಮೆ ಕಾಯ೯ಕ್ರಮ ನೋಡುವ ಮತ್ತು ಹಾಡು ಕೇಳುವ ಅವಕಾಶ ನಮಗೆ ಸಿಕ್ಕಿದ್ದು ನಿಜಕ್ಕೂ ಸಂತೋಷ ನೀಡಿತು.

ಸಿನಿಮಾ ಹಾಡುಗಳ ಆಭ೯ಟದಲ್ಲಿ ಇಂದು ಶಾಸ್ತ್ರೀಯ ಸಂಗೀತಗಳು ಮರೆಯಾಗುತ್ತಿರುವುದು ನಿಜಕ್ಕೂ ಶೋಚನೀಯ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಕಾಯ೯ಕ್ರಮ ಮೂಲಕ ಶಾಸ್ತ್ರೀಯ ಸಂಗೀತದತ್ತ ಜನರ ಒಲವನ್ನು ಹರಿಸುವುದು ಅತಿ ಮುಖ್ಯವಾಗಿದೆ. ಆ ಪ್ರಯತ್ನವನ್ನು ವಿದ್ವಾನ್‌ ಅನಂತ ಭಾಗ್ವತ್‌ ಅವರು ಮಾಡುತ್ತಿದ್ದು, ಇದಕ್ಕೆ ಸಾಕಷ್ಟು ಜನರಿಂದ ಪ್ರೋತ್ಸಾಹವೂ ಸಿಕ್ಕಿದೆ.

ಊಟದ ರುಚಿಗೆ ಉಪ್ಪಿನಕಾಯಿ ಎಷ್ಟು ಮುಖ್ಯವೋ…ಹಾಗೆಯೇ ವಾದಕರಿಲ್ಲದ ಸಂಗೀತ ರುಚಿಸದು. ಸಹವಾದಕರಾಗಿ ಪಂಡಿತ ಸತೀಶ ಹಂಪಿಹೊಳಿ, ವಿದ್ವಾನ್‌ರುಗಳಾದ ಶ್ರೀ ಸುರೇಶ ಹೆಗಡೆ, ಶ್ರೀ ಅಮೃತೇಶ ಕುಲ್ಕಣಿ೯, ಶ್ರೀ ಎಂ.ಪಿ. ಅಶ್ವಿನ್,ಶ್ರೀ ಶೌರಿ ಶಾನಭಾಗ್, ಶ್ರೀ ನಾಗರಾಜ ಹೆಗಡೆ, ನಾಗೇಂದ್ರ ಭಟ್, ಎಂ.ಸಿ.ಶ್ರೀನಿವಾಸ, ಶ್ರೀ ಅಭಯ ಕುಲ್ಕಣಿ೯, ಸುಪ್ರೀತ್,ಶ್ರೀ ಮಧುಸೂದನ್‌ ಭಟ್, ಶ್ರೀ ಸೂಯ೯ ಉಪಾಧ್ಯಾಯ,ಶ್ರೀ ಹರೀಶ ಕರಣಮ್‌ ಮತ್ತು ಶ್ರೀಮತಿ ಮನೋರಮಾ ಹೆಗಡೆಯವರುಗಳು ಸಾಥ್‌ ನೀಡಿದ್ದು,ಕಾಯ೯ಕ್ರಮಕ್ಕೆ ಇನ್ನಷ್ಟು ಮೆರಗು ನೀಡಿತು.

ವಿದ್ವಾನ್‌ ಶ್ರೀ ಅನಂತ ಭಾಗ್ವತ್‌ ಅವರ ಮಾಗ೯ದಶ೯ನದಲ್ಲಿ ಹೀಗೆ ಹೊಸ ಪ್ರತಿಭೆಗಳು ಇನ್ನಷ್ಟು ಕನ್ನಡನಾಡಲ್ಲಿ ಬೆಳೆಯಲಿ ಎನ್ನುವುದೇ ನಮ್ಮೆಲ್ಲರ ಆಶಯ.

#ಆಕತನಯಸ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW