ತಗ್ಗಿ-ಬಗ್ಗಿ ಬಾಳಿದರೆ ಬಾಳಿಗೊಂದು ಬೆಲೆ !… ಕವಿ ಡಾ. ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬದುಕು ಕ್ಷಣಿಕ
ನೀರ ಮೇಲಿನ ಗುಳ್ಳೆ !
ನಿನ್ನೆ ಇದ್ದವರು ಇಂದಿಲ್ಲ
ಅಹಂಮಿಕೆ ಬಿಟ್ಟುಬಿಡಿ !
ಎಲ್ಲರೂ ನನ್ನವರೆಂದೇ ಭಾವಿಸಿಬಿಡಿ
ಕಾಲಕ್ಕೆ ರೆಕ್ಕೆಗಳಿವೆ !
ಅದು ವೇಗವಾಗಿ ಹಾರುತ್ತದೆ
ಸಿರಿತನ-ಬಡತನ
ಪ್ರಶಸ್ತಿ-ಪುರಸ್ಕಾರ
ಮೇಲು-ಕೀಳು
ಎಲ್ಲವೂ ಅಶಾಶ್ವತ !
ಇರುವಷ್ಟುದಿನ
ಹೊಂದಿಕೊಂಡು ಬಾಳಿ !
ಕಾಲನ ಕರೆ ಯಾರಿಗೆ
ಯಾವಾಗ ಬರುತ್ತದೆಯೋ ಗೊತ್ತಿಲ್ಲ !
ಹೋದಮೇಲೆ
ನೀವು ಮಾಡಿದ ಒಳ್ಳೆಯ
ಕಾರ್ಯಗಳಷ್ಟೇ ಉಳಿಯುತ್ತವೆ !
ಆಗಸವನ್ನು ನೋಡದೆ
ನೆಲವನ್ನು ನೋಡಿ ನಡೆಯಿರಿ !
ತಗ್ಗಿ-ಬಗ್ಗಿ ಬಾಳಿದರೆ
ಬಾಳಿಗೊಂದು ಬೆಲೆ !
ಇಲ್ಲದಿರೆ…
ಬದುಕನ್ನು ನೀವು
ಮಾಡಿದಂತೆ ಕೊಲೆ !!
- ಡಾ. ಸಿದ್ದು ಸಾವಳಸಂಗ, ತಾಜಪುರ ( ಕಾವ್ಯನಾಮ – ಚಿರಂಜೀವಿ ) ಹಿರಿಯ ಕನ್ನಡ ಉಪನ್ಯಾಸಕರು ಹಾಗೂ ಸಾಹಿತಿಗಳು, ವಿಜಯಪುರ
