ಸಂವೇದನಾತ್ಮಕವಾಗಿ ಮಹಿಳೆಯರೊಂದಿಗೆ ಸಂವಹನ ಮಾಡುವ ಮೂಲಕ ಅತ್ಯುತ್ತಮವಾಗಿ ಮಹಿಳಾ ಪಡೆಯನ್ನು ಕಟ್ಟಿರುವ ಸ್ವಾತಿ ಶಾಂತಕುಮಾರ್ ಅವರು ಮಿಲಿಟರಿಯಲ್ಲಿ ಮಹಿಳೆಯರ ಅಸ್ಮಿತೆಯ ಹಾಗೂ ಲಿಂಗ ಸಮಾನತೆಯ ನಿಟ್ಟಿನಲ್ಲಿ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಪಾಟೀಲ್ ಅವರು ‘ಸ್ವಾತಿ ಶಾಂತಕುಮಾರ್ ಅವರಿಗೆ ಸಮಾನ ಪಾಲುದಾರರು ಶಾಶ್ವತ ಶಾಂತಿ’ ವಿಷಯದ ಕುರಿತು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಸಮಾನ ಪಾಲುದಾರರು ಶಾಶ್ವತ ಶಾಂತಿ. ವಿಶ್ವ ಸಂಸ್ಥೆಯ ಪ್ರಶಸ್ತಿ ಮೇಜರ್ ಸ್ವಾತಿ ಶಾಂತಕುಮಾರ್ ಅವರಿಗೆ ದಕ್ಷಿಣ ಸುಡಾನ್ ನಲ್ಲಿ ವಿಶ್ವ ಸಂಸ್ಥೆಯ ಯೂನಿಮಿಸ್ (unmiss) ಎಂಬ ಎಂಬ ಮಿಷನ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತದ ಮಿಲಿಟರಿ ಪಡೆಯ ಅದರಲ್ಲೂ ವಿಶೇಷವಾಗಿ ನಮ್ಮ ಕರ್ನಾಟಕದ ಬೆಂಗಳೂರಿನ ವಾಸಿ ಮೇಜರ್ ಸ್ವಾತಿ ಶಾಂತಕುಮಾರ್ ಅವರಿಗೆ 2025 ರ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಪ್ರಶಸ್ತಿ ಲಭಿಸಿದೆ. 31ರ ಹರೆಯದ ಸ್ವಾತಿ ಶಾಂತಕುಮಾರ್ ಅವರು ದಕ್ಷಿಣ ಸುಡಾನ್ ನಲ್ಲಿರುವ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಮಹಿಳೆಯರ ನೇತೃತ್ವದ ಸಮುದಾಯಗಳ ತೊಡಗಿಕೊಳ್ಳುವಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಪಡೆಯ ನೇತೃತ್ವವನ್ನು ವಹಿಸಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಆಂಟೋನಿಯೋ ಗ್ಲಿಟರಸ್ ಅವರು 2025ರ ಸಾಲಿನ ಈ ಪ್ರಶಸ್ತಿಯನ್ನು ಘೋಷಿಸಿದ್ದು ಈ ಪ್ರಶಸ್ತಿಯು ಸಮಾನ ಪಾಲುದಾರರು ಶಾಶ್ವತ ಶಾಂತಿ ಎಂಬ ಯೋಜನೆಯಡಿ ನೀಡಲಾಗುತ್ತದೆ. ಇದು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಪಾಲನೆಯನ್ನು ಬಲಪಡಿಸುವ ಹಾಗೂ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಅವರಿಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ. ದಕ್ಷಿಣ ಸುಡಾನ್ ನ ಮಲಕ್ಕಲ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮುದಾಯದ ತಳಮಟ್ಟದ ಸಂಪರ್ಕವನ್ನು ಸುಧಾರಿಸುವಂತಹ ಗಮನಹರಿಸಿರುವ ಸ್ವಾತಿ ಅವರ ತಂಡದ ಕೆಲಸ ವಿಶ್ವಸಂಸ್ಥೆಯ ಮೆಚ್ಚುಗೆ ಗಳಿಸಿದೆ.

ಯುನೈಟೆಡ್ ನೇಶನ್ಸ್ ಮಿಷನ್ ಇನ್ ದ ರಿಪಬ್ಲಿಕ್ ಆಫ್ ಸೌತ್ ಸುಡಾನ್ UNMISS ಗೆ ನಿಯೋಜಿಸಲಾದ ಭಾರತದ ಮೊದಲ ಮಹಿಳಾ ಮಿಲಿಟರಿ ಪಡೆಯ ನೇತೃತ್ವವನ್ನು ವಹಿಸಿರುವ ಸ್ವಾತಿ ಅವರ ತಂಡವು ಮಹಿಳಾ ಶಾಂತಿಪಾಲಕರಾಗಿ ಪರಿಚಯವಿಲ್ಲದ ಪ್ರದೇಶಗಳಲ್ಲಿ ಸಮುದಾಯದ ಸಂವಹನದ ಕೇಂದ್ರ ಬಿಂದುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸ್ವಾತಿ ಅವರು ಹೇಳುವ ಹಾಗೆ ಅವರು ಮೊದಲು ಬಂದಾಗ ಮಹಿಳೆಯರು ಅವರೊಂದಿಗೆ ಮಾತುಕತೆ ಆಡಲು ಕೂಡ ಹಿಂಜರಿಯುತ್ತಿದ್ದರು. ಸಮವಸ್ತ್ರದಲ್ಲಿರುವ ಮಹಿಳೆಯರನ್ನು ನೋಡುವುದು ಕೂಡ ಅಭ್ಯಾಸವಿಲ್ಲದ ಅಲ್ಲಿನ ಮಹಿಳೆಯರು ಭಾರತೀಯ ಮಿಲಿಟರಿ ಪಡೆಯ ಮಹಿಳಾ ಸಿಬ್ಬಂದಿಯವರು ಗಸ್ತು ತಿರುಗುವಾಗ ಅವರನ್ನು ವಿಚಿತ್ರವಾಗಿ ನೋಡುತ್ತಿದ್ದವರು ನಂತರದ ದಿನಗಳಲ್ಲಿ ನಿಧಾನವಾಗಿ ಅವರೊಂದಿಗೆ ಸಂಪರ್ಕ ಸಾಧಿಸಿ ಅವರ ಬದುಕಿನ ಕಥೆಗಳನ್ನು, ನೋವು, ನಲಿವುಗಳನ್ನು ಹಂಚಿಕೊಳ್ಳಲು ಆರಂಭಿಸಿದರು ಎಂದು ಸ್ವಾತಿ ಹೇಳುತ್ತಾರೆ.
ಸಾಮಾನ್ಯವಾಗಿ ವಿಶ್ವ ಸಂಸ್ಥೆಯು ನಿಯೋಜಿಸುವ ಮಹಿಳಾ ಶಾಂತಿಪಾಲಕರಿಗೆ ಅತ್ಯಂತ ಹೆಚ್ಚಿನ ಬೆಂಬಲವನ್ನು ನೀಡುತ್ತಾರೆ.
ಸ್ವಾತಿ ಶಾಂತಕುಮಾರ್ ನೇತೃತ್ವದ ತಂಡವನ್ನು ವಿಶ್ವಾದ್ಯಂತ ಪಾಲನಾ ಕಾರ್ಯಾಚರಣೆಗಳ ನಾಮ ನಿರ್ದೇಶನಗಳಿಂದ ಆಯ್ಕೆ ಮಾಡಿದ್ದು ಜಾಗತಿಕವಾಗಿ ವಿಶ್ವ ಸಂಸ್ಥೆಯ ಸಿಬ್ಬಂದಿಯನ್ನು ಒಳಗೊಂಡ ವಿಶ್ವಸಂಸ್ಥೆ ವ್ಯಾಪ್ತಿಯ ಮತದಾನ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದಾಗ್ಯೂ ಕೂಡ ಅವರ ತಂಡವು ಆದೇಶದ ಮಿತಿಯ ಹೊರಗೆ ವ್ಯಾಪಕವಾದ ಕೆಲಸದ ಅಗತ್ಯವಿದ್ದುದನ್ನು ಮನಗಂಡಿತು. ತಂಡವು ದೂರದ ಪ್ರದೇಶಗಳನ್ನು ತಲುಪಲು ಕಾಲ್ನಡಿಗೆ, ನದಿ ಮತ್ತು ವಾಯುಗಸ್ತುಗಳನ್ನು ಕೈಗೊಳ್ಳುತ್ತಿತ್ತು. ಸಂಘರ್ಷ ಪೀಡಿತ ಸ್ಥಳಗಳಲ್ಲಿ ಮಹಿಳೆಯರಿಗೆ ಆರೋಗ್ಯದ ಕಿಟ್ ಗಳನ್ನು ನೀಡುವುದು ಹಾಗೂ ಅವರ ಆರೋಗ್ಯದ ಕುರಿತ ವಿಚಾರಣೆಗಳನ್ನು ನಡೆಸುವುದು ಇವರ ಕಾರ್ಯ ವ್ಯಾಪ್ತಿಯಲ್ಲಿ ಬರುತ್ತಿತ್ತು.
ತಂಡದ ಇತರ ಸದಸ್ಯರಲ್ಲಿ ಒಬ್ಬರಾಗಿರುವ ನೀತು ಎಂಬ ತಂಡದ ಸದಸ್ಯೆ ಸ್ವಾತಿ ಅವರನ್ನು ಕುರಿತು ತನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸುವ ಮತ್ತು ತಂಡವನ್ನು ಸಬಲೀಕರಣಗೊಳಿಸುವ ವ್ಯಕ್ತಿಯಾಗಿ ಅವರು ಅತ್ಯುತ್ತಮ ಕಾರ್ಯ ನಿರ್ವಹಣೆಯನ್ನು ಮಾಡುತ್ತಾರೆ ಹಾಗೂ ನಾವು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಲು ಹುರಿದುಂಬಿಸುತ್ತಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಭಾರತದ ಮಿಲಿಟರಿ ಪಡೆಯು ಸ್ವಾತಿ ಅವರ ನೇತೃತ್ವದಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದು ಇದು ಸಮುದಾಯ ಮಟ್ಟದಲ್ಲಿ ಅತಿ ಹೆಚ್ಚಿನ ಭಾಗವಹಿಸುವಿಕೆಯಾಗಿದೆ. ಮಹಿಳೆಯರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯನಿರ್ವಹಿಸಿದೆ. ದೂರದ ಇತರ ಕೌಂಟಿಗಳಿಗೆ ವಾಯು ಮಾರ್ಗದ ಸೇವೆಯ ಮೂಲಕ ಹಾಗೂ ಅತಿ ದೀರ್ಘ ದೂರದ ಪ್ರದೇಶಗಳಿಗೆ ವಾಯುಯಾನದ ಮೂಲಕ ಸಂಪರ್ಕವನ್ನು ಸುಧಾರಿಸುವಲ್ಲಿ ಈ ತಂಡವು ಪ್ರಮುಖ ಯಶಸ್ಸನ್ನು ಸಾಧಿಸಿದೆ.
ಸ್ವಾತಿಯ ತಂದೆ ಶಾಂತಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು ಮಗಳ ಸಾಧನೆಯ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಐ ಟಿ ಸಿ ಯಲ್ಲಿ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದೆ ನಿವೃತ್ತರಾದ ಶಾಂತಕುಮಾರ್ ಅವರು ತಮ್ಮ ಕುಟುಂಬಕ್ಕೆ ಯಾವುದೇ ಮಿಲಿಟರಿ ಸೇವೆಯ ಹಿನ್ನೆಲೆ ಇರಲಿಲ್ಲ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಇರುವಂತೆಯೇ ಬೆಳೆದ ತಮ್ಮ ಮೊದಲ ಮಗಳು ಸ್ವಾತಿ ಇಂಜಿನಿಯರಿಂಗ್ ವಿದ್ಯಾಭ್ಯಾಸದ ನಂತರ ಮಿಲಿಟರಿ ಸೇರುವ ಆಶಯವನ್ನು ವ್ಯಕ್ತಪಡಿಸಿದಳಲ್ಲದೇ ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿ ಪರೀಕ್ಷೆ ಬರೆದು ಅದರಲ್ಲಿ ಪಾಸಾಗಿ ಸೇನೆಗೆ ಸೇರಿದಳು.
ಮಗಳ ಸಾಧನೆಯ ಕುರಿತು ಹೆಮ್ಮೆಯ ಜೊತೆಗೆ ತೃಪ್ತಿ ಕೂಡ ಇದ್ದರೂ ನನ್ನ ಮಗಳ ಸುರಕ್ಷತೆ ನನಗೆ ಎಲ್ಲಕ್ಕಿಂತ ಮುಖ್ಯ…ಅದನ್ನು ನೀವು ಅರ್ಥಮಾಡಿಕೊಳ್ಳುವಿರಿ ಎಂದು ಭಾವಿಸಿದ್ದೇನೆ ಎಂದು ಮಾಧ್ಯಮ ಒಂದು ತಮಗೆ ಪ್ರಶ್ನೆ ಕೇಳಿದಾಗ ಶಾಂತಕುಮಾರ್ ಉತ್ತರಿಸಿದರು.
ಫೆಬ್ರವರಿ ಮೊದಲ ವಾರದಲ್ಲಿ ಅವರು ಭಾರತಕ್ಕೆ ಹಿಂತಿರುಗುತ್ತಾರೆ. ಅವರ ಮುಂದಿನ ನಿಯೋಜನೆ ಯುವ ಕೆಡೆಟ್‌ಗಳಿಗೆ ತರಬೇತಿ ನೀಡುವುದಾಗಿದೆ. ಎಂದು ಕೂಡ ಶಾಂತಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಲಿಂಗರಾಜಪುರಂ ನಿವಾಸಿ ಮೇಜರ್ ಸ್ವಾತಿ ಸೇಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ವನ್ನು ಪೂರೈಸಿ, ಕ್ರೈಸ್ಟ್ ಕಾಲೇಜಿನಲ್ಲಿ ಪಿ ಯು ಪದವಿ ಪಡೆದು ನಂತರ ನ್ಯೂ ಹಾರಿಜಾನಗೆ ತೆರಳಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದರು.
ಸರ್ಕಾರಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿಯಾಗಿರುವ ಅವರ ತಾಯಿ ರಾಜಮಣಿ ಭಾರತದ ಪ್ರಖ್ಯಾತ ನಿಯತಕಾಲಿಕ ಟೈಮ್ಸ್ ಆಫ್ ಇಂಡಿಯಾದ ಸಂದರ್ಶನದಲ್ಲಿ ಹೀಗೆ ಹೇಳಿದರು: “ಅವಳು ಕ್ಯಾಂಪಸ್ ಆಯ್ಕೆಯ ಮೂಲಕ IBM ನಲ್ಲಿ ಕೆಲಸ ಪಡೆದಳಲ್ಲದೇ ಪದವಿಯ ನಂತರ ಒಂದು ವರ್ಷ ಕಾಲ ಅಲ್ಲಿಯೇ ಕೆಲಸ ಮಾಡಿದಳು. ಅಲ್ಲೇ ಅವಳು ಭಾರತೀಯ ಸೇನೆಗೆ ಸೇರಲು ನಿರ್ಧರಿಸಿದಳು. ಅವಳ ಸಾಧನೆಗಳ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ನಮ್ಮ ಮೂವರು ಹೆಣ್ಣುಮಕ್ಕಳಲ್ಲಿ ಅವಳು ಹಿರಿಯವಳು. ನಮ್ಮ ಎರಡನೇ ಮಗಳು ದ್ರುತ ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾಳೆ ಮತ್ತು ಕಿರಿಯ ಮಗಳು ಮೈತ್ರಿ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಮಾಡುತ್ತಿದ್ದಾಳೆ. ಎಂದು ತಮ್ಮ ಕುಟುಂಬದ ಕುರಿತು ಮಾಹಿತಿ ನೀಡಿದರು.
ನಂತರ ಮೇಜರ್ ಸ್ವಾತಿಯ ಕುರಿತು ಮಾತನಾಡುತ್ತಾ ಎಸ್‌ಎಸ್‌ಬಿ ಉತ್ತೀರ್ಣರಾದ ನಂತರ ಸ್ವಾತಿ ಒಟಿಎ ಪೂರ್ಣಗೊಳಿಸಿದರು ಮತ್ತು ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್‌ಗಳ ಕಂಪನಿಯನ್ನು ಸೇರಿದರು. ಅವರು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ (3 ಜೆಎಕೆ ರಿಫ್) 3 ನೇ ಬೆಟಾಲಿಯನ್‌ನಲ್ಲಿದ್ದಾರೆ.
ನಮ್ಮ ಕನ್ನಡ ನಾಡಿನ ಸ್ವಾತಿ ಶಾಂತಕುಮಾರ್ ಅವರು ವಿಶ್ವದ ಎಲ್ಲೆಡೆ ಕಾರ್ಯಾಚರಣೆ ನಡೆಸುತ್ತಿರುವ ಶಾಂತಿಪಾಲನಾ ಪಡೆಗಳ ವತಿಯಿಂದ ಹಾಗೂ ವಿಶ್ವಸಂಸ್ಥೆಯ ನಾಮನಿರ್ದೇಶನಗಳಲ್ಲಿ ಆಯ್ಕೆಯಾಗಿ ನಂತರದ ಮತದಾನ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದುಮಹಿಳಾ ಸಬಲೀಕರಣಕ್ಕೆ ಹೊಸ ಮುನ್ನುಡಿಯನ್ನು ಬರೆದಿದ್ದಾರೆ.
ಸಂವೇದನಾತ್ಮಕವಾಗಿ ಮಹಿಳೆಯರೊಂದಿಗೆ ಸಂವಹನ ಮಾಡುವ ಮೂಲಕ ಅತ್ಯುತ್ತಮವಾಗಿ ಮಹಿಳಾ ಪಡೆಯನ್ನು ಕಟ್ಟಿರುವ ಸ್ವಾತಿ ಶಾಂತಕುಮಾರ್ ಅವರು ಮಿಲಿಟರಿಯಲ್ಲಿ ಮಹಿಳೆಯರ ಅಸ್ಮಿತೆಯ ಹಾಗೂ ಲಿಂಗ ಸಮಾನತೆಯ ನಿಟ್ಟಿನಲ್ಲಿ ಹೊಸ ಬಾಷ್ಯವನ್ನು ಬರೆದಿದ್ದಾರೆ. ಮೇಜರ್ ಸ್ವಾತಿ ಅವರ ಯೋಜನೆಗಳು ಹೀಗೆಯೇ ಅತ್ಯುತ್ತಮವಾಗಿ ಕಾರ್ಯಗತಗೊಳ್ಳುವ ಮೂಲಕ ಹೆಣ್ಣು ಮಕ್ಕಳು ಎಲ್ಲ ರಂಗಗಳಲ್ಲಿಯೂ ಬೆಳಗಲಿ ಎಂಬ ಆಶಯದೊಂದಿಗೆ
- ಹಿಂದಿನ ಸಂಚಿಕೆಗಳು :
- ಬದುಕಿಗೊಂದು ಸೆಲೆ (ಭಾಗ -೧)
- ಬದುಕಿಗೊಂದು ಸೆಲೆ (ಭಾಗ -೨)
- ಬದುಕಿಗೊಂದು ಸೆಲೆ (ಭಾಗ -೩)
- ಬದುಕಿಗೊಂದು ಸೆಲೆ ‘ಕೆಲ ವಿಷಯಗಳಿಗೆ ಕಿವುಡರಾಗಬೇಕು’ (ಭಾಗ – ೪)
- ಬದುಕಿಗೊಂದು ಸೆಲೆ ‘ಉದಾರತೆ ಎಂಬ ಮಾರುಕಟ್ಟೆ ತಂತ್ರ’ (ಭಾಗ- ೫)
- ಬದುಕಿಗೊಂದು ಸೆಲೆ ‘ಹೌದು! ನನಗೆ ವಯಸ್ಸಾಗುತ್ತಿದೆ’ (ಭಾಗ – ೬)
- ಬದುಕಿಗೊಂದು ಸೆಲೆ‘ಕಾಯುತ್ತಿದ್ದಾರೆ ನಿಮ್ಮವರು… ನಿಮಗಾಗಿ’ (ಭಾಗ -೭)
- ಬದುಕಿಗೊಂದು ಸೆಲೆ ‘ಹೆಣ್ಣು ಮಕ್ಕಳೇ ಎಚ್ಚರವಾಗಿ’ (ಭಾಗ – ೮)
- ಬದುಕಿಗೊಂದು ಸೆಲೆ ‘ ಮನೆಯ ಆಹಾರವೂ,ಕೌಟುಂಬಿಕ ಬಂಧವೂ’ (ಭಾಗ – ೯)
- ಬದುಕಿಗೊಂದು ಸೆಲೆ ‘ಶ್ರಾವಣ ಮಾಸ… ಶ್ರವಣ ಮಾಸ’ (ಭಾಗ – ೧೦)
- ಬದುಕಿಗೊಂದು ಸೆಲೆ ‘ಪ್ಯಾರಿಸ್ ಸುಗಂಧದ ಖ್ಯಾತಿಯ ಕೋಕೋ ಚಾನೆಲ್…. ಸತತ ಪ್ರಯತ್ನದ ಸಾಫಲ್ಯ’ (ಭಾಗ – ೧೧)
- ಬದುಕಿಗೊಂದು ಸೆಲೆ ವರಮಹಾಲಕ್ಷ್ಮಿ ಹಬ್ಬ (ಭಾಗ – ೧೨)
- ಬದುಕಿಗೊಂದು ಸೆಲೆ ‘ಸಿತಾರೆ ಜಮೀನ್ ಪರ್’ (ಭಾಗ – ೧೪)
- ಬದುಕಿಗೊಂದು ಸೆಲೆ ‘ಸಾಧನೆಯ ಶಿಖರ ಏರಲು…ಬೇಕು ಬದ್ಧತೆ’ (ಭಾಗ – ೧೫)
- ಬದುಕಿಗೊಂದು ಸೆಲೆ ‘ನನ್ನ ಪ್ರೀತಿಯ ಗಣೇಶ’ (ಭಾಗ – ೧೬)
- ಬದುಕಿಗೊಂದು ಸೆಲೆ ‘ಗಣೇಶ….ವಿಗ್ರಹ ಒಂದು ಸಂಕೇತಗಳು ನೂರು’ (ಭಾಗ – ೧೭)
- ಬದುಕಿಗೊಂದು ಸೆಲೆ ‘ನಮ್ಮ ಬದುಕು ಮತ್ತು ಆಯ್ಕೆಗಳು’ (ಭಾಗ – ೧೮)
- ಬದುಕಿಗೊಂದು ಸೆಲೆ ‘ಸ್ನೇಹ ಬಂಧ ’ (ಭಾಗ-೧೯)
- ಬದುಕಿಗೊಂದು ಸೆಲೆ ‘ಮಕ್ಕಳ ಕುರಿತು ಅತಿ ಕಾಳಜಿ…. ಖಂಡಿತ ಬೇಡ’ (ಭಾಗ-೨೦)
- ಬದುಕಿಗೊಂದು ಸೆಲೆ ‘ಮಕ್ಕಳ ಸಂಸ್ಕಾರದಲ್ಲಿ ತಾಯಿಯ ಪಾತ್ರ’ (ಭಾಗ-೨೧)
- ಬದುಕಿಗೊಂದು ಸೆಲೆ ‘ಮಗನಿಗೆ ಶಿಸ್ತಿನ ಪಾಠದ ಪತ್ರ’ (ಭಾಗ-೨೨)
- ಬದುಕಿಗೊಂದು ಸೆಲೆ ‘ಭಿತ್ತಿಯಲ್ಲಿ ನೆನಪಾಗಿ ಉಳಿದ… ಎಸ್ ಎಲ್ ಭೈರಪ್ಪ’ (ಭಾಗ-೨೩)
- ಬದುಕಿಗೊಂದು ಸೆಲೆ “ದ ಹ್ಯಾಪಿಯಸ್ ಮ್ಯಾನ ಆನ್ ದ ಅರ್ಥ’ (ಭಾಗ-೨೪)
- ಬದುಕಿಗೊಂದು ಸೆಲೆ ‘ಎಲ್ಲ ಏಟಿಗೂ ಇದಿರೇಟು….ಉತ್ತರವಲ್ಲ’ (ಭಾಗ-೨೫)
- ಬದುಕಿಗೊಂದು ಸೆಲೆ ‘ಗಂಡು ಹೆಣ್ಣು…. ಒಂದು ಸಾಮಾಜಿಕ ವಿಶ್ಲೇಷಣೆ’ (ಭಾಗ-೨೬)
- ಬದುಕಿಗೊಂದು ಸೆಲೆ ‘ಮೂಲಭೂತ ಅಭ್ಯಾಸಗಳು ಮತ್ತು ಮಕ್ಕಳು’ (ಭಾಗ-೨೭)
- ಬದುಕಿಗೊಂದು ಸೆಲೆ ‘ಬೆಳಕಿನ ಹಬ್ಬ ದೀಪಾವಳಿ ’ (ಭಾಗ-೨೮)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೨೯)
- ಬದುಕಿಗೊಂದು ಸೆಲೆ ‘ಸಡಗರ ಸಂಭ್ರಮದ ಕನ್ನಡ ರಾಜ್ಯೋತ್ಸವ’ (ಭಾಗ-೩೦)
- ಬದುಕಿಗೊಂದು ಸೆಲೆ ‘ನಿಮ್ಮ ಮಕ್ಕಳ ವರ್ತನೆ ಮಿತಿಯಲ್ಲಿರಲಿ… ಯಾವುದೂ ಅತಿಯಾಗದಿರಲಿ ’ (ಭಾಗ-೩೧)
- ಬದುಕಿಗೊಂದು ಸೆಲೆ ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ (ಭಾಗ-೩೨)
- ಬದುಕಿಗೊಂದು ಸೆಲೆ (ಭಾಗ-೩೩)
- ಬದುಕಿಗೊಂದು ಸೆಲೆ ‘ಪ್ರೀತಿಯ ತೀವ್ರತೆ’ (ಭಾಗ-೩೪)
- ಬದುಕಿಗೊಂದು ಸೆಲೆ ‘ಖಾಲಿ ಕುರ್ಚಿ ಎಂಬ ತತ್ವವೂ…ನಮ್ಮ ಬದುಕೂ’ (ಭಾಗ-೩೫)
- ಬದುಕಿಗೊಂದು ಸೆಲೆ ‘ಒಂದು ಸುತ್ತು….ಋತುಚಕ್ರ ರಜೆಯ ಸುತ್ತ’ (ಭಾಗ-೩೬)
- ಬದುಕಿಗೊಂದು ಸೆಲೆ ‘ಮೌನ ಸಾಧನೆ’ (ಭಾಗ-೩೭)
- ಬದುಕಿಗೊಂದು ಸೆಲೆ ‘ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??’ (ಭಾಗ-೩೮)
- ಬದುಕಿಗೊಂದು ಸೆಲೆ ‘ಮಾಧ್ಯಮಗಳ ವೈಭವೀಕೃತ ಸುದ್ದಿ ನಿರೂಪಣೆ…. ಒಂದು ವಿವೇಚನೆ’ (ಭಾಗ-೩೯)
- ಬದುಕಿಗೊಂದು ಸೆಲೆ ‘ಎಳ್ಳು ಅಮಾವಾಸ್ಯೆ…ಚರಗ ಚೆಲ್ಲುವ ಹಬ್ಬನೆ’ (ಭಾಗ-೪೦)
- ಬದುಕಿಗೊಂದು ಸೆಲೆ ‘ಅವರಿವರನ್ನು ಕಂಡು ಕರುಬದಿರಿ… ನೀವು ನೀವಾಗಿಯೇ ಇರಿ’ (ಭಾಗ-೪೧)
- ಬದುಕಿಗೊಂದು ಸೆಲೆ ‘ಶ್ರೀ ಸಿದ್ದೇಶ್ವರ ಸ್ವಾಮಿಗಳು’ (ಭಾಗ-೪೨)
- ಬದುಕಿಗೊಂದು ಸೆಲೆ ‘ಯುವ ಜನತೆಗೆ ಹಣಕಾಸಿನ ಕುರಿತಾದ ಚಿನ್ನದಂತಹ ನಿಯಮಗಳು’ (ಭಾಗ-೪೩)
- ಬದುಕಿಗೊಂದು ಸೆಲೆ ‘ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಹೇಗೆ ?’ (ಭಾಗ-೪೪)
- ಬದುಕಿಗೊಂದು ಸೆಲೆ ‘ದಾಂಪತ್ಯದಲ್ಲಿ ಸಮಾನತೆ ’ (ಭಾಗ-೪೫)
- ಬದುಕಿಗೊಂದು ಸೆಲೆ ‘ಹೀಗೊಂದು ವಧು/ವರ ಪರೀಕ್ಷೆ ’ (ಭಾಗ-೪೭)
- ಬದುಕಿಗೊಂದು ಸೆಲೆ ‘ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು’ (ಭಾಗ-೪೮)
- ಬದುಕಿಗೊಂದು ಸೆಲೆ ‘ಹಕ್…… ತನ್ನ ಹಕ್ಕಿಗಾಗಿ ಹೆಣ್ಣು ಮಗಳ ಹೋರಾಟ’ (ಭಾಗ-೪೯)
- ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ
