‘ಅರಿವು’ ಕವನ – ನಾಗರಾಜ ಜಿ. ಎನ್. ಬಾಡ

ಹೊಂದಾಣಿಕೆ ಇರದ ಮೇಲೆ ದೂರ ದೂರ ಸರಿಬೇಕು ಜೋಕೆ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…

ಅವರಿರವರ ಮಾತಿಗೆ
ತಲೆ ಕೆಡಿಸಿ ಕೊಳ್ಳುವಿ ಯಾಕೆ
ನಿನ್ನದಲ್ಲದ ತಪ್ಪಿಗೆ
ಸುಮ್ಮನೆ ಕೊರಗುವಿ ಯಾಕೆ

ಮಾತಿಗೆ ಮಾತು ಬೆಳೆಸಿ
ಜಗಳ ಮಾಡುವಿ ಯಾಕೆ
ಮೌನದಿ ಸಾಗುವುದನ್ನು
ಮರೆಯುವಿ ಯಾಕೆ

ಊರು ಎಂದ ಮೇಲೆ
ಕೇರಿ ಇರಲೇ ಬೇಕು
ಕೇರಿಯಲ್ಲಿಯ ಮೋರಿ
ಗಬ್ಬು ನಾರುವುದು ಯಾಕೆ

ಹೊಂದಾಣಿಕೆ ಇರದ ಮೇಲೆ
ದೂರ ದೂರ ಸರಿಬೇಕು ಜೋಕೆ
ಸುಮ್ಮನೆ ಗುದ್ದಾಟವ ಮಾಡಿ
ಯಾತನೆ ಪಡೆಯುವುದು ಯಾಕೆ

ಮನದೊಳಗಿನ ಕಿಡಿ ನೆರೆ_ಹೊರೆಯ
ಸುಡುವ ಮೊದಲು
ನಿನ್ನ ಮನವನ್ನೇ ಸುಡುವುದು
ಎನ್ನುವುದ ಅರಿಯದೆ ಹೋದೆ ಯಾಕೆ

ನಿನ್ನರಿವು ನಿನ್ನೊಳಗೆ
ಇರದೆ ಹೋದ ಮೇಲೆ
ಜಗದ ಜನರಮೇಲೆ ಸುಮ್ಮನೆ
ಗೂಬೆ ಕೂರಿಸುವೆ ಯಾಕೆ

ಸುಡುವ ಮನವ ಮೊದಲು
ತಣ್ಣಗೆ ಮಾಡಿಕೊ
ಸುತ್ತಮುತ್ತಲಿನ ಗೌಜು ಗದ್ದಲದ
ಉಸಾಬರಿಯು ನಿನಗೆ ಯಾಕೆ

ಶಾಂತಿ ಕದಡುವ ಜನರ ನಡುವೆ
ಮನಶಾಂತಿ ಹುಡುಕುವಿ ಯಾಕೆ
ಯಾರದು ಸುಖಕ್ಕೆ ದುಡಿ_ದುಡಿದು
ಕತ್ತೆಯಂತೆ ಆಗುವೆ ಯಾಕೆ

ಶಾಂತಿ ನೆಮ್ಮದಿಯ ಜೀವನವ
ಎಲ್ಲೋ ಹುಡುಕುವಿ ಯಾಕೆ
ನಿನ್ನೊಳಮನದ ಬೆಳಕಿನ ಕಿಟಕಿಯ
ತೆರೆಯುವುದ ಮರೆತೆ ಯಾಕೆ


  • ನಾಗರಾಜ ಜಿ. ಎನ್. ಬಾಡ – ಕಮರ್ಷಿಯಲ್ ಟ್ಯಾಕ್ಸ ಇನ್ಸ್ಪೆಕ್ಟರ್, ವಾಣಿಜ್ಯ ತೆರಿಗೆ ಅಧಿಕಾರಿಗಳ ಕಛೇರಿ, ಕುಮಟ, ಉತ್ತರ ಕನ್ನಡ.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading