ಸಸ್ಯ ಬಲಾ ಮಹತ್ವದ ಕುರಿತು ನಾಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
ಸಾಧಾರಣವಾಗಿ ಹೆಚ್ಚು ನಿಗಾ ಇಲ್ಲದೆ ರಸ್ತೆ ಅಂಚಿನಲ್ಲಿ ಬೆಳೆಯಬಹುದಾದ ಸಸ್ಯ ಬಲಾ. ಇದರಲ್ಲಿ ಮೂರು ವಿಧ ಬಲ, ಅತಿ ಬಲ, ಮಹಾ ಬಲ, ಒಟ್ಟಾರೆ ಮೂರು ಸಸ್ಯಗಳಲ್ಲೂ ಒಂದಿಷ್ಟು ಔಷಧೀಯ ಗುಣಗಳಲ್ಲಿ ಹೊಂದಾಣಿಕೆ ಇದೆ. ಇದರ ಬೇರು ಕಾಂಡ ಎಲೆ ಹೆಚ್ಚು ಔಷಧೀಯ ಗುಣ ಉಳ್ಳದ್ದಾಗಿದೆ. ಹೊರಗಿನಿಂದ ಚರ್ಮಕ್ಕೆ ಹಚ್ಚಲು ಮತ್ತು ಹೊಟ್ಟೆಗೆ ತೆಗೆದುಕೊಳ್ಳಲು ಎರಡು ರೀತಿಯ ಉಪಯೋಗವಿದೆ.
1) ಬೇರನ್ನು ಕಿತ್ತು ಎಳ್ಳೆಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಕುದಿಸಿ ನೀರಿನ ಅಂಶ ಆರಿದ ನಂತರ ಬಾಟಲ್ ತುಂಬಿ ಇಟ್ಟುಕೊಂಡರೆ ಬೇಗನೆ ಹಾಳಾಗುವುದಿಲ್ಲ. ಬಳಸುವಾಗ ಸ್ವಲ್ಪ ಬಚ್ಚೆ ಗೆ ಮಾಡಿ ಹಚ್ಚುವುದರಿಂದ ಮಂಡಿ ನೋವು ಗುಣವಾಗುತ್ತದೆ.
2) ಬೇರನ್ನು ಅರೆದು ಕಣ್ಣಿಗೆ ಅಂಜನ ಇಟ್ಟರೆ ಕಣ್ಣಿನ ರೋಗಗಳು ಗುಣವಾಗುತ್ತದೆ.
3) ಬೇರಿನ ಕಷಾಯ ಪ್ರದರ ಹೃದಯ ಶ್ವೇತ ರೋಗಗಳಲ್ಲಿ ಕ್ಷಯ ರೋಗಗಳಲ್ಲಿ ಬಲಹೀನತೆಯಲ್ಲಿ ಅನುಕೂಲವಾಗುತ್ತದೆ.
4) ಬೇರು ಮತ್ತು ಎಲೆ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಜ್ವರ ಮತ್ತು ಮೂತ್ರ ತಡೆಗಳು ಗುಣವಾಗುತ್ತದೆ.
5) ಎಲೆಗಳ ಕಷಾಯ ಮಾಡಿ ಕುಡಿಯುವುದರಿಂದ ದೇಹ ತಂಪಾಗುತ್ತದೆ.
6) ಪ್ರತಿ ದಿನ ಇದನ್ನು ಉಪಯೋಗಿಸುವುದರಿಂದ ಜಠರ ರೋಗಗಳು ಗುಣವಾಗುತ್ತದೆ.
7) ಎಲೆಗಳನ್ನು ಪೇಸ್ಟ್ ಮಾಡಿ ಬಾಯು ಹುಣ್ಣಿಗೆ ಹಚ್ಚುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ.
8) ಎಲೆಗಳನ್ನು ಅರೆದು ನಾಯಿ ಕಚ್ಚಿರುವ ಜಾಗದಲ್ಲಿ ಹಚ್ಚುವುದರಿಂದ ನಾಯಿಯ ವಿಷ ಇಳಿಯುತ್ತದೆ
9) ಸೊಪ್ಪು ಬೇರು ಕಾಂಡ ಎಲ್ಲವನ್ನು ಸೇರಿಸಿ ತೆಗೆದ ಸಾರಕ್ಕೆ ವಿಶೇಷ ಮೂಲಿಕೆ ಸೇರಿಸಿ ಮಾಡುವ ಔಷಧಿ ಶೀಘ್ರ ಸ್ಕಲನವನ್ನು ಗುಣಪಡಿಸುತ್ತದೆ.
- ಸುಮನಾ ಮಳಲಗದ್ದೆ