ಏನಂಥಾ ತಪ್ಪಾಗಿದೆ ನನ್ನಿಂದ?… ನಿನ್ನ ಬಾಹುಗಳು ನನ್ನ ಬಂಧಿಸಲೂ…ಸುನೀತಾ ಹೆಗ್ಡೆ ಅವರ ಲೇಖನಿಯಲ್ಲಿ ಅರಳಿದ ‘ಅಪ್ಪಿಕೊಂಡುಬಿಡು ಒಮ್ಮೆ’ ತಪ್ಪದೆ ಮುಂದೆ ಓದಿ…
ಒಮ್ಮೊಮ್ಮೆಅನಿಸುತ್ತದೆ
ನಾನು ಕುರುಡಿಯಾಗಿರಬೇಕಿತ್ತೆಂದು
ನಿನ್ನ ಮುಖವ ನೋಡುವ
ಭಾವನೆಗಳ ಹೆಕ್ಕುವ ಜರೂತ್ತೇ ಬರುತ್ತಿರಲಿಲ್ಲ…
ಮಾತು ಕೇಳಿಸಿಕೊಳ್ಳಬಹುದು ಬಿಡು
ಆದರೆ ನಿನ್ನ ನೋಡುವಾಗ
ಆ ಕಣ್ಣಲ್ಲಿ ಕಾಣುವ ಅರ್ಥವಾಗದ
ಯಾವುದೋ ಕಡು ನೋವ ನಾ
ಸಹಿಸಿಕೊಂಡೇನು ಹೇಗೆ?
ಏನಂಥಾ ತಪ್ಪಾಗಿದೆ ನನ್ನಿಂದ?
ನಿನ್ನ ಬಾಹುಗಳು ನನ್ನ ಬಂಧಿಸಲೂ
ಹಿಂಜರಿಯುಂತೆ ಮಾಡುವಂಥದ್ದು?
ಒಮ್ಮೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿಬಿಡು
ಅದೇನೆಂದು.
ಬದುಕಿನ್ನೂ ಇದೆ .. ನಗುತ್ತಾ ಸಾಗಬೇಕಿದೆ
ಜೀವನದ ಈ ಪಯಣ ನಿನ್ನ ಮೌನದಿಂದ
ದೀರ್ಘವೆನಿಸುವಂತೆ ಮಾಡಬೇಡ..
ತಪ್ಪು ಒಪ್ಪುಗಳು ಸಹಜ
ಅಪ್ಪಿಕೊಂಡುಬಿಡು ಒಮ್ಮೆ
ಅದೇನಿದ್ದರೂ ಹೇಳು ಒಪ್ಪಿಕೊಂಡುಬಿಡುತ್ತೇನೆ……
- ಸುನೀತಾ ಹೆಗ್ಡೆ