‘ಅನುಭವ’ ಕವನ – ಹೇಮಂತ್ ಪಾರೇರಾ

ಮಳೆಗೆ ಅರಳಿದ ಮಣ್ಣಿನ ಘಮಲು ಹಾಗೆ ಇದೆ…ಸುಖ ಬಂದಾಗ ಆಸ್ವಾದಿಸಿ ಅನುಭವಿಸಿದ್ದೇನೆ…ಕವಿ ಹೇಮಂತ್ ಪಾರೇರಾ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಒಬ್ಬೊಬ್ಬರದು ಒಂದೊಂದು ಬಾಳ ಪರಿಸ್ಥಿತಿ
ನಾನೇನು ಹೇಳಲಿ ಜಗದೊಳಗೆ ಹಲವು ನೀತಿ
ಕಣ್ಣಿಗೆ ಹೇಗೆ ಕಾಣುವುದೋ ನೋಡುವ ರೀತಿ
ಅವರವರ ಇಚ್ಚೆಯಂತೆ ಪ್ರಪಂಚದ ಪರಿಮಿತಿ

ನಗುವ ಎಲ್ಲರಲ್ಲೂ ಒಳಗೊಂದು ನೋವಿದೆ
ಒಂದೊಂದು ಅನುಭವ ಅದು ಅವರವರದೆ
ನಗುವುದಾ ಕಲಿಸುವ ಪಾಠಶಾಲೆಯಿಲ್ಲ ಇಲ್ಲಿ
ಆದರೂ ನಗುತ್ತಾರೆ ಒಳಗೊಳಗೆ ನೋವಿನಲ್ಲಿ

ಏನೆಂದು ಹೇಳಬೇಕು ನಾಳೆಯ ಬಗ್ಗೆ ಅರಿವಿಲ್ಲ
ಶೋಕದ ಕುರಿತಂತೆ ನಾನೇನು ಹೇಳುವುದಿಲ್ಲ
ಸಂಜೆ ಮುಂಜಾನೆ ನಿಜವೇ ನನಗೂ ಗೊತ್ತಿಲ್ಲ
ಬರುವ ದಿನಗಳ ತಿದ್ದುಪಡಿ ಯಾರೂ ಮಾಡಿಲ್ಲ

ಮಳೆಗೆ ಅರಳಿದ ಮಣ್ಣಿನ ಘಮಲು ಹಾಗೆ ಇದೆ
ಸುಖ ಬಂದಾಗ ಆಸ್ವಾದಿಸಿ ಅನುಭವಿಸಿದ್ದೇನೆ
ಬರಗಾಲದ ಛಾಯೆಗೂ ಸೊರಗಿ ಮರುಗಿದ್ದೇನೆ
ನಾಳೆಯ ನಿರೀಕ್ಷೆ ಇಂದಿನ ಪರೀಕ್ಷೆ ಸಾಗಿದ್ದೇನೆ


  • ಹೇಮಂತ್ ಪಾರೇರಾ – ಕೊಡಗು

Leave a Reply

Home
Search
Menu
Recent
About
×