ಕರುಳಿನ ಸೆಳೆತದ ‘ಬಾಂಧವ್ಯ’

ಬಾಂಧವ್ಯ ಇದು ಸುಮಾ ಉಮೇಶ್ ಅವರ ಚೊಚ್ಚಲ ಕೃತಿಯಾಗಿದ್ದು, ಕಾದಂಬರಿಯಲ್ಲಿ ನೋವಿದೆ, ಸಂತೋಷವಿದೆ, ಕುಟುಂಬದ ಮೌಲ್ಯವಿದೆ, ತಾಯಿ ಮಗುವಿನ ಬಾಂಧವ್ಯವಿದೆ, ರೋಚಕ ತಿರುವುಗಳಿವೆ, ಓದುಗನಿಗೆ ಲೇಖಕಿಯ ಮೊದಲ ಪುಸ್ತಕವೆಂದು ಅನ್ನಿಸುವುದಿಲ್ಲ. ಕಾದಂಬರಿ ಕುರಿತು ಇನ್ನಷ್ಟು ವಿಷಯಗಳನ್ನು ನಾನು ನಿಮ್ಮ ಮುಂದೆ ಹಂಚಿಕೊಂಡಿದ್ದೇನೆ ತಪ್ಪದೆ ಮುಂದೆ ಓದಿ – ಶಾಲಿನಿ ಹೂಲಿ ಪ್ರದೀಪ್…

ಪುಸ್ತಕ : ಬಾಂಧವ್ಯ
ಲೇಖಕಿ:ಸುಮಾ ಉಮೇಶ್
ಪ್ರಕಾರ : ಕಾದಂಬರಿ
ಪ್ರಕಾಶನ : ಶ್ರೀನಿಧಿ ಪಬ್ಲಿಕೇಶನ್
ಬೆಲೆ : 200
ಪುಟಗಳು : 192
ಖರೀದಿಗಾಗಿ : 40998646

ಸುಮಾ ಉಮೇಶ್ ಅವರ ಸಾಕಷ್ಟು ಲೇಖನಗಳನ್ನು ನಾನು ಈ ಹಿಂದೆ  ಓದಿದ್ದೇನೆ. ಅವರನ್ನು ನಾನು ಹಾಸ್ಯ ಬರಹಗಾರ್ತಿ ಎಂದೇ ಪರಿಗಣಿಸಿದ್ದೆ. ಅವರ ಲೇಖನಗಳಲ್ಲಿನ ಹಾಸ್ಯ ಚಟಾಕಿಗಳು ಓದುಗನ ಮುಖದಲ್ಲಿ ನಗು ಮೂಡಿಸುತ್ತಿತ್ತು. ಅವರ ‘ಬಾಂಧವ್ಯ’ ಕಾದಂಬರಿ ನನ್ನ ಕೈ ಸೇರಿದಾಗ ಇದರಲ್ಲಿಯೂ ಹಾಸ್ಯದ ತಿಳಿ ಇರುತ್ತೆ ಎಂದೇ ಭಾವಿಸಿದ್ದೆ, ಆದರೆ ಕಾದಂಬರಿ ಗಾಂಭೀರ್ಯದ ಕಡೆ ಕತೆ ಸಾಗಿತು.

ಬಾಂಧವ್ಯ ಕಾದಂಬರಿ ಹೆಣ್ಣು ಮಗಳಿಂದ ರಚಿಸಲ್ಪಟ್ಟಿರುವಂತಹ ಹೆಣ್ಣುಮಕ್ಕಳ ನಡುವಿನ ಬಾಂಧವ್ಯದ ಕತೆ ಎಂದರೆ ತಪ್ಪಾಗಲಾರದು. ಎರಡು ಜಡೆ ಸೇರಿದರೆ ಅಡುಗೆ ಮನೆ ಹೊತ್ತಿ ಉರಿಯುತ್ತೆ ಅನ್ನುವ ಮಾತಿಗೆ ತದ್ದುವಿರುದ್ಧವಾಗಿ ಈ ಕಾದಂಬರಿಯ ಕತೆ ಸಾಗುತ್ತದೆ.

ಕತೆಯಲ್ಲಿ ಬರುವ ಅನ್ನಪೂರ್ಣ, ನಿಂಗಿ ಮತ್ತು ಸರಸಮ್ಮನ ಪಾತ್ರಗಳು ಒಂದಕ್ಕೊಂದು ಕತೆಗೆ ಪೂರಕವಾಗುತ್ತಾ ಹೆಣ್ಣು ತ್ಯಾಗಮಹಿ, ಧೈರ್ಯವಂತೆ, ಛಲವಾದಿ ಎಂದು ತೋರಿಸುತ್ತಾ ಹೋಗುತ್ತದೆ.

ಹೆರಿಗೆ ಸಂದರ್ಭದಲ್ಲಿ ಎರಡು ಮಗು ಕಳೆದುಕೊಂಡ ಅನ್ನಪೂರ್ಣ, ಸರಸಮ್ಮನ ಮಾತಿಗೆ ಕಟ್ಟು ಬಿದ್ದು ಕೆಲಸದ ನಿಂಗಿ, ತಾನು ಹೆತ್ತ ಕರಳುಕುಡಿಯನ್ನು ಅನ್ನಪೂರ್ಣನ ಒಡಿಲಲ್ಲಿ ಇಡುತ್ತಾಳೆ. ಬರಿದಾದ ನಿಂಗಿ ಮಡಿಲಿಗೆ ಆ ಕತ್ತಲು ರಾತ್ರಿಯಲ್ಲಿ ಒಂದು ಮಗು ಬಂದು ಸೇರಿಕೊಳ್ಳುತ್ತದೆ. ಅನ್ನಪೂರ್ಣಳ ಮಗು ಮತ್ತು ನಿಂಗಿಯ ಮಗು ಬೆಳೆದು ದೊಡ್ಡವರಾಗುತ್ತಾರೆ. ಮುಂದೆ ಅನ್ನಪೂರ್ಣಳ ಮಗು ನಿಂಗಿಯದು ಅಂತ ಗೊತ್ತಾಗುತ್ತಾ ಅಥವಾ ಇಲ್ಲವಾ?… ನಿಂಗಿ ಮಡಿಲಿಗೆ ಬಂದ ಆ ಅಪರಿಚಿತ ಮಗು ಯಾರದು?… ಎಲ್ಲವೂ ರೋಚಕವಾಗಿ ತಿರುವನ್ನು ಪಡೆದುಕೊಳ್ಳುತ್ತದೆ. ಓದುಗರು ಪುಸ್ತಕ ಕೊಂಡುಕೊಂಡು ಓದಲಿ ಎನ್ನುವ ಉದ್ದೇಶಕ್ಕೆ ನಾನು ಇಲ್ಲಿ ಕತೆಯನ್ನು ಪೂರ್ತಿಯಾಗಿ ಅನಾವರಣ ಮಾಡುವುದಿಲ್ಲ. ಸುಮಾ ಕಾದಂಬರಿಯಲ್ಲಿ ಬರುವ ತಿರುವುಗಳನ್ನು ಸುಂದರವಾಗಿ ಹೆಣೆಡಿದ್ದಾರೆ. ಓದುಗರಿಗೆ ಕಾದಂಬರಿ ಓದುವಾಗ ಕತೆಯಲ್ಲಿ ಕುತೂಹಲ ಮೂಡುತ್ತದೆ.

ಹಿಂದಿನ ಕಾಲದ ಲೇಖಕರ ಕಾದಂಬರಿಯಲ್ಲಿ ಕೌಟುಂಬಿಕ ಸುಂದರ ಕತೆಗಳು ಸಿಗುತ್ತಿತ್ತು, ಅವೇ ಸಿನಿಮಾಗಳಾಗುತ್ತಿತ್ತು. ಮೌಲ್ಯಧಾರಿತ ಕತೆಯಿಂದ ಕುಟುಂಬದಲ್ಲಿನ ಪ್ರೀತಿಯನ್ನು ಕಾಣಬಹುದಿತ್ತು. ಆದರೆ ಇಂದು ಕಾದಂಬರಿ ಬರೆಯುವರು ಕೂಡಾ ಭಾವನೆಗಳಿಗೆ ಒತ್ತು ನೀಡುತ್ತಿಲ್ಲ, ಧಾರವಾಹಿಗಳಲ್ಲಿ ಹೆಣ್ಣು ಮನೆ ಹಾಳಿಯಾಗಿದ್ದಾಳೆ, ಮಚ್ಚುಗಳಿಲ್ಲದೆ ಸಿನಿಮಾಗಳು ಆಗುತ್ತಿಲ್ಲ. ಇತ್ತದ್ದನ್ನೇ ನೋಡಿದ ಪ್ರೇಕ್ಷಕ, ಓದುಗನಲ್ಲಿ ಭಾವನಾತ್ಮಕ ಸಂಬಂಧಗಳು ಸತ್ತು ಹೋಗಿವೆ ಈ ಸಂದರ್ಭದಲ್ಲಿ ಭಾವನೆಗಳನ್ನು, ಹೆಣ್ಣಿನ ಮೇಲೆ ಗೌರವ ಹುಟ್ಟಿಸುವ ಕಾದಂಬರಿಗಳು, ಸಿನಿಮಾಗಳು ಬರಬೇಕಿದೆ. ಆ ದೃಷ್ಟಿಯನ್ನು ಇಟ್ಟುಕೊಂಡು ನೋಡಿದಾಗ ಸುಮಾ ಅವರ ‘ಬಾಂಧವ್ಯ’ ಕಾದಂಬರಿ ಹೆಣ್ಣಿನ ಮಧ್ಯೆ ಒಳ್ಳೆ ಬಾಂಧವ್ಯವನ್ನು ಬೆಸೆಯುತ್ತದೆ.

ಸುಮಾ ಅವರು ಓದಿದ್ದು ಆಂಗ್ಲ ಮಾಧ್ಯಮದಲ್ಲಿ ಮತ್ತು ಬಿಕಾಂ ಪದವೀಧರರರು. ಅವರ ಕನ್ನಡದ ಮೇಲಿನ ಪ್ರೇಮಕ್ಕೆ ಅವರ ಚೊಚ್ಚಲ ಕೃತಿ ಬಾಂಧವ್ಯ ಸಾಕ್ಷಿಯಾಗಿದೆ. ಭಾಷೆಯ ಮೇಲೆ ಒಳ್ಳೆ ಹಿಡಿತವಿದೆ. ಆದರೆ ಚಹಾದ ಜೊತೆ ಚೂಡಾ ತರ ಕಾದಂಬರಿ ಮಧ್ಯೆದಲ್ಲಿ ಹಾಸ್ಯಕ್ಕೆ ದಾರಿ ಮಾಡಿಕೊಟ್ಟಿದ್ದರೆ ಸುಮಾ ಅವರು ಇನ್ನಷ್ಟು ಎದ್ದು ಕಾಣುತ್ತಿದ್ದರು ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆಯಾಗಿದೆ. ಸುಮಾ ಒಬ್ಬ ಭರವಸೆಯ ಬರಹಗಾರ್ತಿಯಾಗಿದ್ದು, ಅವರಿಂದ ಇನ್ನಷ್ಟು ಕೃತಿಗಳು ಬರಲಿ ಎಂದು ಆಕೃತಿಕನ್ನಡದ ಪರವಾಗಿ ಶುಭ ಕೋರುತ್ತೇನೆ.


  • ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW