ಟಾಕ್ಸಿಕ್ …ಟಾಕ್ಸಿಕ್ …ಎಲ್ಲೆಡೆ ಟಾಕ್ಸಿಕ್ ಅಬ್ಬರ. ಹೇಗಿದೆ? ಚನ್ನಾಗಿದೇನಾ? ಎಡಿಟಿಂಗ್ ಹೇಗಿದೆ? ಯಶ್ ನಟನೆ ಹೇಗಿದೆ ? ಎಲ್ಲದಕ್ಕೂ ಉತ್ತರ ಲೇಖಕರಾದ ಸುಚಿತ್ರಾ ಹೆಗಡೆ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಯಾಕೋ ಮೊದಲ ದಿನವೇ ಸಿನೆಮಾ ನೋಡಿ ಬಂದಾಗಿನಿಂದ ಫಿಲ್ಮ್ ಹೇಗಿದೆ ಅಂದು ಕೇಳಿದವರಿಗೆ ಹೀಗಿದೆ ಅಂತ ಖಡಾಖಂಡಿತವಾಗಿ ಉತ್ತರ ಕೊಡಲಾಗುತ್ತಿಲ್ಲ.
ಚೆನ್ನಾಗಿಲ್ಲವೇ?
ಹಾಗೇನಿಲ್ಲ.
ಚೆನ್ನಾಗಿದೆಯೆ?
ಹೇಳಕಾಗ್ತಿಲ್ಲ. ಹೆಂಗೆ ಹೇಳೋದು?
ಯಶ್ ನಟನೆ?
ಓ…ವಂಡರ್ಫುಲ್…ಯಶ್ ಇಡೀ ಸಿನೆಮಾವನ್ನೇ ಆವರಿಸಿಕೊಂಡು ಜೀವಿಸಿದ್ದಾರೆ.
ಎಲ್ಲಾ ನಟಿಯರು?
ಚೆನ್ನಾಗಿ ಅಭಿನಯಿಸಿದ್ದಾರೆ.
ಸಿನೆಮಾಟೊಗ್ರಫಿ?
ಅದ್ಭುತವಾಗಿದೆ.
ತಾಂತ್ರಿಕ ಅಂಶಗಳೆಲ್ಲ?
ಸೊಗಸಾಗಿವೆ.
ನಿರೂಪಣೆ ?
ಬಿಗಿಯಾಗಿರಬೇಕಿತ್ತು.
ಸಂಭಾಷಣೆ?
ಮನಕ್ಕೆ ನಾಟುವುದಕ್ಕಿಂತ ಮೈ ಸುತ್ತಲೂ ಸುತ್ತುವುದೇ ಜಾಸ್ತಿ.
ಸ್ಕ್ರೀನ್ ಪ್ಲೇ?
ಹಾಗಂದ್ರೇನು?
ಎಡಿಟಿಂಗ್?
ಅಯ್ಯೋ ಬಿಟ್ಬಿಡಿ ನನ್ನ.
ಕ್ಲೈಮಾಕ್ಸ್?
ಲಿಟರಲಿ ಔಟ್ ಆಫ್ ದ ವರ್ಲ್ಡ್!
ಕಥೆ?
ಅದೇ… ಗಾಟ್ ಇಟ್. ಕಥೆಯದ್ದೆ ಕಥೆಯಾಗಿರೋದು. ಸಿನೆಮಾ ಮುಗಿದು ಹೊರಗೆ ಬಂದಾಗ ಜಗತ್ತು ಮತ್ತಷ್ಟು ಚೆಂದ ಅನ್ನಿಸ್ತು. ಅಲ್ಲಿ ವಿನಾಕಾರಣ ಗನ್ನುಗಳು, ಚಾಕುಗಳು ಹಾರಾಡ್ತನೂ ಇರ್ಲಿಲ್ಲ. ಇರುವೆಗಳಂತೆ ಸಾವುಗಳು, ಕೊಲೆಗಳು ನಡೀತಾನೂ ಇರ್ಲಿಲ್ಲ. ನಮ್ಮ ಹೆಣ್ಣು ಮಕ್ಕಳು ಬರೀ ಚೆಂದ ಕಾಣೋದು ಮತ್ತು ಪ್ರೀತಿ ಮಾಡೋದು ಬಿಟ್ಟು ಬೇರೆ ಎಷ್ಟೊಂದು ಕೆಲ್ಸ ಮಾಡ್ತಾ ಇರೋದನ್ನು ನೋಡಿ ಆಶ್ಚರ್ಯವಾಯ್ತು.
ಸಂತೆಯಲ್ಲೂ ಶಾಂತಿಯ ಅನುಭವ ಪಡೆದುಕೊಳ್ಳುವ ಕಲೆ ತಾನಾಗಿ ಒಲಿದು ಬಂತು. ಸಿನೆಮಾದ ಕತೆಯಂತೆ ನಾಪತ್ತೆಯಾಗಿದ್ದ ನನ್ನ ಆತ್ಮ ಮತ್ತೆ ಮರಳಿದಂತೆ ಭಾಸವಾಯಿತು.
ನನ್ನ ಫೇರಿ ಟೇಲ್ ನ ಕ್ಯೂಟ್ ಕಲ್ಪನೆ ನುಚ್ಚು ನೂರಾಗಿ ಗ್ರೋನ್ ಅಪ್ ಆದ ಬಗ್ಗೆ ಹೆಮ್ಮೆ ಮೂಡಿತು. ಯಶ್ ಗೆ ಮುಂದಿನ ದಿನಗಳಲ್ಲಿ ಅವನ ಪ್ರತಿಭೆಗೆ ತಕ್ಕ ಪಾತ್ರಗಳು ದೊರೆಯಲೆಂದು ಮನದಾಳದ ಹಾರೈಕೆ.
ನಂಗೆ ನಮ್ಮ ಭಾಷೆ, ಸಂಸ್ಕೃತಿ, ಕಲೆ, ಕಲಾವಿದರು ಎಲ್ಲವುಗಳ ಕುರಿತು ಅಭಿಮಾನವಿದೆ. ಆದ್ರೆ ಹಸೀಸುಳ್ಳು ಹೇಳಲಾರೆ. ಅಂದಹಾಗೆ ಈ ‘ಔರಾ’ಗಳ ‘ಎರಾ’ ಮುಗಿಯೋದೆಂದು ಭಾಯಿ?
- ಸುಚಿತ್ರಾ ಹೆಗಡೆ – ಲೇಖಕರು, ಬೆಂಗಳೂರು.
