ಬೆಂಗಳೂರು ನಾಗರತ್ನಮ್ಮ ಅವರ ಬದುಕನ್ನು ಆಧರಿಸಿದ ನಾಟಕವನ್ನು ಖ್ಯಾತ ನಾಟಕಕಾರ ಹೂಲಿಶೇಖರ್ ಮತ್ತು ಪ್ರತಿಭಾ ನಂದಾ ಅವರು ರಚಿಸಿದ್ದು, ಅದನ್ನು ಸಿನಿಮಾ ನಿರ್ದೇಶಕ ಟಿ ಎಸ ನಾಗಾಭರಣ ಅವರು ನಿರ್ದೇಶನ ಮಾಡಿದ್ದಾರೆ. ಈ ನಾಟಕವು ರಂಗದ ಮೇಲೆ ಸಾಕಷ್ಟು ಪ್ರದರ್ಶನವನ್ನು ಕಂಡಿದೆ. ಕೊರೋನಾಯಿಂದಾಗಿ ಪ್ರದರ್ಶನ ಸದ್ಯಕ್ಕೆ ನಿಂತಿದ್ದು, ಆದಷ್ಟು ಬೇಗ ಮತ್ತೆ ಶುರುವಾಗಲಿದೆ. ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ ಅವರ ಜೀವನಸಾರವನ್ನು ಈ ನಾಟಕ ಎಳೆಎಳೆಯಾಗಿ ಬಿಚ್ಚಿಟ್ಟಿದೆ…
ತ್ಯಾಗರಾಜ ಆರಾಧನೆ ಸಂಗೀತ ಪ್ರಿಯರೆಲ್ಲರೂ ಅತ್ಯಂತ ಕಾತರದಿಂದ ಕಾಯುವ ಮತ್ತು ಅರ್ಪಣೆ ಭಾವದಲ್ಲಿ ಭಾಗವಹಿಸುವ ಕಾರ್ಯಕ್ರಮ. ಅದರಲ್ಲೂ ತಿರುವಾಯುರ್ ನಲ್ಲಿ ನಡೆಯುವ ತ್ಯಾಗರಾಜ ಆರಾಧನೆಯಲ್ಲಿ ಭಾಗವಹಿಸಿ, ತಮ್ಮ ಸಂಗೀತದ ಸೇವೆ ಸಲ್ಲಿಸುವ ಅವಕಾಶಕ್ಕೆ ಎಲ್ಲ ಸಂಗೀತಕಾರರು ಕಾಯುತ್ತಿರುತ್ತಾರೆ. ಆದರೆ ಅಲ್ಲಿಯೂ ಮೊದಲು ಮಹಿಳಾ ಸಂಗೀತಕಾರರಿಗೆ ಈ ಅವಕಾಶ ಇರಲಿಲ್ಲ. ಆಲ್ಲದೆ ಆ ಪುಣ್ಯ ಸಮಾಧಿಯನ್ನು ನವೀಕರಿಸಿ, ಅಲ್ಲಿ ದೇವಸ್ಥಾನವನ್ನು ಕಟ್ಟಿ, ಶಾಶ್ವತವಾಗಿ ತ್ಯಾಗರಾಜ ಆರಾಧನೆ ನಡೆಯುವ ರೀತಿ ಮಾಡಿದವರಿಗೆ ಅಲ್ಲಿ ಮಹಿಳೆ ಎಂದು ಅವಕಾಶ ಕೊಟ್ಟಿರಲಿಲ್ಲ. ಮುಂದೆ ಅವರಿಗೂ ಅಲ್ಲಿ ಅವಕಾಶ ಸಿಕ್ಕಿತು. ಆ ಮಹಿಳೆಯೇ #ಬೆಂಗಳೂರು_ನಾಗರತ್ನಮ್ಮ.

ನಾಗರತ್ನರವರು ಸೆಪ್ಟೆಂಬರ್ ೩,೧೮೭೮ ರಲ್ಲಿ ಪುಟ್ಟು ಲಕ್ಷ್ಮೀ ಮತ್ತು ವಕೀಲ್ ಸುಬ್ಬ ರಾವ್ ರವರ ಮಗಳಾಗಿ ನಂಜನಗೂಡ್ ನಲ್ಲಿ ಜನಸಿದರು. ತಾಯಿಯ ಪೂರ್ವಿಕರು #ಮೈಸೂರು_ಸಂಸ್ಥಾನ ದಲ್ಲಿ ಹಾಡುಗಾರರಾಗಿ ಸೇವೆ ಸಲ್ಲಿಸಿದ್ದರು. ನಾಗರತ್ನಮ್ಮ ಸಣ್ಣವರಿದ್ದಾಗ ಅವರ ತಂದೆ ಇವರನ್ನು ಬಿಟ್ಟಾಗ(abandoned), ಸಂಸ್ಕೃತ ವಿದ್ವಾಂಸರಾದರ ಶಾಸ್ತ್ರಿಗಳು ಇವರನ್ನು ನೋಡಿಕೊಂಡು ಸಂಸ್ಕೃತ ಮತ್ತು ಸಂಗೀತ ಕಲಿಸಿದರು. ಆದರೆ ಅವರು ಐದು ವರಷಗಳಾದಾಗ ದೇವದಾಸಿಯಾಗ ಬೇಕಾಯಿತು. ನಂತರ ಅವರ ಗುರುಗಳು ಬಿಟ್ಟಾಗ (abandoned) ಅವರು ಮೈಸೂರು ಬಿಟ್ಟು ತಮ್ಮ ಚಿಕ್ಕಪ್ಪ ವೆಂಕಟಸ್ವಾಮಿಯಪ್ಪರವರ ಆಶ್ರಯಕ್ಕೆ ಬಂದರು. ಅವರು ಏನೇ ಆದರೂ ಓದನ್ನು ಬಿಡಲಿಲ್ಲ. ಕನ್ನಡ, ತೆಲುಗು, ಇಂಗ್ಲಿಷ್ ಕಲೆತರು. ಸಂಗೀತ ಮತ್ತು ನಾಟ್ಯದಲ್ಲಿ ಪರಿಣಿತಿ ಪಡೆದರು. ಮುನುಸ್ವಾಮಪ್ಪ ರವರು ಇವರಿಗೆ ಕರ್ನಾಟಕ ಸಂಗೀತ ಕಲಿಸಿದರು. ಅವರು ತಮ್ಮ ಹದಿನೈದನೇಯ ವಯಸ್ಸಿನಲ್ಲಿ ಒಬ್ಬ ವಯೊಲಿನ್ ಬಾರಿಸುವವರಾಗಿಯೂ ಮತ್ತು ನಾಟ್ಯದಲ್ಲಿ ರಂಗಪ್ರವೇಶ ಮಾಡಿದರು.
ತಮ್ಮ ಕಾಲದ ಅತಿ ಉತ್ತಮ ಸಂಗೀತಕಾರರಾಗಿ ಅವರು ಹೊರಹೊಮ್ಮಿದರು. ಮೈಸೂರು ಮಹಾರಾಜ ಜಯಚಾಮರಾಜೆಂದ್ರ ಓಡೆಯರ್ ಇವರನ್ನು ಆಸ್ಥಾನ ವಿದೂಷಿ ಆಗಿ ನೇಮಕ ಮಾಡಿದರು. ರಾಜರ ಮರಣ ನಂತರ, ಇವರು ಬೆಂಗಳೂರಿಗೆ ಬಂದು ಸಂಗೀತ ಮತ್ತು ನಾಟ್ಯದಲ್ಲಿ ಹೆಸರು ಮಾಡಿದರು.
ನಂತರ ಜಸ್ಟಿಸ್ ಶ್ರೀ ನರಹರಿ ರಾವ್ ರವರ ಸಲಹೆಯಂತೆ ಮದ್ರಾಸ್ ಗೆ ಹೋದರು. ಅಲ್ಲಿ ಉತ್ತಮ ಸಂಗೀತಕಾರರಾಗಿ “ಬೆಂಗಳೂರು ನಾಗರತ್ನಮ್ಮ” ಎಂದು ಹೆಸರು ಮಾಡಿದರು. ಇವರು ವರಮಾನ ಇಲಾಖೆಗೆ income tax ಪಾವತಿ ಮಾಡಿದ ಮೊದಲ ಮಹಿಳಾ artist ಆಗಿದ್ದರು.
ಆಗ ಅವರ ಕನಸಿನಲ್ಲಿ ತ್ಯಾಗರಾಜರಿಗೆ ಒಂದು ಸ್ಮಾರಕ ಮಾಡಬೇಕೆಂಬ ಪ್ರೇರಣೆ ಆಗುತ್ತದೆ. ಅಗ ಅವರ ಗುರುಗಳ ಮಾತಿನಂತೆ ತ್ಯಾಗರಾಜ ಸಮಾಧಿ ಹತ್ತಿರ ಇರುವ ಜಾಗವನ್ನು ಸ್ವಂತ ದುಡ್ಡಿನಲ್ಲಿ ತೆಗೆದುಕೊಂಡು ಅಲ್ಲಿ ತ್ಯಾಗರಾಜರ ಮೂರ್ತಿ ಇರುವ ದೇವಸ್ಥಾನ ೧೯೨೧ ರಲ್ಲಿ ಸ್ಥಾಪಿಸಿ, ಅಲ್ಲಿ ಯಾವಾಗಲೂ ತ್ಯಾಗರಾಜರ ಆರಾಧನೆ ನಡೆಯುವ ವ್ಯವಸ್ಥೆ ಮಾಡಿದರು. ಆದರೂ ಇವರಿಗೆ ಹೆಣ್ಣು ಎಂದು ಹಾಡಲು ಅಲ್ಲಿ ಅವಕಾಶ ಸಿಗಲಿಲ್ಲ. ಇವರು ಕೇವಲ ಹರಿಕಥೆ ಮಾಡುತ್ತೇನೆ ಎಂದರು ಅವಕಾಶ ಕೊಡಲಿಲ್ಲ. ಇವರು ಆ ದೇವಸ್ಥಾನದ ಹಿಂಬದಿಯಲ್ಲಿ ತಮ್ಮ ಸಂಗೀತದ ಸೇವೆ ಸಲ್ಲಿಸುತ್ತಿದ್ದರು. ಇವರ ಬಿಡದ ಪ್ರಯತ್ನದ ನಂತರ ೧೯೪೧ ರಲ್ಲಿ ಗಂಡಸರು ಮತ್ತು ಹೆಂಗಸರು ಒಟ್ಟಿಗೆ ಸಂಗೀತದ ಸೇವೆ ಸಲ್ಲಿಸುವ ಪದ್ದತಿ ಬಂತು.

ಇವರು ಬರೆದ ರಾಧಿಕಾ ಸ್ವಾಂತನಮ್ ಎಂಬ ತೆಲುಗು ಪುಸ್ತಕ ದೇವದಾಸಿಯಾರ ವಿಷಯದ ಬಗ್ಗೆ ಇದ್ದು ಅದನ್ನು ಸರ್ಕಾರ ನಿಷೇಧ ಮಾಡಿತು. ಸ್ವಾತಂತ್ರ್ಯ ಬಂದ ನಂತರ ಆ ನಿಷೇಧ ಹಿಂತೆಗೆದುಕೊಳ್ಳಲಾಯಿತು.
೧೯೫೨ ರಲ್ಲಿ ನಾಗರತ್ನಮ್ಮನವರು ಕಾಲವಶರಾದರು. ಅವರಿಗೆ #ತ್ಯಾಗರಾಜರ_ಸಮಾಧಿಯ ಹತ್ತಿರದಲ್ಲಿ ಒಂದು ಸ್ಮಾರಕ ಕಟ್ಟಲಾಗಿದೆ.
- ಎನ್.ವಿ.ರಘುರಾಂ. (ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್ ), ಕ.ವಿ.ನಿ.ನಿ, ಬೆಂಗಳೂರು)
